asia cup 2025 super 4 : ಸೆಪ್ಟೆಂಬರ್ 21ಕ್ಕೆ ಭಾರತ Vs ಪಾಕಿಸ್ತಾನ ಪಂದ್ಯ

asia cup 2025 super 4 : ಏಷ್ಯಾ ಕಪ್ 2025ನ ಲೀಗ್‌ ಹಂತದ ಪಂದ್ಯದಲ್ಲಿ ಭಾರತದ ವಿರುದ್ದ ಸೋಲಿನ ರುಚಿ ಕಂಡಿರುವ ಪಾಕಿಸ್ತಾನ ಇದೀಗ ಮತ್ತೊಮ್ಮೆ ಮುಖಾಮುಖಿಯಾಗಲಿವೆ.

ಸೂಪರ್ 4 ಹಂತದ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ಎರಡನೇ ಬಾರಿ ಪಂದ್ಯಾಟವನ್ನಾಡಲಿವೆ. ಬದ್ದವೈರಿಗಳ ಕಾದಾಟದ ಹೈವೋಲ್ಟೇಜ್‌ ಪಂದ್ಯ ಸೆಪ್ಟೆಂಬರ್ 21, 2025 ರ ಭಾನುವಾರ ನಡೆಯಲಿದೆ.

ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯವನ್ನು ಕಣ್ತುಂಬಿಕೊಳ್ಳಲು ಇಡೀ ಜಗತ್ತು ಕಾಯುತ್ತಿದೆ. ಲೀಗ್‌ ಹಂತದ ಪಂದ್ಯದಲ್ಲಿ ಭಾರತ ಕ್ರಿಕೆಟ್‌ ತಂಡ ಪಾಕಿಸ್ತಾನವನ್ನು ಹೀನಾಯವಾಗಿ ಸೋಲಿಸಿತ್ತು.

ಏಷ್ಯಾಕಪ್‌ನಲ್ಲಿ ಎರಡೂ ತಂಡಗಳು ಈಗಾಗಲೇ ಗ್ರೂಪ್ ಎ ನಿಂದ ಸೂಪರ್ ಫೋರ್ ಗೆ ಅರ್ಹತೆ ಪಡೆದಿವೆ. ಭಾರತ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದ್ದರೆ, ಪಾಕಿಸ್ತಾನ ಎರಡನೇ ಸ್ಥಾನದಲ್ಲಿದೆ. ಭಾರತ ಮತ್ತು ಪಾಕಿಸ್ತಾನ ಪಂದ್ಯ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ.

ಭಾರತ – ಪಾಕಿಸ್ತಾನ : ಹೆಡ್-ಟು-ಹೆಡ್

ಒಟ್ಟು ಪಂದ್ಯಗಳು: 19 (ODI ಮತ್ತು T20I ಎರಡೂ ಸ್ವರೂಪಗಳನ್ನು ಒಳಗೊಂಡಂತೆ)

ಭಾರತ ಗೆಲುವುಗಳು: 10

  • ಪಾಕಿಸ್ತಾನ ಗೆಲುವುಗಳು: 6
  • ಫಲಿತಾಂಶವಿಲ್ಲ/ಕೈಬಿಡಲಾಗಿದೆ: 3

ಏಷ್ಯಾಕಪ್‌ ಪಂದ್ಯಾವಳಿಯಲ್ಲಿ ಭಾರತ ಪಾಕಿಸ್ತಾನ ವಿರುದ್ದ ಮೇಲುಗೈ ಸಾಧಿಸಿದೆ. ಈ ಹಿಂದೆ ಏಷ್ಯಾಕಪ್‌ ಪಂದ್ಯಾವಳಿ ಏಕದಿನ ಸ್ವರೂಪದಲ್ಲಿತ್ತು. ಆದ್ರೀಗ ಟಿ20 ಮಾದರಿಯಲ್ಲಿ ಪಂದ್ಯಾವಳಿ ನಡೆಯುತ್ತಿದೆ.

ಇದನ್ನೂ ಓದಿ : ಶ್ರೀಶಾಂತ್‌- ಹರ್ಭಜನ್‌ ಸಿಂಗ್‌ ಕಪಾಳಮೋಕ್ಷ : ಹಳೆ ವಿಡಿಯೋ ವೈರಲ್‌

ಏಷ್ಯಾಕಪ್‌ 2025 : ಒಟ್ಟು ಪಂದ್ಯಗಳು: 4

  • ಭಾರತ ಗೆಲುವು : 3
  • ಪಾಕಿಸ್ತಾನ ಗೆಲುವು : 1

ಭಾರತ 2025ರ ಏಷ್ಯಾಕಪ್‌ ಪಂದ್ಯಾವಳಿಯಲ್ಲಿ ಭರ್ಜರಿ ಫಾರ್ಮ್‌ನಲ್ಲಿದೆ. ಈಗಾಗಲೇ ಪಾಕಿಸ್ತಾನಕ್ಕೆ ಲೀಗ್‌ ಹಂತದಲ್ಲಿ ಸೋಲಿನ ರುಚಿ ತೋರಿಸಿದೆ. ಸೂಪರ್‌ 4ರಲ್ಲಿಯೂ ಭಾರತವೇ ಗೆಲ್ಲುವ ಫೇವರೇಟ್‌ ತಂಡವಾಗಿದೆ.

ಏಷ್ಯಾಕಪ್‌ 2025 : ಸೂಪರ್‌ 4 ಪಂದ್ಯಾವಳಿ ವೇಳಾಪಟ್ಟಿ

  • ಸೆಪ್ಟೆಂಬರ್ 20, ಶನಿ ಬಿ1 vs ಬಿ2, ಸೂಪರ್ ಫೋರ್ ಪಂದ್ಯ 1 20:00:00 ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ, ದುಬೈ
  • ಸೆಪ್ಟೆಂಬರ್ 21, ಸೂರ್ಯ ಭಾರತ vs ಪಾಕಿಸ್ತಾನ, ಸೂಪರ್ ಫೋರ್ ಪಂದ್ಯ 2 20:00:00 ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ, ದುಬೈ
  • ಸೆಪ್ಟೆಂಬರ್ 23, ಮಂಗಳವಾರ ಪಾಕಿಸ್ತಾನ vs ಬಿ1, ಸೂಪರ್ ಫೋರ್ ಪಂದ್ಯ 3 20:00:00 ಶೇಖ್ ಜಾಯೆದ್ ಕ್ರೀಡಾಂಗಣ, ಅಬುಧಾಬಿ
  • ಸೆಪ್ಟೆಂಬರ್ 24, ಬುಧವಾರ ಭಾರತ vs ಬಿ2, ಸೂಪರ್ ಫೋರ್ ಪಂದ್ಯ 4 20:00:00 ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ, ದುಬೈ
  • ಸೆಪ್ಟೆಂಬರ್ 25, ಗುರುವಾರ ಪಾಕಿಸ್ತಾನ vs ಬಿ2, ಸೂಪರ್ ಫೋರ್ ಪಂದ್ಯ 5 20:00:00 ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ, ದುಬೈ
  • ಸೆಪ್ಟೆಂಬರ್ 26, ಶುಕ್ರ ಭಾರತ vs ಬಿ1, ಸೂಪರ್ ಫೋರ್ ಪಂದ್ಯ 6 20:00:00 ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ, ದುಬೈ

ಇದನ್ನೂ ಓದಿ : Asia Cup 2025 IND vs PAK : ಪಾಕ್‌ ವಿರುದ್ದ ಗೆದ್ದ ಭಾರತ : ಹ್ಯಾಂಡ್‌ಶೇರ್‌ ಮಾಡದೆ ಪಾಕ್‌ ಅವಮಾನಿಸಿದ ಸೂರ್ಯ ಕುಮಾರ್‌ ಯಾದವ್

ಭಾರತ ಏಷ್ಯಾ ಕಪ್ 2025 ತಂಡ

ಭಾರತೀಯ ಕ್ರಿಕೆಟ್ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಶುಭಮನ್ ಗಿಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಜಿತೇಶ್ ಶರ್ಮಾ (ವಿಕೆಟ್‌ ಕೀಪರ್), ಜಸ್‌ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ, ಅರ್ಷದೀಪ್ ಸಿಂಗ್, ಕುಲದೀಪ್ ಯಾದವ್, ಸಂಜು ಸ್ಯಾಮ್ಸನ್ (ವಿಕೆಟ್‌ ಕೀಪರ್), ಆರ್.

ಮೀಸಲು: ಪ್ರಸಿದ್ಧ್ ಕೃಷ್ಣ, ವಾಷಿಂಗ್ಟನ್ ಸುಂದರ್, ರಿಯಾನ್ ಪರಾಗ್, ಧ್ರುವ್ ಜುರೆಲ್, ಯಶಸ್ವಿ ಜೈಸ್ವಾಲ್

ಪಾಕಿಸ್ತಾನ ಏಷ್ಯಾ ಕಪ್ 2025 ತಂಡ

ಪಾಕಿಸ್ತಾನ ಕ್ರಿಕೆಟ್ ತಂಡ: ಸಲ್ಮಾನ್ ಅಲಿ ಅಘಾ (ನಾಯಕ), ಅಬ್ರಾರ್ ಅಹ್ಮದ್, ಫಹೀಮ್ ಅಶ್ರಫ್, ಫಖರ್ ಜಮಾನ್, ಹಾರಿಸ್ ರೌಫ್, ಹಸನ್ ಅಲಿ, ಹಸನ್ ನವಾಜ್, ಹುಸೇನ್ ತಲತ್, ಖುಷ್ದಿಲ್ ಶಾ, ಮೊಹಮ್ಮದ್ ಹ್ಯಾರಿಸ್ (ವಿಕೆಟ್‌ ಕೀಪರ್), ಮೊಹಮ್ಮದ್ ನವಾಜ್, ಮೊಹಮ್ಮದ್ ವಾಸಿಂ ಜೂನಿಯರ್, ಸಾಹಿಬ್ಜಾದಾ, ಸಲೀಬ್ಜಾದ, ಸಲೀಬ್ಜಾದ, ಎಮ್. ಅಫ್ರಿದಿ, ಸುಫ್ಯಾನ್ ಮೊಕಿಮ್

asia cup 2025 super 4 India Vs Pakistan match on September 21 2025

Darshan Shetty Narkali | ದರ್ಶನ್‌ ಶೆಟ್ಟಿ ನಾರ್ಕಳಿ

ದರ್ಶನ್‌ ಶೆಟ್ಟಿ ನಾರ್ಕಳಿ (Darshan Shetty Narkali) ಅವರು ನ್ಯೂಸ್‌ ನೆಕ್ಸ್ಟ್ ಕನ್ನಡ ( News Next Kannada) ವಿಭಾಗದ ಪತ್ರಕರ್ತ. ಮಂಗಳೂರು ವಿವಿಯಲ್ಲಿ ಪದವಿ ಪಡೆದಿದ್ದಾರೆ. ಕಳೆದ 1 ವರ್ಷಗಳಿಂದ ವೆಬ್‌ಸೈಟ್‌ನಲ್ಲಿ ವರದಿಗಾರಿಕೆಯ ಅನುಭವ ಹೊಂದಿದ್ದಾರೆ. ನ್ಯೂಸ್‌ ನೆಕ್ಸ್ಟ್‌ ( News Next Digital) ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಪರಿಸರ, ವಿಜ್ಞಾನ -ತಂತ್ರಜ್ಞಾನ ರಂಗಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಪ್ರವಾಸ, ಕ್ರಿಕೆಟ್ ,ಫೋಟೋಗ್ರಾಫಿ, ಓದು, ಸಿನಿಮಾ ಇವರ ಹವ್ಯಾಸಗಳು. More »

Related Stories