ಗಬ್ಬರ್ ಜೀವನದಲ್ಲಿ ಹೊಸ ‘ಇನ್ನಿಂಗ್ಸ್’: ಸುದೀರ್ಘ ಕಾಲದ ಗೆಳತಿ ಸೋಫಿ ಶೈನ್ ಕೈಹಿಡಿದ ಶಿಖರ್ ಧವನ್!

Shikhar Dhawan Married girlfriend Sophie Shine: ಭಾರತೀಯ ಕ್ರಿಕೆಟ್‌ನ ‘ಗಬ್ಬರ್’ ಎಂದೇ ಖ್ಯಾತರಾದ ಸ್ಫೋಟಕ ಬ್ಯಾಟರ್ ಶಿಖರ್ ಧವನ್ ಶನಿವಾರ ತಮ್ಮ ಜೀವನದ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ. ದೆಹಲಿಯಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ತಮ್ಮ ಬಹುಕಾಲದ ಗೆಳತಿ ಸೋಫಿ ಶೈನ್ ಅವರೊಂದಿಗೆ ಧವನ್ ವಿವಾಹ ಮಹೋತ್ಸವ ನೆರವೇರಿದೆ.

ಪರಿಚಯ ಪ್ರೇಮಕ್ಕೆ ತಿರುಗಿದ್ದು ಹೇಗೆ?

ಧವನ್ ಮತ್ತು ಸೋಫಿ ಕಳೆದ ಕೆಲವು ವರ್ಷಗಳಿಂದ ಡೇಟಿಂಗ್ ನಡೆಸುತ್ತಿದ್ದರು. 2025ರ ಚಾಂಪಿಯನ್ಸ್ ಟ್ರೋಫಿ ವೇಳೆ ದುಬೈನಲ್ಲಿ ಇವರಿಬ್ಬರು ಮೊದಲ ಬಾರಿಗೆ ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಈ ವರ್ಷದ ಜನವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ, ಈಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಕ್ರಿಕೆಟಿಗ ಯುಜ್ವೇಂದ್ರ ಚಹಲ್ ಮದುವೆಯ ಸುಂದರ ಕ್ಷಣಗಳ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಈ ಸಿಹಿ ಸುದ್ದಿ ನೀಡಿದ್ದಾರೆ.

ಸೋಫಿ ಶೈನ್: ಗ್ಲಾಮರ್ ಲೋಕದಿಂದ ದೂರ ಉಳಿದ ‘ಮಾರ್ಕೆಟಿಂಗ್ ಮಿದುಳು’

ಸಾಮಾನ್ಯವಾಗಿ ಕ್ರಿಕೆಟಿಗರು ಚಿತ್ರರಂಗ ಅಥವಾ ಸೋಶಿಯಲ್ ಮೀಡಿಯಾ ಸ್ಟಾರ್‌ಗಳನ್ನು ವರಿಸುವುದು ಹೆಚ್ಚು. ಆದರೆ, ಸೋಫಿ ಶೈನ್ ಅವರ ಹಿನ್ನೆಲೆ ಸಂಪೂರ್ಣ ವಿಭಿನ್ನ ಮತ್ತು ಪ್ರಭಾವಶಾಲಿಯಾಗಿದೆ:

ಉನ್ನತ ಶಿಕ್ಷಣ: ಐರ್ಲೆಂಡ್ ಮೂಲದವರಾದ ಸೋಫಿ, ‘ಲಿಮರಿಕ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ’ಯಿಂದ ಮಾರ್ಕೆಟಿಂಗ್ ಮತ್ತು ಮ್ಯಾನೇಜ್‌ಮೆಂಟ್ ಪದವಿ ಪಡೆದಿದ್ದಾರೆ.

ಸಮಾಜ ಸೇವೆ: ಅವರು ಈಗ ಶಿಖರ್ ಧವನ್ ಫೌಂಡೇಶನ್‌ನ ಮುಖ್ಯಸ್ಥರಾಗಿಯೂ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

ವೃತ್ತಿಜೀವನ: ಪ್ರಸ್ತುತ ಅಬುಧಾಬಿಯ ‘ನಾರ್ದರ್ನ್ ಟ್ರಸ್ಟ್ ಕಾರ್ಪೊರೇಷನ್’ನಲ್ಲಿ ಸೆಕೆಂಡ್ ವೈಸ್ ಪ್ರೆಸಿಡೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

16 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಮೊಬೈಲ್ ಬ್ಯಾನ್? ಸಿಎಂ ಸಿದ್ದರಾಮಯ್ಯ ಹೊಸ ಮಾಸ್ಟರ್ ಪ್ಲಾನ್!

ಹಳೆಯ ಕಹ ನೆನಪು ಮರೆತು ಹೊಸ ಬಾಳು

ಶಿಖರ್ ಧವನ್ ಈ ಹಿಂದೆ ಆಯೇಷಾ ಮುಖರ್ಜಿ ಅವರನ್ನು ವಿವಾಹವಾಗಿದ್ದರು. 2023 ರಲ್ಲಿ ಇಬ್ಬರೂ ಕಾನೂನಾತ್ಮಕವಾಗಿ ವಿಚ್ಛೇದನ ಪಡೆದಿದ್ದರು. ಅವರಿಗೆ 11 ವರ್ಷದ ಝೋರಾವರ್ ಎಂಬ ಮಗನಿದ್ದಾನೆ. ಈಗ ಸೋಫಿ ಶೈನ್ ಅವರ ಆಗಮನದೊಂದಿಗೆ ಧವನ್ ಬದುಕಿನಲ್ಲಿ ಮತ್ತೆ ಸಂತಸದ ಕ್ಷಣಗಳು ಮರಳಿದಂತಾಗಿವೆ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories