ಅತ್ಯಾಚಾರದ ದೂರು ನೀಡಲು ರಾಜ್ಯ ಬಿಟ್ಟು ಬೇರೆ ರಾಜ್ಯಕ್ಕೆ ಬಂದ ಸಂತ್ರಸ್ಥೆ…!

0

ಮಹಾರಾಷ್ಟ್ರ: ದೇಶದಲ್ಲಿ ಅತ್ಯಾಚಾರ ಸಂತ್ರಸ್ಥೆಯರ ಸಂಕಷ್ಟ ಕೇಳೋರಿಲ್ಲ ಎಂಬ ಆಪಾದನೆಗಳು ಕೇಳಿ ಬರ್ತಿರೋ ಬೆನ್ನಲ್ಲೇ, ತನ್ನ ಮೇಲೆ ನಡೆದ ಅತ್ಯಾಚಾರದ ದೂರು ದಾಖಲಿಸೋಕೆ ಸಂತ್ರಸ್ಥ ಯುವತಿ ಬರೋಬ್ಬರಿ 800 ಕಿಲೋಮೀಟರ್ ಪ್ರಯಾಣಿಸಿ ರಾಜ್ಯ ಬಿಟ್ಟು ಬೇರೆ ರಾಜ್ಯಕ್ಕೆ ಬಂದ ಘಟನೆ ವರದಿಯಾಗಿದೆ.

ಅತ್ಯಾಚಾರ ನಡೆಸಿದ ಯುವಕನ ಬೆದರಿಕೆಯಿಂದ ಕಂಗೆಟ್ಟ ಯುವತಿ ಅತ್ಯಾಚಾರ ನಡೆದ ಉತ್ತರ ಪ್ರದೇಶದ ಲಖ್ನೋದಿಂದ ಮಹಾರಾಷ್ಟ್ರದ ನಾಗಪುರಕ್ಕೆ ಬಂದು ದೂರು ದಾಖಲಿಸಿ ತನ್ನ ಸಂಕಷ್ಟವನ್ನು ಪೊಲೀಸರ ಮುಂದೆ ಹೇಳಿಕೊಂಡಿದ್ದಾಳೆ.


ನೇಪಾಳ ಮೂಲದ ಯುವತಿ ಕೆಲಸ ಅರಸಿ ಉತ್ತರ ಪ್ರದೇಶಕ್ಕೆ ಬಂದು ಫೈಜಾಬಾದ್‍ನಲ್ಲಿ ಸ್ನೇಹಿತೆಯೊಂದಿಗೆ ಪ್ಲ್ಯಾಟ್‍ನಲ್ಲಿ ವಾಸವಾಗಿದ್ದಳು. ಸ್ನೇಹಿತೆ ತನ್ನ ಸ್ನೇಹಿತನಾಗಿದ್ದ ಆರೋಪಿ ದುಬೈಯಲ್ಲಿ ಉದ್ಯೋಗದಲ್ಲಿದ್ದ ಪ್ರವೀಣ್ ರಾಜಪಾಲ್ ಯಾದವ್ ಎಂಬಾತನಿಗೆ ಸಂತ್ರಸ್ಥೆಯನ್ನು ಪರಿಚಯಿಸಿದ್ದು, ಸ್ನೇಹಿತರಾಗಿದ್ದರು ಎನ್ನಲಾಗಿದೆ. ಕೆಲ ದಿನದಲ್ಲಿ ಸಂತ್ರಸ್ಥ ಯುವತಿ ಹಾಗೂ ಆಕೆಯ ಸ್ನೇಹಿತೆಯ ನಡುವೆ ಹಣಕಾಸಿನ ವಿಷಯಕ್ಕೆ ಮನಸ್ತಾಪ ಉಂಟಾಗಿದೆ. ಈ ವಿಚಾರವನ್ನು ಸಂತ್ರಸ್ಥೆ ಸ್ನೇಹಿತ ಪ್ರವೀಣ್ ಗೆ ತಿಳಿಸಿದಾಗ ಆತ ಆಕೆಗೆ ಸ್ಥಳೀಯ ಹೊಟೇಲ್ ಒಂದರಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದ್ದ.
ಕೆಲ ದಿನಗಳ ನಂತರ ದುಬೈನಿಂದ ಬಂದ ಪ್ರವೀಣ್, ಸಂತ್ರಸ್ಥೆ ವಾಸವಾಗಿದ್ದ ಹೊಟೇಲ್ ರೂಮ್‍ಗೆ ಬಂದು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ. ಅಲ್ಲದೇ ಆಕ್ಷೇಪಾರ್ಹ ರೀತಿಯಲ್ಲಿ ಆಕೆಯ ಪೋಟೋಗಳನ್ನು ಕೂಡ ತೆಗೆದುಕೊಂಡಿದ್ದಾನೆ. ಇದನ್ನು ಪ್ರಶ್ನಿಸಿದ್ದಕ್ಕೆ ಆರೋಪಿ ಪ್ರವೀಣ್ ಸಂತ್ರಸ್ಥೆಗೆ ಬೆದರಿಕೆ ಹಾಕಿದ್ದು, ಒಂದೊಮ್ಮೆ ಪೊಲೀಸರಿಗೆ ದೂರು ನೀಡಿದರೆ ಆ ಪೋಟೋಗಳನ್ನು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡೋದಾಗಿ ಬೆದರಿಸಿದ್ದಾನೆ. ಇದರಿಂದ ಹೆದರಿದ ಸಂತ್ರಸ್ಥೆ ಮೌನವಾಗಿದ್ದಳು.


ಆ ಬಳಿಕ ಪ್ರವೀಣ್ ಹಲವು ಬಾರಿ ಆಕೆಯನ್ನು ಬೆದರಿಸಿ ಅತ್ಯಾಚಾರ ಎಸಗಿದ್ದು, ಡ್ರಗ್ಸ್ ನೀಡಿ ಕೂಡ ಅತ್ಯಾಚಾರ ಎಸಗಿದ್ದಾನೆ. ಈತ ಕೃತ್ಯದಿಂದ ಬೇಸತ್ತ ಸಂತ್ರಸ್ಥೆ ಕೊನೆಗೆ ಆತನ ಕಣ್ಣುತಪ್ಪಿಸಿ ಸ್ನೇಹಿತೆಯ ಸಹಾಯದಿಂದ ಲಖ್ನೋದಿಂದ ಮಹಾರಾಷ್ಟ್ರದ ನಾಗ್ಪುರಕ್ಕೆ ಬಂದು ಅಲ್ಲಿಯ ಸ್ಥಳೀಯ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.


ಆಕೆಯ ಸ್ನೇಹಿತ ಪ್ರವೀಣ್ ಹಾಗೂ ಆಕೆಯ ಸ್ನೇಹಿತೆಯ ಮೇಲೂ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಘಟನೆ ನಡೆದ ಲಖ್ನೋದ ಚಿನ್ ಹಾಟ್ ಪೊಲೀಸ ಠಾನೆಯಲ್ಲಿ ಪ್ರಕರಣ ದಾಖಲಿಸಿ ಸಂತ್ರಸ್ಥೆ ವರ್ಗಾಯಿಸಲು ತೆರಳುತ್ತಿರೋದಾಗಿ ನಾಗ್ಪುರದ ಹಿರಿಯ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ. ಸಪ್ಟೆಂಬರ್ 30 ರಂದು ಪ್ರಕರಣ ಬೆಳಕಿಗೆ ಬಂದಿದೆ.

Leave A Reply

Your email address will not be published.