Selfie With Gun : ಗನ್‌ ಜೊತೆ ಸೆಲ್ಪಿ ಹುಚ್ಚು : ಗುಂಡು ಸಿಡಿದು ನವವಿವಾಹಿತೆ ಸಾವು

ಲಕ್ನೋ : ಇತ್ತೀಚಿನ ವರ್ಷಗಳಲ್ಲಿ ಸೆಲ್ಪಿ ಕ್ರೇಜ್‌ ಹೆಚ್ಚುತ್ತಿದೆ. ಅದ್ರಲ್ಲೂ ಹಲವರು ಸೆಲ್ಪಿ ತೆಗೆಯೋ ಹೊತ್ತಲ್ಲೇ ಸಾವಿಗೂ ಶರಣಾಗುತ್ತಿದ್ದಾರೆ. ಅಂತೆಯೇ ಇಲ್ಲೊಬ್ಬಳು ನವವಿವಾಹಿತೆ ಲೋಡೆಡ್‌ ಬಂದೂಕಿನ ಜೊತೆಗೆ ಸೆಲ್ಪಿ ತೆಗೆಯೋಕೆ ಹೋಗಿ ಪರಲೋಕ ಸೇರಿದ್ದಾರೆ.

ಲಕ್ನೋದ ನಿವಾಸಿಯಾಗಿರುವ ರಾಧಿಕಾ ಗುಪ್ತಾ (26 ವರ್ಷ) ಎಂಬಾಕೆಯೇ ಗುಂಡೇಟಿಗೆ ಬಲಿಯಾದ ಮಹಿಳೆ. ಮನೆಯಲ್ಲಿದ್ದ ಬಂದೂಕು ತೆಗೆದು ರಾಧಿಕಾ ಗುಪ್ತಾ ಸೆಲ್ಪಿ ತೆಗೆಯೋದಕ್ಕೆ ಮುಂದಾಗಿದ್ದಾರೆ. ಆದರೆ ಗನ್‌ ಲೋಡ್‌ ಆಗಿರೋ ವಿಚಾರ ರಾಧಿಕಾಗೆ ಗೊತ್ತೇ ಇರಲಿಲ್ಲ. ಸೆಲ್ಪಿ ಕ್ಲಿಕ್‌ ಮಾಡೋ ಬರದಲ್ಲಿ ಮೊಬೈಲ್‌ ಬದಲು ಗನ್‌ ಟ್ರಿಗರ್‌ ಒತ್ತಿದ್ದಾರೆ.

ಇದನ್ನೂ ಓದಿ : ಸರಸದ ವೇಳೆ ಸಿಕ್ಕಿಬಿದ್ದವನ ಮರ್ಮಾಂಗ ಕತ್ತರಿಸಿ ಕೊಲೆ, ಹುಡುಗಿ ಮನೆ ಎದುರಲ್ಲೇ ಬಾಲಕನ ಅಂತ್ಯಕ್ರೀಯೆ

ರಾಧಿಕಾ ತನ್ನ ಗಂಟಲಿಗೆ ಸರಿಯಾಗಿ ಗನ್‌ ಹಿಡಿದು ಸೆಲ್ಪಿ ತೆಗೆದುಕೊಳ್ಳುತ್ತಿದ್ದರು. ಹೀಗಾಗಿ ಗುಂಡು ನೇರವಾಗಿ ಗಂಟಲಿಗೆ ಸಿಡಿದಿದೆ. ಇದರಿಂದಾಗಿ ರಾಧಿಕಾ ಸ್ಥಳದಲ್ಲಿಯೇ ಸಾವನ್ನಪ್ಪಿ ದ್ದಾರೆ. ರಾಧಿಕಾಗೆ ಗನ್‌ ಅಂದ್ರೆ ವಿಪರೀತ ವ್ಯಾಮೋಹ. ಗನ್‌ ಜೊತೆಗೆ ಆಗಾಗಾ ಪೋಟೋಗಳನ್ನು ಕ್ಲಿಕ್ಕಿಸಿಕೊಳ್ಳುತ್ತಿದ್ದಳಂತೆ ಎಂದು ರಾಧಿಕಾ ಪತಿ ಆಕಾಶ್‌ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆಯಷ್ಟೇ ಅನುಮತಿ ಪಡೆದು ಗನ್‌ ಅನ್ನು ಮನೆಗೆ ತರಲಾಗಿತ್ತು. ಆದರೆ ಗನ್‌ ಲೋಡ್‌ ಆಗಿರೋ ವಿಚಾರ ಮಾತ್ರ ಗೊತ್ತಿರದೇ ಈ ದುರಂತ ಸಂಭವಿಸಿದೆ ಎಂದು ರಾಧಿಕಾರ ಮಾವ ರಾಜೇಶ್ ಗುಪ್ತಾ ತಿಳಿಸಿದ್ದಾರೆ. ಆದರೆ ಮಹಿಳೆಯ ಪೋಷಕರು ಇದೊಂದು ಕೊಲೆ ಎಂದು ಆರೋಪಿಸಿದ್ದಾರೆ. ಹೀಗಾಗಿ ಪೊಲೀಸರು ಈ ಕುರಿತು ತನಿಖೆಯನ್ನು ನಡೆಸುತ್ತಿದ್ದಾರೆ.

Comments are closed.