IPL 2026: ಚಿನ್ನಸ್ವಾಮಿ ಅಂಗಳಕ್ಕೆ ಮರಳಿದ ಚಾಂಪಿಯನ್ RCB; ಕೊಹ್ಲಿ ಫಿಟ್ನೆಸ್ ಮತ್ತು ಅಭ್ಯಾಸದ ಅಪ್‌ಡೇಟ್ಸ್ ಇಲ್ಲಿದೆ
ಕ್ರಿಕೆಟ್ ಕಾಶಿ ಬೆಂಗಳೂರಿನಲ್ಲಿ ಮತ್ತೆ ಐಪಿಎಲ್ ಅಬ್ಬರ ಶುರುವಾಗುತ್ತಿದೆ. 2025ರಲ್ಲಿ ಚೊಚ್ಚಲ ಟ್ರೋಫಿ ಗೆದ್ದು ಇತಿಹಾಸ ಬರೆದಿದ್ದ ಆರ್‌ಸಿಬಿ, ಈಗ ತನ್ನ ಕಿರೀಟವನ್ನು ಉಳಿಸಿಕೊಳ್ಳಲು ಸಜ್ಜಾಗಿದೆ.
IPL 2026: ಬೆಂಗಳೂರು: ಕ್ರಿಕೆಟ್ ಕಾಶಿ ಬೆಂಗಳೂರಿನಲ್ಲಿ ಮತ್ತೆ ಐಪಿಎಲ್ ಅಬ್ಬರ ಶುರುವಾಗುತ್ತಿದೆ. 2025ರಲ್ಲಿ ಚೊಚ್ಚಲ ಟ್ರೋಫಿ ಗೆದ್ದು ಇತಿಹಾಸ ಬರೆದಿದ್ದ ಆರ್‌ಸಿಬಿ, ಈಗ ತನ್ನ ಕಿರೀಟವನ್ನು ಉಳಿಸಿಕೊಳ್ಳಲು ಸಜ್ಜಾಗಿದೆ. ಮಾರ್ಚ್ 28 ರಿಂದ ಐಪಿಎಲ್ 19ನೇ ಆವೃತ್ತಿ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ನಡೆಯಲಿದೆ ಎಂಬ ಸುದ್ದಿ ಅಭಿಮಾನಿಗಳಲ್ಲಿ ಸಂಭ್ರಮ ತಂದಿದೆ.
IPL 2026 : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಅಭ್ಯಾಸ
ಆರ್‌ಸಿಬಿ ತನ್ನ ಪ್ರಮುಖ ಅಭ್ಯಾಸ ಶಿಬಿರವನ್ನು (Practice Camp) ಶೀಘ್ರದಲ್ಲೇ ಆರಂಭಿಸಲಿದೆ. ತಂಡದ ಆಟಗಾರರು ನೆಟ್ಸ್‌ನಲ್ಲಿ ಬೆವರು ಹರಿಸಲು ಸಜ್ಜಾಗುತ್ತಿದ್ದು, ಸ್ಥಳೀಯ ಪ್ರತಿಭೆಗಳೊಂದಿಗೆ ಕೆಲವು ಅಭ್ಯಾಸ ಪಂದ್ಯಗಳನ್ನು ಆಡುವ ಯೋಜನೆಯೂ ಇದೆ. ಈ ಬಾರಿ ತಂಡವು ತನ್ನ 7 ಹೋಮ್ ಪಂದ್ಯಗಳ ಪೈಕಿ 5 ಪಂದ್ಯಗಳನ್ನು ಬೆಂಗಳೂರಿನಲ್ಲಿ ಮತ್ತು 2 ಪಂದ್ಯಗಳನ್ನು ರಾಯ್‌ಪುರದಲ್ಲಿ ಆಡಲಿದೆ ಎಂದು ದೃಢಪಟ್ಟಿದೆ.
ಆರ್‌ಸಿಬಿ ತಂಡದ ಯಾವೆಲ್ಲಾ ಆಟಗಾರರು ಫಿಟ್
ವಿರಾಟ್ ಕೊಹ್ಲಿ: 2026ರಲ್ಲೂ ವಿರಾಟ್ ಕೊಹ್ಲಿ ಅದ್ಭುತ ಫಿಟ್ನೆಸ್ ಕಾಯ್ದುಕೊಂಡಿದ್ದು, ತಂಡದ ಬ್ಯಾಟಿಂಗ್ ಬೆನ್ನೆಲುಬಾಗಿದ್ದಾರೆ. ಅವರ ರನ್ ಹಸಿವು ಈ ಬಾರಿಯೂ ಆರ್‌ಸಿಬಿಗೆ ವರದಾನವಾಗಲಿದೆ.
ಜೋಶ್ ಹ್ಯಾಜಲ್‌ವುಡ್: ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ವೇಗಿ ಹ್ಯಾಜಲ್‌ವುಡ್ ಈಗ ಸಂಪೂರ್ಣ ಚೇತರಿಸಿಕೊಂಡಿದ್ದು, ಐಪಿಎಲ್ 2026 ಕ್ಕೆ ಲಭ್ಯವಿರುವುದಾಗಿ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಸ್ಪಷ್ಟಪಡಿಸಿದೆ. ಇದು ತಂಡದ ಬೌಲಿಂಗ್ ವಿಭಾಗಕ್ಕೆ ಆನೆಬಲ ಬಂದಂತಾಗಿದೆ.
ಗಾಯದ ಆತಂಕ: ರಜತ್ ಪಾಟಿದಾರ್ ಮತ್ತು ಫಿಲ್ ಸಾಲ್ಟ್ ಅಲ್ಪಸ್ವಲ್ಪ ಫಿಟ್ನೆಸ್ ಸಮಸ್ಯೆ ಎದುರಿಸುತ್ತಿದ್ದರೂ, ಟೂರ್ನಿ ಆರಂಭದ ವೇಳೆಗೆ ಅವರು ಚೇತರಿಸಿಕೊಳ್ಳುವ ವಿಶ್ವಾಸವಿದೆ.
ಬದಲಾವಣೆ ಆಗುತ್ತಾ ಆರ್‌ಸಿಬಿ ನಾಯಕತ್ವ ?:
ಈ ಬಾರಿ ರಾಜತ್ ಪಾಟಿದಾರ್ ತಂಡವನ್ನು ಮುನ್ನಡೆಸುವ ಸಾಧ್ಯತೆಗಳಿದ್ದು, ಅನುಭವಿಗಳಾದ ಕೊಹ್ಲಿ ಮತ್ತು ಕುನಾಲ್ ಪಾಂಡ್ಯ ಅವರ ಮಾರ್ಗದರ್ಶನ ತಂಡಕ್ಕೆ ಸಿಗಲಿದೆ. 84 ಪಂದ್ಯಗಳ ಸುದೀರ್ಘ ಟೂರ್ನಿಯಲ್ಲಿ ಆರ್‌ಸಿಬಿ ಸತತ ಎರಡನೇ ಬಾರಿ ಟ್ರೋಫಿ ಗೆಲ್ಲುತ್ತಾ ಎಂಬ ಕುತೂಹಲ ಎಲ್ಲರಲ್ಲಿದೆ.
virat kohli fitness rcb home matches chinnaswamy stadium IPL 2026



