Arjun Bijlani: ಖತರೋಂಖೇ ಕಿಲಾಡಿ ಟೈಟಲ್ ಗೆದ್ದ ಅರ್ಜುನ್ ಬಿಜಲಾನಿ: ದಿವ್ಯಾಂಕಾ ರನ್ನರ್ ಅಪ್

ಸಾಹಸ ಮಯ ಟಾಸ್ಕ್ ಗಳಿಂದ ಕೂಡಿದ ಹಿಂದಿಯ ಜನಪ್ರಿಯ ರಿಯಾಲಿಟಿ ಶೋ ಖತರೋಂಖೇ ಕಿಲಾಡಿ ಶೋದಲ್ಲಿ ಕಿರುತೆರೆ ನಟ ಅರ್ಜುನ್ ಬಿಜಲಾನಿ ಗೆಲುವು ಸಾಧಿಸಿದ್ದು, ವಿನ್ನರ್ಸ್ ಟ್ರೋಫಿ ತಮ್ಮದಾಗಿಸಿಕೊಂಡಿದ್ದಾರೆ. ಕೊನೆಯ ಟಾಸ್ಕ್ ನಲ್ಲಿ ಕೆಲವೇ ಕ್ಷಣಗಳ ಅಂತರದಲ್ಲಿ ದಿವ್ಯಾಂಕಾ ತ್ರಿಪಾಠಿ ರನ್ನರ್ ಅಪ್ ಸ್ಥಾನ ಪಡೆದುಕೊಂಡಿದ್ದಾರೆ.

ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗೋ ಖತರೋ ಖೇಂ ಕಿಲಾಡಿ ಯ 11 ನೇ ಆವೃತ್ತಿಯಲ್ಲಿ ಅರ್ಜುನ್ ಬಿಜಲಾನಿ ಜಯಶಾಲಿಯಾಗಿದ್ದಾರೆ. ಸೌತ್ ಆಫ್ರಿಕಾದ ಕೇಫ್ ಟೌನ್ ನಲ್ಲಿ ಶೋ ನಡೆದಿತ್ತು.

ಹಿಂದಿ ಕಿರುತೆರೆಯ ನಾಗಿನ್, ಮೇರಿ ಆಶಿಕಿ ತುಮ್ ಸೇ ಹೈ, ಮಿಲೇ ಜಬ್ ಹಮ್ ತುಮ್ ಹಾಗೂ ಲೆಫ್ಟ್ ರೈಟ್ ಲೆಫ್ಟ್  ಶೋಗಳಲ್ಲಿ ನಟಿಸಿ ಪ್ರಸಿದ್ಧಿ ಗಳಿಸಿದ್ದಾರೆ.

ಅರ್ಜುನ್ ಗೆ ಇನ್ನೊಬ್ಬಕಿರುತೆರೆ ನಟಿ ದಿವ್ಯಾಂಕಾ ತ್ರಿಪಾಠಿ ಪ್ರಬಲ ಪ್ರತಿಸ್ಪರ್ಧಿಯಾಗಿದ್ದು, ಕೊನೆಯ ಟಾಸ್ಕ್ ನಲ್ಲಿ ಕೆಲವೇ ಸೆಕೆಂಡ್ ಗಳಲ್ಲಿ ವಿನ್ನರ್ ಸ್ಥಾನದಿಂದ ದೂರವಾದರು. ಆದರೆ ಈ ಶೋದಲ್ಲಿ ಕೊನೆಯ ಹಂತದವರೆಗೆ ತಲುಪಿದ ದಿವ್ಯಾಂಕಾಗೆ ಎಲ್ಲಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಇನ್ನು ಅರ್ಜುನ್ ಬಿಜಲಾನಿ ಗೆಲುವಿಗೆ ದಿವ್ಯಾಂಕಾ ಅಭಿಮಾನಿಗಳು ಅಸಮಧಾನ ಕೂಡ ವ್ಯಕ್ತಪಡಿಸಿದ್ದು, ಸೋಷಿಯಲ್ ಮೀಡಿಯಾದಲ್ಲಿ ರಿಯಲ್ ವಿನ್ನರ್ ದಿವ್ಯಾಂಕಾ ಎಂದು ಪೋಸ್ಟ್ ಹಾಕಿ ಸಂಭ್ರಮಿಸುತ್ತಿದ್ದಾರೆ.  

(Actor Arjun Bijlani Wins Khatron Ke Khiladi 11)

Comments are closed.