ಏಷ್ಯಾಕಪ್ಗೆ ಸೂರ್ಯಕುಮಾರ್ ಯಾದವ್ ನಾಯಕ : ಅಯ್ಯರ್, ಜೈಸ್ವಾಲ್ ಔಟ್

Suryakumar Yadav Asia Cup 2025 : ಬೆಂಗಳೂರು : ಮುಂಬರುವ ಏಷ್ಯಾ ಕಪ್ 2025 ಗಾಗಿ ಭಾರತದ ತಂಡವನ್ನು ಆಗಸ್ಟ್ 19 ರಂದು ಪ್ರಕಟಿಸುವ ಸಾಧ್ಯತೆ ಇದೆ. ಟೀಮ್ ಇಂಡಿಯಾದ ನಾಯಕತ್ವವನ್ನು ಸೂರ್ಯಕುಮಾರ್ ಯಾದವ್ಗೆ ವಹಿಸುವ ಸಾಧ್ಯತೆ ಹೆಚ್ಚಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಸದ್ಯ ಸ್ಫೋರ್ಟ್ಸ್ ಹರ್ನಿಯಾ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿರುವ ಸೂರ್ಯಕುಮಾರ್ ಯಾದವ್ ಅವರು ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ನಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ಸೂರ್ಯ ಕುಮಾರ್ ಯಾದವ್ ಈಗಾಗಲೇ ನೆಟ್ಗೆ ಇಳಿದಿದ್ದು, ಆಯ್ಕೆ ಸಮಿತಿ ಸಭೆಗೆ ಮುಂಬೈನಲ್ಲಿ ಹಾಜರಾಗುವುದು ಬಹುತೇಕ ಖಚಿತವಾಗಿದೆ. ನಾಯಕನಾಗಿ ಸೂರ್ಯಕುಮಾರ್ ಯಾದವ್ ಅವರ ದಾಖಲೆ ಉತ್ತಮವಾಗಿದ್ದು, 15 ಟಿ20 ಪಂದ್ಯಗಳಲ್ಲಿ 13ರಲ್ಲಿ ಗೆಲುವು ಸಾಧಿಸಿದ್ದಾರೆ.
ಭಾರತ ಕ್ರಿಕೆಟ್ ತಂಡದಿಂದ ಪ್ರಮುಖ ಆಟಗಾರರು ಹೊರಗುಳಿಯುವ ಸಾಧ್ಯತೆಯಿದೆ. ಶುಭಮನ್ ಗಿಲ್, ಶ್ರೇಯಸ್ ಅಯ್ಯರ್ ಹಾಗೂ ಯಶಸ್ವಿ ಜೈಸ್ವಾಲ್ ಅವರಿಗೆ ತಂಡದಲ್ಲಿ ಸ್ಥಾನ ಸಿಗುವುದು ಅನುಮಾನ ಎನ್ನಲಾಗುತ್ತಿದೆ.
ಯಶಸ್ವಿ ಜೈಸ್ವಾಲ್ : ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಕಾರಣಕ್ಕೆ ಯಶಸ್ವಿ ಜೈಸ್ವಾಲ್ ಟೆಸ್ಟ್ ಸರಣಿಯ ಮೇಲೆಯೇ ಹೆಚ್ಚು ಗಮನ ಹರಿಸಲು ಸೂಚಿಸಲಾಗಿದೆ.
ಶ್ರೇಯಸ್ ಅಯ್ಯರ್ : ಐಪಿಎಲ್ 2025 ರಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮೊದಲ ಬಾರಿಗೆ ಫೈನಲ್ಗೆ ಕರೆದೊಯ್ದಿದ್ದ ಶ್ರೇಯಸ್ ಅಯ್ಯರ್ ಕೂಡ ಏಷ್ಯಾ ಕಪ್ನಿಂದ ಹೊರಗುಳಿಯುವ ಸಾಧ್ಯತೆ ಇದೆ. ಗಾಯದ ನಂತರ ಫಾರ್ಮ್ಗೆ ಮರಳಿದ್ದರೂ ಆಡುವುದು ಖಚಿತವಾಗಿಲ್ಲ.
ಏಷ್ಯಾ ಕಪ್ಗೆ ಆಯ್ಕೆಯಾಗುವ ತಂಡದ ಅಂತಿಮ ಘೋಷಣೆಯು ಆಗಸ್ಟ್ 19ರಂದು ನಡೆಯಲಿದೆ ಎಂದು ಬಿಸಿಸಿಐನ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : ಭಾರತ ಏಕದಿನ ತಂಡಕ್ಕೆ ಕೆಎಲ್ ರಾಹುಲ್ ನಾಯಕ
ಏಷ್ಯಾ ಕಪ್ 2025ರ ಭಾರತದ ಸಂಭಾವ್ಯ ತಂಡ
- ನಾಯಕ: ಸೂರ್ಯಕುಮಾರ್ ಯಾದವ್
- ಉಪನಾಯಕ: ಶುಭಮನ್ ಗಿಲ್
ಬ್ಯಾಟಿಂಗ್ ಕ್ರಮಾಂಕ
- ಸಂಜು ಸ್ಯಾಮ್ಸನ್ (ವಿಕೆಟ್ಕೀಪರ್)
- ಅಭಿಷೇಕ್ ಶರ್ಮಾ
- ತಿಲಕ್ ವರ್ಮಾ
- ರಿಂಕು ಸಿಂಗ್
- ಧ್ರುವ್ ಜುರೆಲ್ (ಮೀಸಲು ವಿಕೆಟ್ಕೀಪರ್)
ಆಲ್ರೌಂಡರ್ಗಳು
- ಹಾರ್ಧಿಕ್ ಪಾಂಡ್ಯ
- ಅಕ್ಷರ್ ಪಟೇಲ್
- ಶಿವಂ ದುಬೆ
- ವಾಷಿಂಗ್ಟನ್ ಸುಂದರ್
ಬೌಲರ್ಗಳು
- ಜಸ್ಪ್ರಿತ್ ಬುಮ್ರಾ
- ಅರ್ಷದೀಪ್ ಸಿಂಗ್
- ಹರ್ಷಿತ್ ರಾಣಾ
- ವರುಣ್ ಚಕ್ರವರ್ತಿ
- ಕುಲ್ದೀಪ್ ಯಾದವ್ ಅಥವಾ ರವಿ ಬಿಷ್ಣೋಯ್
ಇದನ್ನೂ ಓದಿ : ಸುನಿಲ್ ಗವಾಸ್ಕರ್ ದಾಖಲೆ ಉಡೀಸ್ ಮಾಡಿದ ಶುಭಮನ್ ಗಿಲ್
ಏಷ್ಯಾಕಪ್ಗೆ ಟೀಂ ಇಂಡಿಯಾ : ಪ್ರಮುಖ ಹೈಲೆಟ್ಸ್
ಸೂರ್ಯಕುಮಾರ್ ಯಾದವ್ ಅವರು ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಂಡು ತಂಡಕ್ಕೆ ಮರಳುತ್ತಿದ್ದು, ನಾಯಕತ್ವ ವಹಿಸಲಿದ್ದಾರೆ ಎಂದು ವರದಿಯಾಗಿದೆ.
ಶುಭಮನ್ ಗಿಲ್ ಉಪನಾಯಕರಾಗಿ ಸ್ಥಾನ ಪಡೆಯುವ ಸಾಧ್ಯತೆ ಇದೆ.
ಶ್ರೇಯಸ್ ಅಯ್ಯರ್ ಮತ್ತು ಯಶಸ್ವಿ ಜೈಸ್ವಾಲ್ ಅವರು ದುಲೀಪ್ ಟ್ರೋಫಿ ಪಂದ್ಯಾವಳಿಗಳಲ್ಲಿ ಭಾಗವಹಿಸುವುದರಿಂದ ಅವರನ್ನು ಏಷ್ಯಾ ಕಪ್ ತಂಡದಿಂದ ಕೈಬಿಡುವ ಸಾಧ್ಯತೆಯಿದೆ.
ಹಿರಿಯ ಆಟಗಾರರಾದ ಜಸ್ಪ್ರೀತ್ ಬುಮ್ರಾ ತಂಡಕ್ಕೆ ಸೇರ್ಪಡೆಯಾಗಲಿದ್ದಾರೆ.
ರಿಷಭ್ ಪಂತ್ ಗಾಯದಿಂದ ಇನ್ನೂ ಚೇತರಿಸಿಕೊಳ್ಳದ ಕಾರಣ ಅವರನ್ನು ತಂಡದಲ್ಲಿ ಪರಿಗಣಿಸಿಲ್ಲ.
Suryakumar Yadav to lead India in Asia Cup 2025 Shreyas Iyer, Yashasvi Jaiswal out



