Dengue fever : ಕೊರೊನಾವನ್ನೇ ಮೀರಿಸಿದ ಡೆಂಗ್ಯೂ : ರಾಜ್ಯದಲ್ಲಿ 3,386 ಮಂದಿಗೆ ಡೆಂಗ್ಯೂ ಜ್ವರ !

ಬೆಂಗಳೂರು : ಕೊರೊನಾದಿಂದ ಜನರ ಬೇಸತ್ತು ಹೊಗಿರುವ ಈ ಸಮಯದಲ್ಲಿ ಡೆಂಗ್ಯೂ ಜ್ವರದ ಆರ್ಭಟ ಹೆಚ್ಚಿದೆ. ದೇಶದಲ್ಲಿ ಕಳೆದೊಂದು ತಿಂಗಳ ಅವಧಿಯಲ್ಲಿ ದಾಖಲೆಯ ಸಂಖ್ಯೆಯಲ್ಲಿ ಡೆಂಗ್ಯೂ ಜ್ವರ ಕಾಣಿಸಿಕೊಳ್ಳುತ್ತಿದೆ. ಅದ್ರಲ್ಲೂ, ಕಳೆದ ಒಂದು ವಾರದಲ್ಲಿ 291 ಡೆಂಗಿ ಪ್ರಕರಣಗಳು ದೃಢಪಟ್ಟಿವೆ. ಇದು ಜನರಲ್ಲಿ ಆತಂಕ ಸೃಷ್ಟಿ ಮಾಡಿದೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿ ಡೆಂಗಿ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ಕಳೆದ ಒಂದು ವಾರದಲ್ಲಿ 291 ಡೆಂಗಿ ಪ್ರಕರಣಗಳು ದೃಢಪಟ್ಟಿವೆ. ಈ ಮೂಲಕ ರಾಜ್ಯದಲ್ಲಿ ಡೆಂಗಿ ಪ್ರಕರಣಗಳ ಸಂಖ್ಯೆ 3,386ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಇದನ್ನೂ ಓದಿ: Covid -19 Updates : ಭಾರತದಲ್ಲಿಂದು 26,041 ಹೊಸ ಕೋವಿಡ್‌ ಪ್ರಕರಣ, 276 ಮಂದಿ ಸಾವು

ಬೆಂಗಳೂರಿನಲ್ಲಿ ಅತೀ ಹೆಚ್ಚು ಪ್ರಕರಣಗಳು ದೃಢಪಟ್ಟಿದ್ದು, 575 ಮಂದಿ ಡೆಂಗಿ ಜ್ವರ ಪ್ರಕರಣಗಳು ಪತ್ತೆಯಾಗಿವೆ. ಡೆಂಗ್ಯೂ ಮಾತ್ರವಲ್ಲದೇ ಚಿಕನ್‌ಗೂನ್ಯಾ ಪ್ರಕರಣಗಳು ಕೂಡ ಕಾಣಿಸಿಕೊಳ್ಳುತ್ತಿದೆ. ರಾಜ್ಯದಲ್ಲಿ ಈವರೆಗೆ 1,117 ಚಿಕೂನ್‌ಗುನ್ಯಾ ಪ್ರಕರಣಗಳು ದೃಢಪಟ್ಟಿವೆ. ಕಳೆದೊಂದು ವಾರದಲ್ಲಿ 110 ಮಂದಿ ಚಿಕೂನ್ ಗುನ್ಯಾ ಜ್ವರಕ್ಕೆ ಒಳಗಾಗಿದ್ದಾರೆ.

ಇದನ್ನೂ ಓದಿ: Corona Updates : ಭಾರತದಲ್ಲಿ 24 ಗಂಟೆಯಲ್ಲಿ31,382 ಮಂದಿಗೆ ಸೋಂಕು, 318 ಬಲಿ

(3,386 cases of dengue fever in the state)

Comments are closed.