Shraddha Kapoor : ಸ್ಟಾರ್‌ ನಟನ ಮಗ ಬೆಂಗಳೂರಿನಲ್ಲಿ ಡ್ರಗ್ಸ್‌ ಕೇಸ್‌ನಲ್ಲಿ ಅರೆಸ್ಟ್‌

Shraddha Kapoor : ಡ್ರಗ್ಸ್​ ಪ್ರಕರಣದಲ್ಲಿ ನಟಿ ಶ್ರದ್ಧಾ ಕಪೂರ್​​ ಸಹೋದರ ಸಿದ್ದಾಂತ್​ ಕಪೂರ್​​ನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಸಿದ್ಧಾಂತ್​ ವೈದ್ಯಕೀಯ ಪರೀಕ್ಷೆಯಲ್ಲಿ ಡ್ರಗ್ಸ್​ ಸೇವನೆ ಮಾಡಿರುವುದು ದೃಢಪಟ್ಟಿದೆ. ಸಿದ್ದಾಂತ್​​ರನ್ನು ಹಲಸೂರು ಠಾಣಾ ಪೊಲೀಸರು ಬಂಧಿಸಿದ್ದಾರೆ.


ಎಂಜಿ ರಸ್ತೆಯ ಟ್ರಿನಿಟಿ ಸರ್ಕಲ್​ನಲ್ಲಿರುವ ದಿ ಪಾರ್ಕ್​ ಎಂಬ 5 ಸ್ಟಾರ್ ಹೋಟೆಲ್​ನ ಮೇಲೆ ಭಾನುವಾರ ರಾತ್ರಿ ದಾಳಿ ನಡೆಸಿದ ಪೊಲೀಸರು ಅನೇಕರನ್ನು ವಶಕ್ಕೆ ಪಡೆದಿದ್ದರು. ಬಳಿಕ ಇವರ ರಕ್ತದ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತಯ. ಪರೀಕ್ಷೆಗೆ ಒಳಗಾದ 35 ಜನರ ಪೈಖಿ ಐವರು ಮಾದಕ ದ್ರವ್ಯ ಸೇವನೆ ಮಾಡಿರುವುದು ದೃಢಪಟ್ಟಿದೆ. ಈ ಗುಂಪಿನ ಭಾಗವಾಗಿದ್ದ ಸಿದ್ಧಾಂತ್​ ಕಪೂರ್​ನನ್ನು ಬಂಧಿಸಿರುವ ಪೊಲೀಸರು ಹಲಸೂರು ಠಾಣೆಯಲ್ಲಿ ಇರಿಸಿದ್ದಾರೆ.

37 ವರ್ಷದ ಸಿದ್ಧಾಂತ್​ ಕಪೂರ್​ ಹಿರಿಯ ನಟ ಶಕ್ತಿ ಕಪೂರ್​ ಪುತ್ರ ಹಾಗೂ ನಟಿ ಶ್ರದ್ಧಾ ಕಪೂರ್​ ಸಹೋದರನಾಗಿದ್ದಾರೆ. ಸಿದ್ಧಾಂತ್​ ಕಪೂರ್​​ ಶೂಟೌಟ್​ @ ವಡಾಲಾ, ಹಸೀನಾ ಪಾರ್ಕರ್​, ಜಸ್ಬಾ ಹಾಗೂ ಕ್ರೈಂಮ್​ ಥ್ರಿಲ್ಲರ್​ ವೆಬ್​ ಸೀರಿಸ್​​ ಆಗಿರುವ ಭೌಕಾಲ್​ನಲ್ಲಿ ಕಾಣಿಸಿಕೊಂಡಿದ್ದಾರೆ .

ಈ ಮೊದಲು ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​​ ಸಾವಿನ ಬಳಿಕ ಡ್ರಗ್​ ಸೇವನೆ ಪ್ರಕರಣದಲ್ಲಿ ನಟಿ ಶ್ರದ್ಧಾ ಕಪೂರ್​ ಹೆಸರು ಕೂಡ ಕೇಳಿ ಬಂದಿತ್ತು. ಈ ಸಂಬಂಧ ಎನ್​ಸಿಬಿ ಬಾಲಿವುಡ್ ನಟಿ ಶ್ರದ್ಧಾ ಕಪೂರ್​ರನ್ನು ವಿಚಾರಣೆಗೆ ಹಾಜರುಪಡಿಸಿತ್ತು. ಆದರೆ ತನಿಖೆ ವೇಳೆ ಶ್ರದ್ಧಾ ಕಪೂರ್​ ಮಾದಕ ದ್ರವ್ಯ ಸೇವನೆ ಸಾಬೀತಾಗದ ಹಿನ್ನೆಲೆಯಲ್ಲಿ ಎನ್​ಸಿಬಿ ಅವರ ಹೆಸರನ್ನು ಕೈ ಬಿಟ್ಟಿತ್ತು . ನಟ ಸಿದ್ಧಾಂತ್​ ಕಪೂರ್​ ಜೊತೆಯಲ್ಲಿ ಅಖೀಲ್​ ಸೋನಿ, ಅಜೋದ್​ ಸಿಂಗ್ ಪಂಜಾಬ್,ಅಖಿಲ್, ಅನಿ, ದರ್ಶನ್​ ಸುರೇಶ್​​ರನ್ನು ಪೊಲೀಸರು ಬಂಧಿಸಿದ್ದರು.

ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಇದನ್ನು ಓದಿ : Umran Malik : ಉಮ್ರಾನ್ ಮಲಿಕ್ ಶರವೇಗದ ಎಸೆತಕ್ಕೆ ರಿಷಬ್ ಪಂತ್ ಬ್ಯಾಟ್ ಪೀಸ್ ಪೀಸ್

ಇದನ್ನೂ ಓದಿ : Teen Shot Mother :ಮೊಬೈಲ್​​ ಹುಚ್ಚಿಗೆ ತಾಯಿಯನ್ನೇ ಕೊಂದ ಬಾಲಕ

Shraddha Kapoor’s brother & shakti kapoor son Siddhant Kapoor was detained in Bangalore for taking drugs

Comments are closed.