ಕಾಂತಾರ ಚಾಪ್ಟರ್ 1 ಮೆಚ್ಚಿದ ‌ ಯಶ್ : ತಾಯಿಯನ್ನೇ ಮರೆತ್ರಾ ಕೆಜಿಎಫ್‌ ಸ್ಟಾರ್‌

Yash : ಕಾಂತಾರ ಚಾಪ್ಟರ್ 1 ( Kantara Chapter 1 ) ಸಿನಿಮಾ ಭಾರತೀಯ ಸಿನಿಮಾ ಇತಿಹಾಸದಲ್ಲೇ ಹೊಸದೊಂದು ಇತಿಹಾಸ ಬರೆಯುತ್ತಿದೆ. ಸ್ಯಾಂಡಲ್ ವುಡ್ ನಿಂದ ಆರಂಭಿಸಿ ಬಾಲಿವುಡ್, ಹಾಲಿವುಡ್ ವರೆಗೆ ಎಲ್ಲರೂ ಮೆಚ್ಚುಗೆ ಸೂಚಿಸುತ್ತಿದ್ದಾರೆ..

ಪ್ಯಾನ್ ಇಂಡಿಯಾ ಸ್ಟಾರ್ ಯಶ್ ಕೂಡ ಸಿನಿಮಾ ಗೆ ಹೃದಯತುಂಬಿದ ಅಭಿನಂದನೆ ಸಲ್ಲಿಸಿದ್ದಾರೆ. ಯಶ್ ಮೆಚ್ಚುಗೆ ಸೋಷಿಯಲ್‌ ಮೀಡಿಯಾದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದ್ದು, ಕಾಂತಾರ ಮೆಚ್ಚಿದವರು ಕೊತ್ತಲವಾಡಿ ಮರೆತಿದ್ದೇಕೆ ಎಂದು ನೆಟ್ಟಿಗರು ಯಶ್ ದಂಪತಿಗೆ ಟಾಂಗ್ ಕೊಟ್ಟಿದ್ದಾರೆ.

ಸ್ಯಾಂಡಲ್ ವುಡ್ ಸ್ಟಾರ್ ಯಶ್ ಸದ್ಯ ಪ್ಯಾನ್ ಇಂಡಿಯಾ ಸ್ಟಾರ್. ಹೊಸ ಸಿನಿಮಾ ಕಾರಣಕ್ಕೆ ರಾಕಿಂಗ್ ಸ್ಟಾರ್ ಯಶ್ ಬಹುತೇಕ ಸ್ಯಾಂಡಲ್ ವುಡ್ ನಿಂದ ನಾಪತ್ತೆಯಾಗಿದ್ದಾರೆ. ಅಷ್ಟೇ ಅಲ್ಲ ಕನ್ನಡದಿಂದ ಯಶ್ ಡಿಟ್ಯಾಚ್ ಆಗಿದ್ದಾರೆ ಅನ್ನೋ ಆರೋಪವೂ ಇದೆ.

ಇದಕ್ಕೆಲ್ಲ ಕಾರಣ ಯಶ್ ಹಾಗೂ ಅವರ ಪೋಷಕರ ನಡುವಿನ ಶೀತಲ ಸಮರವೇ ಅನ್ನೋ ಗಾಸಿಪ್ ಕೂಡ ಇದೆ. ಈಗ ಇತ್ತೀಚಿಗೆ ರಿಲೀಸ್ ಆಗಿರೋ ಕಾಂತಾರ ಚಾಪ್ಟರ್ 1 ಕ್ಕೆ ಯಶ್ ನೀಡಿರುವ ಮೆಚ್ಚುಗೆ ಯಶ್ ಮತ್ತು ಪೋಷಕರ ನಡುವೆ ಎಲ್ಲವೂ ಸರಿ ಇಲ್ಲ ಆರೋಪಕ್ಕೆ ಪುಷ್ಠಿ ನೀಡಿದೆ.

ಇದನ್ನೂ ಓದಿ : ವಿಜಯ್‌ ದೇವರಕೊಂಡ – ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥ, ಮದುವೆ ಯಾವಾಗ ?

ಯಶ್ ತಾಯಿ ಪುಷ್ಪಾ ಅವರು ನಿರ್ಮಾಪಕಿಯಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟಿದ್ದು, ಹೊಸ ಪ್ರತಿಭೆಗಳ ಜೊತೆ ಹಳಬರನ್ನು ಸೇರಿಸಿಕೊಂಡು ಕೊತ್ತಲವಾಡಿ ಎಂಬ ಸಿನಿಮಾ ನಿರ್ಮಿಸಿದ್ದರು.

ಸಿನಿಮಾ ಫ್ರೀ ರಿಲೀಸ್ ಸೇರಿದಂತೆ ಹಲವು ಇವೆಂಟ್ ಮಾಡಿದ್ದ ಪುಷ್ಪಾರವರು ಸಿನಿಮಾ ಗೆಲ್ಲಿಸಲು ಇನ್ನಿಲ್ಲದ ಸರ್ಕಸ್ ಮಾಡಿದ್ದರು. ಆದರೆ ಸಿನಿಮಾ ನಿರ್ಮಾಣದ ಆರಂಭದಿಂದ ಅಂತ್ಯದವರೆಗೂ ಎಲ್ಲೂ ಯಶ್ ಕಾಣಿಸಿಕೊಳ್ಳಲೇ ಇಲ್ಲ.

ತಾಯಿಗೆ ವಿಶ್‌ ಮಾಡಿರದ ಯಶ್‌

ಸಿನಿಮಾ ರಿಲೀಸ್ ಆಗಿ ಥಿಯೇಟರ್ ಗೆ ಬಂದ‌ ಮೇಲೂ ಯಶ್ ಅಥವಾ ಸಿನಿಮಾ ಬಗ್ಗೆ ಕಮೆಂಟ್ ಮಾಡಲಿಲ್ಲ. ಕಮೆಂಟ್ ಇರಲಿ ಕೊನೆಪಕ್ಷ ಸೋಷಿಯಲ್ ಮೀಡಿಯಾದಲ್ಲಿ ಯಶ್ ತನ್ನ ಹೆತ್ತವರಿಗೆ ಒಂದು ಶುಭಾಶಯವನ್ನು ಕೋರಲಿಲ್ಲ.

ರಾಧಿಕಾ ಕೂಡ ಸೋಷಿಯಲ್ ಮೀಡಿಯಾದಲ್ಲೂ ಅತ್ತೆಗೆ ಶುಭಕೋರಲಿಲ್ಲ. ಈ‌ ಮಧ್ಯೆ ಯಶ್ ಗೆ ನೀವು ಸಿನಿಮಾ ಇಂಡಸ್ಟ್ರಿಗೆ ಬಂದ ವಿಚಾರ ಗೊತ್ತಿದ್ಯಾ? ಯಶ್ ನಿಮ್ಮ ಸಿನಿಮಾಗೆ‌ಶುಭ ಕೋರಿದ್ದಾರಾ ಎಂಬ ಪ್ರಶ್ನೆಗೆ ಪುಷ್ಪಾ ಅವರ ಬಳಿಯೂ ಉತ್ತರವಿರಲಿಲ್ಲ.

ಯಶ್ ಮೆಚ್ಚಲಿ ಎಂದು ನಾನು ಯಾವ ಕೆಲಸವನ್ನು ಮಾಡ್ತಿಲ್ಲ. ನಮ್ಮ ಮನೆಯಲ್ಲಿ ಯಾರೂ ಯಾರೊಂದಿಗೂ ಯಾವ ಕೆಲಸಕ್ಕೂ ಕೇಳುವ ಪರಿಪಾಟ ಇಟ್ಟಿಲ್ಲ ಎಂದು ಪುಷ್ಪಮ್ಮ ಎಲ್ಲವನ್ನೂ ಮ್ಯಾನೇಜ್ ಮಾಡುವ ಪ್ರಯತ್ನ ಮಾಡಿದ್ದರು.

ಮೂಲಗಳ ಮಾಹಿತಿ ಪ್ರಕಾರ ಯಶ್ (Yash) ಕುಟುಂಬದಲ್ಲಿ ಕೌಟುಂಬಿಕ ಕಲಹ ತಾರಕಕ್ಕೇರಿದೆ. ಅದಕ್ಕಾಗಿ ರಾಧಿಕಾ ಬಹುತೇಕ ಸಮಯವನ್ನು ತಮ್ಮ ವಿದೇಶ ಪ್ರವಾಸ ಹಾಗೂ ತಮ್ಮ ಪೋಷಕರ ಜೊತೆನೇ ಕಳೆಯುತ್ತಿದ್ದಾರಂತೆ.

ಮುಂಬೈನಲ್ಲೇ ಸೆಟಲ್‌ ಆದ್ರಾ ರಾಕಿಂಗ್‌ ಸ್ಟಾರ್‌ ಯಶ್‌

ಯಶ್ ಕೂಡ ಬಹುತೇಕ ಮುಂಬೈನಲ್ಲೇ ವಾಸ್ತವ್ಯ ಹೂಡಿದ್ದಾರಂತೆ. ಯಶ್ ತಾಯಿ ಮಗನ ಮೇಲೆ ಕೋಪಿಸಿಕೊಂಡಿದ್ದು, ಮನೆ ಗೃಹಪ್ರವೇಶಕ್ಕೂ ಕರೆಯದಿರಲು ನಿರ್ಧರಿಸಿದ್ದಾರಂತೆ. ಒಟ್ಟಿನಲ್ಲಿ ಯಶ್ ಕೌಟುಂಬಿಕ ಕಲಹ ಈಗ ಸೋಷಿಯಲ್ ಮೀಡಿಯಾದಲ್ಲಿ ಜಗಜ್ಜಾಹಿರಾದಂತಾಗಿದೆ.

ಕೊತ್ತಲವಾಡಿ ಯಶ್ ತಾಯಿಯ ಚೊಚ್ಚಲ ಸಿನಿಮಾ. ಹಾಗಿದ್ದರೂ ಯಶ್ ಸಿನಿಮಾ ಬಗ್ಗೆ ಮಾತಾಡಲಿಲ್ಲ.ಈಗ ಕಾಂತಾರಕ್ಕೆ ಮನದುಂಬಿ ಹಾರೈಸಿದ್ದಾರೆ, ಇದೇಷ್ಟು ಸರಿ ರಂದು ಸೋಷಿಯಲ್ ಮೀಡಿಯಾದಲ್ಲಿ ಜನ ಯಶ್ ರನ್ನ ಟೀಕಿಸುತ್ತಿದ್ದಾರೆ.

ಕಾಂತಾರ ಚಾಪ್ಟರ್ 1 (Kantara Chapter 1) ರಿಶಬ್ ತಪಸ್ಸಿನ ದೃಶ್ಯ ಕಾವ್ಯ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಆದರೆ ನೀವು ನಿಮ್ಮ ತಾಯಿಯ ಶ್ರಮವನ್ನು ಮರೆತಿದ್ದು ಎಷ್ಟು ಸರಿ? ಎಷ್ಟಾದರೂ ಆಕೆ ನಿಮ್ಮ ಹೆತ್ತಮ್ಮನಲ್ಲವೇ? ನೀವು ಎಷ್ಟೇ ಎತ್ತರಕ್ಕೇರಿದರೂ ಬಂದ ದಾರಿ ಮರೆಯಬಾರದು ಅಲ್ಲವೇ ಎಂದು ಕುಟುಕಿದ್ದಾರೆ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories