ಹೊಸ ಮಾಲೀಕರಿಗೆ ಹಸ್ತಾಂತರ ಮತ್ತಷ್ಟು ವಿಳಂಬ: ರಾಜಸ್ಥಾನ ರಾಯಲ್ಸ್ ಪಾಲಿಗೆ ಮುಗಿಯದ ಸಂಕಷ್ಟ

ಐಪಿಎಲ್​ ಇತಿಹಾಸದಲ್ಲಿಯೇ 2ನೇ ದುಬಾರಿ ತಂಡ ಎಂದು ಕರೆಯಿಸಿಕೊಳ್ಳಲು ಮುಂದಾಗಿದ್ದ, ರಾಜಸ್ಥಾನ ರಾಯಲ್ಸ್​ ತಂಡದ ಖರೀದಿ ಪ್ರಕ್ರಿಯೆಗೆ ಕಾನೂನು ತೊಡಕು ಎದುರಾಗಿದೆ.

ಈ ಬಾರಿ ರಾಯಲ್ಸ್​ ಚಾಲೆಂಜರ್ಸ್ ಹೊರತುಪಡಿಸಿದರೆ ಅತ್ಯಂತ ದುಬಾರಿ ಮೊತ್ತಕ್ಕೆ ಮಾರಾಟವಾದ ತಂಡ ರಾಜಸ್ಥಾನ ರಾಯಲ್ಸ್​. ಐಪಿಎಲ್​ ಇತಿಹಾಸದಲ್ಲಿಯೇ 2ನೇ ದುಬಾರಿ ತಂಡ ಎಂದು ಕರೆಯಿಸಿಕೊಳ್ಳಲು ಮುಂದಾಗಿದ್ದ, ರಾಜಸ್ಥಾನ ರಾಯಲ್ಸ್​ ತಂಡದ ಖರೀದಿ ಪ್ರಕ್ರಿಯೆಗೆ ಕಾನೂನು ತೊಡಕು ಎದುರಾಗಿದೆ. ಆರ್​ಆರ್​ ಫ್ರಾಂಚೈಸಿಯನ್ನು ಭಾನುವಾರವಷ್ಟೇ ಉದ್ಯಮಿಗಳಾದ ಲಕ್ಷ್ಮೀ ಮಿತ್ತಲ್​ ಮತ್ತು ಅದಾರ್​ ಪೂನಾವಾಲಾ ಒಳಗೊಂಡ ಒಕ್ಕೂಟಕ್ಕೆ 15,660 ಕೋಟಿ ರೂ.ಗೆ ಮಾರಾಟ ಮಾಡಲಾಗಿತ್ತು.

ಆದರೆ ಈ ಹಿಂದೆ ರಾಜಸ್ಥಾನ ರಾಯಲ್ಸ್​ ತಂಡದೊಂದಿಗೆ 15,290 ಕೋಟಿ ರೂಪಾಯಿ ಮೊತ್ತಕ್ಕೆ ಖರೀದಿ ಪ್ರಕ್ರಿಯೆಗೆ ಮುಂದಾಗಲು ಇಚ್ಛಿಸಿದ್ದ ಅಮೆರಿಕದ ಉದ್ಯಮಿ ಕಲ್​ ಸೋಮಾನಿ ಒಳಗೊಂಡ ಒಕ್ಕೂಟವು ಇದೀಗ ಕಾನೂನು ಸಮರಕ್ಕೆ ಮುಂದಾಗಿದೆ. ಸೋಮಾನಿ ಒಕ್ಕೂಟದ ಜತೆಗಿನ ಮಾರಾಟ ಒಪ್ಪಂದ ವಿವಿಧ ಕಾರಣಗಳಿಂದಾಗಿ ಮುಂದುವರಿಯುತ್ತಿಲ್ಲ ಎಂದು ಆರ್​ಆರ್ ಫ್ರಾಂಚೈಸಿ ತಿಳಿಸಿತ್ತು. ಆದರೆ ಇದನ್ನು ಒಪ್ಪದ ಸೋಮಾನಿ ಒಕ್ಕೂಟ, ಆರ್​ಆರ್ ಫ್ರಾಂಚೈಸಿಗೆ ಕಾನೂನು ನೋಟಿಸ್​ ಕಳುಹಿಸಿದೆ.

ಇದನ್ನೂ ಓದಿ : ರಾಜ್ಯದಲ್ಲಿ ಮುಂದಿನ 3 ದಿನ ವರುಣನ ಆರ್ಭಟ: ಕರಾವಳಿಯಲ್ಲಿ ಗಾಳಿ ಸಹಿತ ಮಳೆಯ ಎಚ್ಚರಿಕೆ!

ಇದರಿಂದಾಗಿ ಆರ್​ಆರ್ ಫ್ರಾಂಚೈಸಿಯನ್ನು ಹೊಸ ಮಾಲೀಕರಿಗೆ ಹಸ್ತಾಂತರಿಸುವ ಪ್ರಕ್ರಿಯೆ ವಿಳಂಬವಾಗಬಹುದು ಎಂದು ಅಂದಾಜಿಸಲಾಗಿದೆ.ಸೋಮಾನಿ ಜತೆಗಿನ ಒಪ್ಪಂದ ಹಣದ ವಿಚಾರಕ್ಕೆ ಮುರಿದು ಬಿದ್ದಿಲ್ಲ. ಬದಲಾಗಿ ಹಾಲಿ ಮಾಲೀಕ ಮನೋಜ್​ ಬದಾಲೆ ಹೊಸ ಮಾಲೀಕರ ಬಳಗದಲ್ಲೂ ಸ್ಥಾನ ಪಡೆಯಲು ಬಯಸಿದ್ದು ಕಾರಣ ಎನ್ನಲಾಗಿದೆ. ಆದರೆ ಇದನ್ನು ಸೋಮಾನಿ ಒಕ್ಕೂಟ ನಿರಾಕರಿಸಿದೆ. ಕಾನೂನು ಸಮರದ ಬಳಿಕ ರಾಜಸ್ಥಾನ ರಾಯಲ್ಸ್​ ತಂಡದ ಭವಿಷ್ಯ ಏನಾಗಲಿದೆ ಎಂದು ಕಾದು ನೋಡಬೇಕಿದೆ.

Meghana Pranuth | ಮೇಘನಾ ಪ್ರಣೂತ್‌

ಮೇಘನಾ ಪ್ರಣೂತ್‌ ಮೂಲತಃ ಉಡುಪಿ ಜಿಲ್ಲೆಯವರು. ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣವನ್ನು ಪಡೆದಿದ್ದು, ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಿನಿಮಾ, ಕ್ರೀಡೆ, ವಾಣಿಜ್ಯ, ಫ್ಯಾಷನ್‌ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ. ಇದೀಗ ನ್ಯೂಸ್‌ ನೆಕ್ಸ್ಟ್‌ನಲ್ಲಿ ನಿರೂಪಕರಾಗಿ, ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ.

Related Stories