Dr. Shivaram Karanta Huttooru award :ನಟ ರಮೇಶ್​ ಅರವಿಂದ್​ಗೆ ಡಾ.ಶಿವರಾಮ ಕಾರಂತ ಹುಟ್ಟೂರು ಪ್ರಶಸ್ತಿ ಪ್ರದಾನ

ಉಡುಪಿ:Dr. Shivaram Karanta Huttooru award : ಚಂದನವನದ ಹೆಸರಾಂತ ನಟ, ನಿರ್ದೇಶಕ ಹಾಗೂ ಲೇಖಕ ರಮೇಶ್​ ಅರವಿಂದ್​ಗೆ ಶಿವರಾಮ ಕಾರಂತ ಹುಟ್ಟೂರು ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಕೋಟತಟ್ಟು ಗ್ರಾಮ ಪಂಚಾಯಿತಿ ಹಾಗೂ ಕೋಟ ಕಾರಂತ ಹುಟ್ಟೂರು ಪ್ರಶಸ್ತಿ ಪ್ರತಿಷ್ಠಾನದ ಸಹಯೋಗದಲ್ಲಿ ನಡೆಯುತ್ತಿರುವ 18ನೇ ವರ್ಷದ ಶಿವರಾಮ ಕಾರಂತ ಹುಟ್ಟೂರು ಪ್ರಶಸ್ತಿ ಕಾರ್ಯಕ್ರಮದಲ್ಲಿ ರಮೇಶ್​ ಅರವಿಂದ್​ರಿಗೆ ಈ ಗೌರವ ಸಂದಿದೆ.


ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ನಟ ರಮೇಶ್​ ಅರವಿಂದ್​ ನಾನು ಚಿಕ್ಕ ಮನೆಯಲ್ಲಿ ಬೆಳೆದವನು. ಆದರೆ ನಮ್ಮ ಮನಸ್ಸು ದೊಡ್ಡದಾಗುವಂತೆ ಪೋಷಕರು ಬೆಳೆಸಿದರು. ಇಡೀ ಪ್ರಪಂಚವೇ ನನ್ನದು ಎಂಬ ಆತ್ಮವಿಶ್ವಾಸ ನಮ್ಮಲ್ಲಿ ಮೂಡುವಂತೆ ನೋಡಿಕೊಂಡಿದ್ದರು. ಶಾಲಾ ದಿನಗಳಲ್ಲಿ ನನಗೆ ಇಂಗ್ಲೀಷ್​ ಕೂಡ ಬರ್ತಿರಲಿಲ್ಲ. ಶಾಲೆಯಲ್ಲಿ ಮುಜುಗರ ಅನುಭವಿಸಿದ್ದೆ. ಆಗ ನನ್ನ ತಂದೆ ನನಗೆ ಒಂದು ಭಾಷೆ ಕಲಿಯೋಕೆ ಆಗಲ್ವಾ. ಇಂಗ್ಲೀಷ್​ ಕೇವಲ ಒಂದು ಭಾಷೆಯಷ್ಟೇ ಎಂದಿದ್ದರು. ಅದು ನನ್ನಲ್ಲಿ ಎಷ್ಟು ಆತ್ಮ ವಿಶ್ವಾಸ ಹುಟ್ಟಿಸಿತ್ತು ಅಂದರೆ ನಾನು ಇಂಗ್ಲೀಷ್​ ಬಾಷೆಯಲ್ಲಿ ಕ್ಲಾಸಿಗೆ ಮೊದಲ ಸ್ಥಾನ ಪಡೆದೆ.


ಅದೇ ರೀತಿ ನಟನೆ ಹಾಗೂ ನಿರ್ದೇಶನ ಇವೆಲ್ಲವನ್ನು ನಾನು ಧೈರ್ಯದಿಂದಲೇ ಎದರಿಸಿದೆ. ಯಾರೂ ಕೂಡ ಯಾವುದೇ ಸಾಹಸ ಮಾಡುವ ಮುನ್ನ ಭಯ ಪಡಬಾರದು. ಯಾರೋ ಈ ಸಾಧನೆ ಮಾಡಿದ್ದಾರೆ ಅಂದರೆ ಅದು ನಮ್ಮಿಂದಲೂ ಸಾಧ್ಯ ಈ ಧೈರ್ಯದಲ್ಲಿ ನಾವು ಮುನ್ನುಗ್ಗಬೇಕು ಎಂದು ಹೇಳಿದ್ದಾರೆ.


ಇನ್ನು ಇದೇ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕಾರಂತರು ಹುಟ್ಟಿರುವ ನಾಡಲ್ಲಿ ನಾವು ಹುಟ್ಟಿರುವುದೇ ಒಂದು ಪುಣ್ಯ . ನಾನು ಈ ಕಾರ್ಯಕ್ರಮಕ್ಕೆ ಮಾಧುಸ್ವಾಮಿ ಅವರಿಗೆ ಆಮಂತ್ರಣ ಪತ್ರಿಕೆಯನ್ನು ನೀಡಿರಲೇ ಇಲ್ಲ. ಆದರೂ ಅವರು ಏನೂ ಭಾವಿಸದೇ ಈ ಕಾರ್ಯಕ್ರಮಕ್ಕೆ ಬಂದಿದ್ದಾರೆ ಅಂದರೆ ಅದು ಅವರ ವ್ಯಕ್ತಿತ್ವವನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ. ಇದೇ ವೇಳೆ ರಮೇಶ್​ ಅರವಿಂದ್ ಅವರ ವಿಚಾರವಾಗಿಯೂ ಮಾತನಾಡಿದ ಕೋಟ ಶ್ರೀನಿವಾಸ್​ ಪೂಜಾರಿ ಈಗಿನ ಸೆಲ್ಫಿ ಜಮಾನದಲ್ಲಿ ರಮೇಶ್​ರನ್ನು ವೇದಿಕೆಗೆ ಕರೆದುಕೊಂಡು ಬರೋ ತನಕ ನಾನು ಸುಸ್ತಾಗಿ ಹೋದೆ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.


ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಮಾಧುಸ್ವಾಮಿ, ನನ್ನನ್ನು ದಡ್ಡ ಅಂತಾ ನಿರೂಪಿಸಲು ಕೋಟ ಶ್ರೀನಿವಾಸ ಪೂಜಾರಿ ಇಲ್ಲಿ ನನ್ನನ್ನು ಕರೆದುಕೊಂಡು ಬಂದಿದ್ದಾರೆ ಅಂತಾ ನನಗನಿಸುತ್ತೆ. ಕೋಟರ ಸ್ನೇಹ ಹಾಗೂ ಕಾರಂತರ ಮೇಲಿನ ಅಭಿಮಾನ ನನ್ನನ್ನು ಇಷ್ಟು ದೂರ ಬರುವಂತೆ ಮಾಡಿದೆ. ಭಾಷೆ, ಕಲೆ ಹಾಗೂ ಸಂಸ್ಕೃತಿಗೆ ಕಾರಂತರು ದೊಡ್ಡ ಕೊಡುಗೆಗಳನ್ನು ನೀಡಿದ್ದಾರೆ. ಈ ಭಾಗದ ಜನತೆ ಕನ್ನಡ ಭಾಷೆಗೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ನಾವು ಕೇವಲ ಜ್ಞಾನಪೀಠದಿಂದ ಕಾರಂತರನ್ನು ಅಳೆಯಲು ಸಾಧ್ಯವಿಲ್ಲ. ಕಾರಂತರು ಭಾಷೆ ಹೇಗೆ ಉಳಿಸಬೇಕು ಹಾಗೂ ಹೇಗೆ ಬೆಳೆಸಬೇಕು ಎಂಬುದನ್ನು ರಾಜ್ಯದ ಜನತೆಗೆ ಕಲಿಸಿಕೊಟ್ಟಿದ್ದಾರೆ ಎಂದು ಹೇಳಿದರು.

ಇದನ್ನು ಓದಿ : Cow National animal : ಹಸುವನ್ನು ರಾಷ್ಟ್ರೀಯ ಪ್ರಾಣಿಯೆಂದು ಘೋಷಿಸಿ ; ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್‌

ಇದನ್ನೂ ಓದಿ : Cow As National Animal: ‘ಇದು ಕೋರ್ಟ್​ನ ಕೆಲಸವೇ..?’ ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕೆಂದವರಿಗೆ ಸುಪ್ರೀಂಕೋರ್ಟ್ ಪ್ರಶ್ನೆ

Actor Ramesh Aravind was presented with Dr. Shivaram Karanta Huttooru award

Comments are closed.