ದಿನ ಭವಿಷ್ಯ: ಮಾರ್ಚ್ 24, 2026 – ಇಂದು ಯಾವ ರಾಶಿಯವರಿಗೆ ‘ಮಂಗಳ’ ಉಂಟು ? ಯಾರಿಗೆ ಅದೃಷ್ಟದ ಬಲ

ಇಂದು ಚೈತ್ರ ಮಾಸದ ಶುಕ್ಲ ಪಕ್ಷದ ಷಷ್ಠಿ ತಿಥಿ. ಮಂಗಳವಾರ ಹನುಮಂತ ಮತ್ತು ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆಗೆ ಅತ್ಯಂತ ಪ್ರಶಸ್ತವಾದ ದಿನ. ಇಂದಿನ ದ್ವಾದಶ ರಾಶಿಗಳ ಫಲ ಹೀಗಿದೆ

ಇಂದು ಚೈತ್ರ ಮಾಸದ ಶುಕ್ಲ ಪಕ್ಷದ ಷಷ್ಠಿ ತಿಥಿ. ಮಂಗಳವಾರ ಹನುಮಂತ ಮತ್ತು ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆಗೆ ಅತ್ಯಂತ ಪ್ರಶಸ್ತವಾದ ದಿನ. ಇಂದಿನ ದ್ವಾದಶ ರಾಶಿಗಳ ಫಲ ಹೀಗಿದೆ:

ಮೇಷರಾಶಿ (Aries)
ರಿಯಲ್ ಎಸ್ಟೇಟ್ ಅಥವಾ ಭೂಮಿ ವ್ಯವಹಾರದಲ್ಲಿ ತೊಡಗಿರುವವರಿಗೆ ಇಂದು ಭಾರಿ ಲಾಭದ ದಿನ. ಹಳೆಯ ಕೋರ್ಟ್ ಕೇಸ್‌ಗಳಿಂದ ಮುಕ್ತಿ ಸಿಗಲಿದೆ. ಕೋಪದ ಮೇಲೆ ನಿಗಾ ಇರಲಿ.

ವೃಷಭರಾಶಿ (Taurus)
ಹಣಕಾಸಿನ ಹರಿವು ಸಾಧಾರಣವಾಗಿರಲಿದೆ. ದೂರದ ಪ್ರಯಾಣದ ಯೋಜನೆ ಹಾಕುವಿರಿ. ನಿಮ್ಮ ಆಲೋಚನೆಗಳನ್ನು ಕಾರ್ಯರೂಪಕ್ಕೆ ತರಲು ಇಂದು ಸರಿಯಾದ ಸಮಯ.

ಮಿಥುನರಾಶಿ (Gemini)
ಸಂಗಾತಿಯೊಂದಿಗೆ ಕಿರು ಮನಸ್ತಾಪ ಉಂಟಾಗಬಹುದು, ತಾಳ್ಮೆ ಇರಲಿ. ಉದ್ಯೋಗದಲ್ಲಿ ನಿಮ್ಮ ಶ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗಲಿದೆ. ಕಚೇರಿಯಲ್ಲಿ ಹೊಸ ಜವಾಬ್ದಾರಿ ಸಿಗಬಹುದು.

ಕರ್ಕಾಟಕರಾಶಿ (Cancer)
ಆರೋಗ್ಯದ ಬಗ್ಗೆ ಎಚ್ಚರವಿರಲಿ, ಹೊರಗಿನ ಆಹಾರ ಸೇವನೆ ಮಾಡಬೇಡಿ. ಕುಟುಂಬದ ಹಿರಿಯರ ಬೆಂಬಲ ನಿಮಗೆ ಸಿಗಲಿದೆ. ಆರ್ಥಿಕವಾಗಿ ಖರ್ಚು ಅಧಿಕವಾಗಿರಲಿದೆ.

ಸಿಂಹರಾಶಿ (Leo)
ಇಂದು ಅದೃಷ್ಟದ ಬಲ ನಿಮಗಿದೆ. ಅನಿರೀಕ್ಷಿತ ಧನ ಲಾಭವಾಗಲಿದೆ. ಹೊಸ ಕೆಲಸಕ್ಕೆ ಸೇರಲು ಬಯಸುವವರಿಗೆ ಇಂದು ಶುಭ ಸುದ್ದಿ ಕೇಳಿಬರಲಿದೆ.

ಕನ್ಯಾರಾಶಿ (Virgo)
ವಿದ್ಯಾರ್ಥಿಗಳಿಗೆ ಉತ್ತಮ ದಿನ. ಪರೀಕ್ಷಾ ತಯಾರಿಗೆ ಸಕಾಲ. ಮನೆಯಲ್ಲಿ ಮಂಗಳ ಕಾರ್ಯಗಳು ನಡೆಯುವ ಬಗ್ಗೆ ಚರ್ಚೆಯಾಗಲಿದೆ. ವ್ಯವಹಾರದಲ್ಲಿ ಅನಿರೀಕ್ಷಿತ ತಿರುವು ಸಿಗಲಿದೆ.

ತುಲಾರಾಶಿ (Libra)
ಬರವಣಿಗೆ ಮತ್ತು ಕಲೆಯ ಕ್ಷೇತ್ರದಲ್ಲಿ ಇರುವವರಿಗೆ ಮನ್ನಣೆ ಸಿಗಲಿದೆ. ಸಾಲ ನೀಡುವಾಗ ಎಚ್ಚರಿಕೆ ಇರಲಿ. ಮಕ್ಕಳ ಕಡೆಯಿಂದ ನೆಮ್ಮದಿಯ ಸುದ್ದಿ ಸಿಗಲಿದೆ.

ವೃಶ್ಚಿಕರಾಶಿ (Scorpio)
ಮಂಗಳವಾರ ನಿಮಗೆ ವಿಶೇಷವಾದ ದಿನ. ದೈಹಿಕ ಶಕ್ತಿ ಮತ್ತು ಆತ್ಮವಿಶ್ವಾಸ ಹೆಚ್ಚಿರಲಿದೆ. ಹೊಸ ವಾಹನ ಖರೀದಿಸುವ ಕನಸು ನನಸಾಗುವ ಸಾಧ್ಯತೆ ಇದೆ.

Also Read : ಮಹಾಲಕ್ಷ್ಮಿ ರಾಜಯೋಗ ಎಂದರೇನು? ಯಾವ ರಾಶಿಯವರಿಗಿದೆ ರಾತ್ರೋರಾತ್ರಿ ಶ್ರೀಮಂತರಾಗುವ ಭಾಗ್ಯ?

ಧನುರಾಶಿ (Sagittarius)
ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಲಿದೆ. ತೀರ್ಥಯಾತ್ರೆಯ ಯೋಜನೆ ಮಾಡುವಿರಿ. ಸಾಮಾಜಿಕ ಕೆಲಸಗಳಲ್ಲಿ ಭಾಗವಹಿಸಿ ಪ್ರಶಂಸೆ ಪಡೆಯುವಿರಿ.

ಮಕರರಾಶಿ (Capricorn)
ಕೆಲಸದ ಒತ್ತಡದಿಂದ ಮಾನಸಿಕ ಕಿರಿಕಿರಿ ಉಂಟಾಗಬಹುದು. ಯೋಗ ಮತ್ತು ಧ್ಯಾನದಿಂದ ನೆಮ್ಮದಿ ಪಡೆಯಿರಿ. ಹಿರಿಯರ ಆಸ್ತಿಯಲ್ಲಿ ಪಾಲ ಸಿಗುವ ಸಾಧ್ಯತೆ ಇದೆ.

ಕುಂಭರಾಶಿ (Aquarius)
ಅನಿರೀಕ್ಷಿತವಾಗಿ ಹಳೆಯ ಸ್ನೇಹಿತರನ್ನು ಭೇಟಿ ಮಾಡುವಿರಿ. ವ್ಯಾಪಾರದಲ್ಲಿ ಹೊಸ ಪಾಲುದಾರಿಕೆ ಆರಂಭಿಸಲು ಉತ್ತಮ ದಿನ. ಕುಟುಂಬದಲ್ಲಿ ಸಂತೋಷ ಇರಲಿದೆ.

ಮೀನರಾಶಿ (Pisces)
ವಿರೋಧಿಗಳ ಮೇಲೆ ಜಯ ಸಾಧಿಸುವಿರಿ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಇರುವವರಿಗೆ ಬಡ್ತಿ ಸಿಗುವ ಯೋಗವಿದೆ. ಪ್ರೀತಿಪಾತ್ರರ ಜೊತೆ ಸುಂದರ ಸಮಯ ಕಳೆಯುವಿರಿ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories