9ನೇ ಬಾರಿಗೆ ಏಷ್ಯಾಕಪ್ ಗೆದ್ದ ಭಾರತ: ಪಾಕಿಸ್ತಾನದ ವಿರುದ್ಧ ರೋಚಕ ಗೆಲುವು

Aisa cup 2025 final : ದುಬೈ: ಏಷ್ಯಾಕಪ್‌ 2025ರ ಫೈನಲ್‌ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ದ ಭಾರತ ಭರ್ಜರಿ ಗೆಲುವು ಸಾಧಿಸಿದೆ. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಸೋಲಿಸುವ ಮೂಲಕ 9ನೇ ಬಾರಿಗೆ ಭಾರತ ವಿಶ್ವಕಪ್‌ ಎತ್ತಿ ಹಿಡಿದಿದೆ.

ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಉತ್ತಮ ಆರಂಭದ ನಂತರ ಭಾರತದ ಸ್ಪಿನ್ನರ್‌ಗಳ ಮಾರಕ ಬೌಲಿಂಗ್‌ಗೆ ಸಿಲುಕಿ 19.1 ಓವರ್‌ಗಳಲ್ಲಿ 146 ರನ್‌ಗಳಿಗೆ ಆಲೌಟ್ ಆಯಿತು. ಪಾಕಿಸ್ತಾನದ ಪರ ಸಾಹಿಬ್‌ಜಾದಾ ಫರ್ಹಾನ್ (57) ಮತ್ತು ಫಖರ್ ಜಮಾನ್ (46) ಉತ್ತಮ ಬ್ಯಾಟಿಂಗ್ ಮಾಡಿದರು.

ಭಾರತದ ಪರ ಸ್ಪಿನ್ನರ್ ಕುಲದೀಪ್ ಯಾದವ್ (4 ವಿಕೆಟ್) ಮಾರಕ ಪ್ರದರ್ಶನ ನೀಡಿದರು. ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ ಮತ್ತು ಅಕ್ಷರ್ ಪಟೇಲ್ ತಲಾ 2 ವಿಕೆಟ್ ಪಡೆದರು.

ಪಾಕಿಸ್ತಾನ ನೀಡಿದ 147 ರನ್‌ಗಳ ಸುಲಭ ಗುರಿಯನ್ನು ಬೆನ್ನಟ್ಟಿದ ಭಾರತ ಆರಂಭದಲ್ಲಿ ಆಘಾತ ಎದುರಿಸಿತು. ಒಂದು ಹಂತದಲ್ಲಿ ಕೇವಲ 20 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡ ಸಂಕಷ್ಟಕ್ಕೆ ಸಿಲುಕಿತು.

ಇದನ್ನೂ ಓದಿ : ಏಷ್ಯಾಕಪ್‌ ಫೈನಲ್‌, ಪಾಕಿಸ್ತಾನ – ಭಾರತ ವಿರುದ್ದ ಪಂದ್ಯದಿಂದ ಹಾರ್ದಿಕ್‌ ಪಾಂಡ್ಯ, ಅಭಿಷೇಕ್ ಶರ್ಮಾ ಔಟ್‌

ಈ ಹಂತದಲ್ಲಿ ಕ್ರೀಸ್‌ಗೆ ಇಳಿದ ತಿಲಕ್ ವರ್ಮಾ (ಅಜೇಯ 69 ರನ್, 53 ಎಸೆತ) ಹಾಗೂ ಶಿವಂ ದುಬೆ (33 ರನ್) ತಂಡಕ್ಕೆ ಆಸರೆಯಾದರು.

ತಿಲಕ್ ವರ್ಮಾ ಅವರ ಜವಾಬ್ದಾರಿಯುತ ಮತ್ತು ಬಿರುಸಿನ ಬ್ಯಾಟಿಂಗ್‌ನಿಂದಾಗಿ ಭಾರತವು ಕೊನೆಯ ಓವರ್‌ನಲ್ಲಿ 5 ವಿಕೆಟ್‌ಗಳ ರೋಚಕ ಜಯ ಸಾಧಿಸಿತು. ರಿಂಕು ಸಿಂಗ್ ಬೌಂಡರಿ ಬಾರಿಸುವ ಮೂಲಕ ಭಾರತಕ್ಕೆ ಗೆಲುವು ತಂದುಕೊಟ್ಟರು.

Aisa cup 2025 final : ಪಾಕಿಸ್ತಾನ ವಿರುದ್ದ ಭಾರತಕ್ಕೆ ಹ್ಯಾಟ್ರಿಕ್‌ ಗೆಲುವು

ಏಷ್ಯಾಕಪ್ ಇತಿಹಾಸದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಫೈನಲ್‌ನಲ್ಲಿ ಎದುರಾಳಿಯಾಗಿದ್ದು ಇದೇ ಮೊದಲ ಬಾರಿ ಎಂಬುದು ಗಮನಾರ್ಹ. ಈ ಗೆಲುವಿನೊಂದಿಗೆ ಭಾರತವು ಟೂರ್ನಮೆಂಟ್‌ನಲ್ಲಿ ಪಾಕಿಸ್ತಾನ ವಿರುದ್ಧ ಹ್ಯಾಟ್ರಿಕ್ ಜಯ ಸಾಧಿಸಿತು.

ಇದನ್ನೂ ಓದಿ : ಭಾರತ vs ವೆಸ್ಟ್ ಇಂಡೀಸ್ ಟೆಸ್ಟ್ ಸರಣಿ: ಕರುಣ್ ನಾಯರ್ ಔಟ್, 3 ಕನ್ನಡಿಗರಿಗೆ ಅವಕಾಶ

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories