ಬರ್ತಡೇಗೇ ಬೆತ್ತಲೇ ಪೋಟೋ ಅಪ್ಲೋಡ್…! ಕೊಟ್ಟ ಮಾತಿನಂತೆ ನಡೆದುಕೊಂಡ ಬಹುಭಾಷಾ ನಟಿ…!!

ಕನ್ನಡದಲ್ಲಿ ಸೂರ್ಯಕಾಂತಿ ಚಿತ್ರದ ಮೂಲಕ ಮುನ್ನಲೆಗೆ ಬಂದ ನಟಿಮಣಿ ಬರ್ತಡೇ ಗೆ ಬೆತ್ತಲೆ ಪೋಟೋ ಅಪ್ಲೋಡ್ ಮಾಡೋದಾಗಿ ಅಭಿಮಾನಿಗಳಿಗೆ ಭರವಸೆ ನೀಡಿದ್ರು.

ಬರಿ ಭರವಸೆ ಮಾತ್ರವಲ್ಲ ನನ್ನ ಬೆತ್ತಲೇ ಪೋಟೋ ನೋಡೋಕೆ ಸ್ವೈಪ್ ಮಾಡಿ ಎಂದಿದ್ದ ಈ ನಟಿ ನಿಜವಾಗಿಯೂ ತಮ್ಮ ಬೆತ್ತಲೆ ಪೋಟೋ ಹಂಚಿಕೊಂಡು ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಇನ್ನು ಈ ನಟಿಯ ಪೋಟೋ ನೋಡಿದ ಕೆಲ ಅಭಿಮಾನಿಗಳು ಮೆಚ್ಚಿ ಕೊಂಡ್ರೆ ಇನ್ನು ಕೆಲವರು ಕಾಲೆಳೆದಿದ್ದಾರೆ.

ಕನ್ನಡದಲ್ಲಿ 2010 ರಲ್ಲಿ ತೆರೆ ಕಂಡ ಸೂರ್ಯಕಾಂತಿ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ನಟಿ ರೆಜಿನಾ ಕ್ಯಾಸಂದ್ರ ತಮ್ಮ ಬರ್ತಡೇಗೆ ಬೆತ್ತಲೆ ಪೋಟೋ ಅಪ್ಲೋಡ್ ಮಾಡೋದಾಗಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದರು.

ಡಿಸೆಂಬರ್13 ರಂದು ಜನಿಸಿದ ರೆಜಿನಾ ಬರ್ತಡೇ ದಿನ ಅಪ್ಲೋಡ್ ಮಾಡೋ ಈ ವಿಶೇಷ ಪೋಟೋಗಾಗಿ ಅಭಿಮಾನಿಗಳು ಬಿಟ್ಟ ಕಣ್ಣು ಮುಚ್ಚದೇ ಕಾದಿದ್ದರು. ಕೊನೆಗೂ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ ರೆಜಿನಾ.

ತಮ್ಮ ಹುಟ್ಟುಹಬ್ಬದ ದಿನ ತಾವು ಬಾಲ್ಯದಲ್ಲಿ ಇದ್ದಾಗ ಪುಟ್ಟ ಕಂದಮ್ಮನಾಗಿ ಒಂದೇ ಒಂದು ಬಟ್ಟೆಯೂ ಇಲ್ಲದೇ ಆಟವಾಡುತ್ತಿದ್ದ ಪೋಟೋ ಗಳನ್ನು ಹಂಚಿಕೊಂಡಿದ್ದಾರೆ.

ಪುಟ್ಟ ಕಂದಮ್ಮನಾಗಿದ್ದಾಗಿನ ಪೋಟೋ ಹಂಚಿಕೊಂಡ ನಟಿ ಪೋಸ್ಟ್ ಕಂಡು ಹಲವು ಅಭಿಮಾನಿಗಳು ನಗುತ್ತ ರಿಪ್ಲೈ ಮಾಡಿದ್ದರೇ, ಇನ್ನೇನೋ ಕಲ್ಪಿಸಿಕೊಂಡು ಮನಸ್ಸಿನಲ್ಲೇ ಮಂಡಿಗೆ ತಿಂತಿದ್ದ ಅಭಿಮಾನಿಗಳಿಗೆ ಮಾತ್ರ ನಿರಾಸೆಯಾಗಿದೆ.

2005ರಲ್ಲಿ ತಮಿಳು ಚಿತ್ರ ಕಂಡಾ ನಾಲ್ ಮದುಲ್ ಚಿತ್ರದ ಮೂಲಕ ಸಿನಿ ಕೆರಿಯರ್ ಆರಂಭಿಸಿದ ರೆಜಿ ತೆಲುಗು ಮತ್ತು ತಮಿಳು ಹಾಗೂ ಕನ್ನಡದಲ್ಲಿ ಒಟ್ಟು ೫೦ ಕ್ಕೂ ಹೆಚ್ಚು ಚಿತ್ರದಲ್ಲಿ ನಟಿಸಿದ್ದಾರೆ.

Comments are closed.