ನಟಿ ಸಂಜನಾಗೆ ಸಿಸಿಬಿ ಬಿಗ್ ಶಾಕ್ : ನಿವಾಸದ ಮೇಲೆ ದಾಳಿ, ಬಂಧನ ಭೀತಿ

0

ಬೆಂಗಳೂರು : ಸ್ಯಾಂಡಲ್​ವುಡ್​ ಡ್ರಗ್ಸ್ ದಂಧೆ ವಿಚಾರಕಕೆ ಸಂಬಂಧಿಸಿದಂತೆ ನಟಿ ಸಂಜನಾ ಗಲ್ರಾನಿಗೆ ಸಿಸಿಬಿ ಅಧಿಕಾರಿಗಳು ಬಿಗ್ ಶಾಕ್ ಕೊಟ್ಟಿದ್ದಾರೆ. ಬೆಳ್ಳಂಬೆಳಗ್ಗೆಯೇ ನಟಿ ಸಂಜನಾ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಇದೀಗ ನಟಿ ಬಂಧನದ ಭೀತಿ ಎದುರಾಗಿದೆ.

ಡ್ರಗ್ಸ್ ದಂಧೆಯಲ್ಲಿ ಸಂಜನಾ ಹೆಸರು ಕೇಳಿಬಂದ ಬೆನ್ನಲ್ಲೇ ಸಂಜನಾ ಆಪ್ತ ರಾಹುಲ್ ನನ್ನು ಸಿಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಇದೀಗ ಬೆಂಗಳೂರಿನ ಇಂದಿರಾನಗರದಲ್ಲಿರುವ ಸಂಜನಾ ಪ್ಲ್ಯಾಟ್ ಮೇಲೆ ಬೆಳ್ಳಂಬೆಳಗ್ಗೆಯೇ ಸಿಸಿಬಿ ದಾಳಿ ನಡೆಸಿದೆ. ಸಿಬಿ ಇನ್ಸ್​ಪೆಕ್ಟರ್ ಅಂಜುಮಾಲ, ಪೂರ್ಣಿಮಾ ನೇತೃತ್ವ ತಂಡದಿಂದ ದಾಳಿ ನಡೆದಿದೆ.

ಆರಕ್ಕೂ ಅಧಿಕ ಅಧಿಕಾರಿಗಳು ಒಟ್ಟು ಮೂರು ವಾಹನಗಳಲ್ಲಿ ಬಂದಿದ್ದಾರೆ. ಸಂಜನಾ ಆಪ್ತ ರಾಹುಲ್ ಹೇಳಿಕೆ‌ ಆಧಾರದ ಮೇಲೆ ದಾಳಿ ಮಾಡಲಾಗಿದೆ. ಸಿಸಿಬಿ ಅಧಿಕಾರಿಗಳು ಮನೆ ಪರಿಶೀಲನೆಯಲ್ಲಿ ತೊಡಗಿದ್ದು, ಸಂಜನಾ ಮನೆಯಲ್ಲಿ ಇದ್ದಾರೆಂದು ಮಾಹಿತಿ ತಿಳಿದುಬಂದಿದೆ.

ಈ ಮೊದಲು ನಟಿ ರಾಗಿಣಿ ನಿವಾಸದ ಮೇಲೂ ಇದೇ ರೀತಿ ದಾಳಿ ನಡೆಸಿದ್ದ ಅಧಿಕಾರಿಗಳು ಬಳಿಕ ಅವರನ್ನು ವಿಚಾರಣೆಗೆ ಕರೆಸಿಕೊಂಡು ಬಂಧನಕ್ಕೊಳಪಡಿಸಿದ್ದರು.

ಇದೀಗ ಸಂಜನಾ ಮನೆ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ಸಂಜನಾ ಅವರನ್ನೂ ಬಂಧನಕ್ಕೆ ಒಳಪಡಿಸು ತ್ತಾರಾ ಎಂಬ ಪ್ರಶ್ನೆ ಮೂಡಿದೆ. ಅಧಿಕಾರಿಗಳು ಸಂಜನಾ ನಿವಾಸದಲ್ಲಿ ಪರಿಶೀಲನೆ ನಡೆಸಿದ್ದು, ಬಳಿಕ ಅವರನ್ನು ವಿಚಾರಣೆಗೆ ಬರುವಂತೆ ಸೂಚಿಸುವ ಸಾಧ್ಯತೆಯಿದೆ.

Leave A Reply

Your email address will not be published.