ಸ್ಯಾಂಡಲ್ ವುಡ್ ನಲ್ಲಿ ಹವಾ ಎಬ್ಬಿಸಿದೆ “ಹವಾಲ”

1

ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿರುವ ಹವಾಲ ಸಿನಿಮಾ ಇದೇ ಜುಲೈ 31ಕ್ಕೆ ತೆರೆಕಾಣುತ್ತಿದೆ. ಕೊರೊನಾ ನಡುವಲ್ಲೇ ಬಿಡುಗಡೆಯಾಗಿರುವ ಸಿನಿಮಾದ ಹಾಡು ಹಾಗೂ ಟ್ರೈಲರ್ ಸಖತ್ ಸೌಂಡ್ ಮಾಡ್ತಿದೆ.

ಆ್ಯಪಲ್ಸ್ ಆ್ಯಂಡ್ ಪಿಯರ್ಸ್ ಫಿಲ್ಮಿ ಮಿಸ್ಟಿಕ್ಸ್” ಬ್ಯಾನರ್ ನಡಿ ಮೂಡಿಬಂದಿರುವ ಸಿನಿಮಾವನ್ನು ಶಶಿಕುಮಾರ್‌ ಪಂಡಿತ್ ಅರ್ಪಿಸುತ್ತಿದ್ದಾರೆ. ಕರಾವಳಿಯ ಉದ್ಯಮಿ ಪ್ರವೀಣ್ ಕುಮಾರ್ ಶೆಟ್ಟಿ ಪುತ್ತೂರು ಬಂಡವಾಳ ಹೂಡಿರುವ “ಹವಾಲ” ಸಿನಿಮಾದ ಕನ್ನಡ ಮತ್ತು ತಮಿಳು ಎರಡೂ ಭಾಷೆಗಳ ಟ್ರೈಲರ್ ಗಳು ಈಗಾಗಲೇ ಬಿಡುಗಡೆಗೊಂಡಿದೆ.

ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಹವಾಲ ಸಿನಿಮಾದ ಟ್ರೈಲರ್ ಬಿಡುಗಡೆಗೊಳಿಸಿ ಸಿನಿಮಾ ಯಶಸ್ಸಿಗೆ ಶುಭ ಹಾರೈಸಿದ್ದಾರೆ. ಟ್ರೆಂಡ್ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿರುವ ಸಿನಿಮಾದ ಹಾಡು ಹಾಗೂ ಟ್ರೈಲರ್ ಗಳು ಸಿನಿಪ್ರಿಯರಿಗೆ ಸಾಕಷ್ಟು ಇಷ್ಟವಾಗಿದೆ.

ಕಿರುತೆರೆಯಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸಿದ್ದ ಅಗ್ನಿಸಾಕ್ಷಿ ಕಿಶೋರ್ ಖ್ಯಾತಿಯ ಅಮಿತ್ ರಾವ್ ಹವಾಲ ಸಿನಿಮಾಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.

ಚೆನ್ನೈ ಮೂಲದ ಎಸ್.ಪಿ. ಸೆಲ್ವಂ ಜೊತೆ ರಾಜ್ ಕೃಷ್ಣ ಉಡುಪಿ ಸಹನಿರ್ದೇಶಕರಾಗಿ ದುಡಿದಿದ್ದಾರೆ. ಸಂತೋಷ್ ಕೊಲ್ಯ ಮತ್ತು ಹೆನ್ಲಿ ವಿಶಾಲ್ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಹವಾಲ ಸಿನಿಮಾ ವಿಭಿನ್ನವಾಗಿ ಮೂಡಿಬಂದಿದೆ.

ತುಳುನಾಡಿನ ಕಲೆ, ಸಂಸ್ಕೃತಿ, ಸೊಗಡನ್ನು ಅನಾವರಣಗೊಳಿಸುವ ಹವಾಲ ಸಿನಿಮಾದಲ್ಲಿ ಇಬ್ಬರು ನಾಯಕಿಯರಿದ್ದು ಕಮಲಿ ಧಾರವಾಹಿ ಖ್ಯಾತಿಯ ಅಮೂಲ್ಯ ಗೌಡ ಹಾಗೂ ಕಿರುತೆರೆ ನಟಿ ಸಹನಾ ಪೂಜಾರಿ ಬಣ್ಣ ಹಚ್ಚಿದ್ದಾರೆ.

ಹವಾಲ ಸಿನಿಮಾದಲ್ಲಿ ಐಟಂ ಸಾಂಗ್ ಕಿಕ್ಕೇರಿಸುತ್ತಿದೆ. ಬಾರ್ ವೊಂದರ ಸನ್ನಿವೇಶದಲ್ಲಿ ಮೂಡಿಬಂದಿರುವ ಯೇ ಅಯಿ ಎಮ್ಮಾಯಿಯೋ ಸಾಂಗ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಮದ್ಯಪ್ರಿಯರಿಗೆ ಸಾಂಗ್ ನಶೆಯೇಸಿರುವಂತಿದೆ.

ಸಿನಿಮಾದಲ್ಲಿರುವ ರೋಮ್ಯಾಂಟಿಕ್ ಹಾಡು ಕೂಡ ಅದ್ಬುತವಾಗಿ ಮೂಡಿಬಂದಿದೆ. ರಾಪ್ ಸ್ಟೈಲ್ ಅಲ್ಲಿರುವ ಹಾಡು ಕೇಳುಗರಿಗೆ ಇಷ್ಟವಾಗೋದ್ರಲ್ಲಿ ಅನುಮಾನವೇ ಇಲ್ಲಾ.

ಸೂರ್ಯೋದಯ ಪೆರಂಪಳ್ಳಿ ಭೂಗತ ಲೋಕದ ಡಾನ್ ಪಾತ್ರದಲ್ಲಿ ಮಿಂಚಿದ್ರೆ, ಶ್ರೀನಾಥ್ ವಶಿಷ್ಠ, ಕಾಮಿಲ್ ಷೇಕ್ ಮುಂಬೈ, ಪ್ರವೀಣ್ ಶೆಟ್ಟಿ, ಸಂತೋಷ್ ಕೊಲ್ಯ, ಕಿಶೋರ್ ಕುಂಪಲ ಹಾಗೂ ಅರುಣ್ ಶೆಟ್ಟಿ ಜೆಪ್ಪು ಅಭಿನಯಿಸಿದ್ದಾರೆ. ಟಪ್ಪಾಂಗುಚ್ಚಿ, ರೊಮ್ಯಾಂಟಿಂಗ್ ಹಾಡುಗಳ ಜೊತೆಗೆ ರುದ್ರದೇವ ಧರೆಗೆ ಬಾರೋ ಹಾಡು ಸಿನಿಮಾದ ಬಗ್ಗೆ ಕುತೂಹಲವನ್ನು ಹುಟ್ಟುಹಾಕಿದೆ.

ಹವಾಲ ಸಿನಿಮಾ ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ತೆರೆ ಕಾಣಲಿದ್ದು, ಏಕಕಾಲದಲ್ಲಿ 10 ಓಟಿಟಿ ಪ್ಲ್ಯಾಟ್ ಫಾರ್ಮ್ ಗಳಲ್ಲಿ ವಿಶ್ವದಾದ್ಯಂತ ಬಿಡುಗಡೆ ಗೊಳ್ಳುತ್ತಿರುವ ಮೊಟ್ಟಮೊದಲ ಸಿನಿಮಾ ಎಂಬ ದಾಖಲೆ ಬರೆದ ಹೆಗ್ಗಳಿಕೆಗೆ ಪಾತ್ರವಾಲಿದೆ ಎಂದು ಪಿಆರ್ ಓ ಸಂತೋಷ್ ಕೊಲ್ಯ ತಿಳಿಸಿದ್ದಾರೆ.

1 Comment
  1. Kota Nagaprakash says

    All best amith sir..

Leave A Reply

Your email address will not be published.