ಇಂದಿನ ದಿನಭವಿಷ್ಯ: ಮೇ 11ರಂದು ಈ ರಾಶಿಯವರಿಗೆ ಒಲಿಯಲಿದೆ ಧನಲಕ್ಷ್ಮಿ! ನಿಮ್ಮ ರಾಶಿ ಫಲ ಇಲ್ಲಿದೆ
ಇಂದು ಯಾವ ರಾಶಿಯವರಿಗೆ ಆರ್ಥಿಕ ಲಾಭ ಕಾದಿದೆ, ಯಾರಿಗೆ ವೃತ್ತಿ ಜೀವನದಲ್ಲಿ ಸವಾಲುಗಳು ಎದುರಾಗಲಿವೆ ಹಾಗೂ ಯಾವ ರಾಶಿಯವರು ಇಂದು ಪ್ರಯಾಣದ ಸಮಯದಲ್ಲಿ ಎಚ್ಚರಿಕೆ ವಹಿಸಬೇಕು ?

ದಿನಭವಿಷ್ಯ 2026ರ ಮೇ ತಿಂಗಳ 11ನೇ ತಾರೀಕು, ಸೋಮವಾರ. ಹೊಸ ವಾರದ ಆರಂಭದ ದಿನದಂದು ಗ್ರಹಗತಿಗಳ ಚಲನೆ ನಿಮ್ಮ ರಾಶಿಯ ಮೇಲೆ ಎಂತಹ ಪ್ರಭಾವ ಬೀರಲಿದೆ? ಇಂದು ಯಾವ ರಾಶಿಯವರಿಗೆ ಆರ್ಥಿಕ ಲಾಭ ಕಾದಿದೆ, ಯಾರಿಗೆ ವೃತ್ತಿ ಜೀವನದಲ್ಲಿ ಸವಾಲುಗಳು ಎದುರಾಗಲಿವೆ ಹಾಗೂ ಯಾವ ರಾಶಿಯವರು ಇಂದು ಪ್ರಯಾಣದ ಸಮಯದಲ್ಲಿ ಎಚ್ಚರಿಕೆ ವಹಿಸಬೇಕು ?
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೇಷದಿಂದ ಮೀನ ರಾಶಿಯವರೆಗಿನ ದ್ವಾದಶ ರಾಶಿಗಳ ಇಂದಿನ ಸಂಪೂರ್ಣ ಭವಿಷ್ಯ ಹಾಗೂ ಶುಭ-ಅಶುಭ ಫಲಗಳ ವಿವರ ಇಲ್ಲಿದೆ ನೋಡಿ.
ಮೇಷ ರಾಶಿ (Aries)
ಇಂದು ಮೇಷ ರಾಶಿಯವರಿಗೆ ಆರ್ಥಿಕವಾಗಿ ಲಾಭದಾಯಕ ದಿನ. ಉದ್ಯೋಗದಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಮನ್ನಣೆ ಸಿಗಲಿದೆ. ವ್ಯಾಪಾರಸ್ಥರಿಗೆ ಹೊಸ ಹೂಡಿಕೆಯಿಂದ ಲಾಭವಾಗುವ ಸಾಧ್ಯತೆ ಇದೆ. ಕುಟುಂಬದಲ್ಲಿ ನೆಮ್ಮದಿ ಇರಲಿದ್ದು, ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯುವಿರಿ. ಆರೋಗ್ಯದ ಕಡೆಗೆ ಸ್ವಲ್ಪ ಗಮನ ಹರಿಸುವುದು ಉತ್ತಮ. ಹಳೆಯ ಮಿತ್ರರ ಭೇಟಿಯಾಗುವ ಸಂಭವವಿದೆ.
ವೃಷಭ ರಾಶಿ (Taurus)
ನಿಮ್ಮ ತಾಳ್ಮೆ ಇಂದು ಪರೀಕ್ಷಿಸಲ್ಪಡಬಹುದು. ಕಚೇರಿಯಲ್ಲಿ ಸಹೋದ್ಯೋಗಿಗಳೊಂದಿಗೆ ವಾದ ಮಾಡಬೇಡಿ. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕುವುದು ಅಗತ್ಯ. ಹೊಸ ಕೆಲಸ ಆರಂಭಿಸುವ ಮುನ್ನ ಹಿರಿಯರ ಸಲಹೆ ಪಡೆಯಿರಿ. ಆರೋಗ್ಯದ ವಿಷಯದಲ್ಲಿ ಜಾಗರೂಕರಾಗಿರಿ, ವಿಶೇಷವಾಗಿ ಆಹಾರ ಕ್ರಮದ ಬಗ್ಗೆ ಗಮನವಿರಲಿ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗಲಿದ್ದು, ಮನಸ್ಸಿಗೆ ಶಾಂತಿ ದೊರೆಯಲಿದೆ.
ಮಿಥುನ ರಾಶಿ (Gemini)
ಶುಭ ಫಲಗಳು ದೊರೆಯಲಿವೆ. ಹೊಸ ಕೆಲಸದ ಅವಕಾಶಗಳು ಹುಡುಕಿಕೊಂಡು ಬರಲಿವೆ. ಸಾಮಾಜಿಕವಾಗಿ ನಿಮ್ಮ ಗೌರವ ಹೆಚ್ಚಾಗಲಿದೆ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಹೆಚ್ಚಿನ ಆಸಕ್ತಿ ಮೂಡಲಿದೆ. ಪ್ರೇಮಿಗಳಿಗೆ ಇಂದು ಮಧುರವಾದ ದಿನವಾಗಿರಲಿದೆ. ಮನೆಯಲ್ಲಿ ಶುಭ ಕಾರ್ಯಗಳು ನಡೆಯುವ ಸೂಚನೆ ಇದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದ್ದು, ಸಾಲದ ಬಾಧೆಯಿಂದ ಮುಕ್ತಿ ಸಿಗುವ ಸಾಧ್ಯತೆಯಿದೆ.
ಕರ್ಕಾಟಕರಾಶಿ (Cancer)
ಇಂದು ನೀವು ಭಾವನಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ. ಉದ್ಯೋಗದ ಸ್ಥಳದಲ್ಲಿ ಕೆಲಸ ಕಾರ್ಯಗಳು ಹೆಚ್ಚಾಗಬಹುದು. ಇದರಿಂದ ನೀವು ಒತ್ತಡಕ್ಕೆ ಸಿಲುಕುವ ಸಾಧ್ಯತೆಯಿದೆ. ಆಸ್ತಿ ಖರೀದಿ ಇಲ್ಲಾ ಆಸ್ತಿ ಮಾರಾಟದ ಕುರಿತು ಮಾತುಕತೆ ನಡೆಸುವುದಕ್ಕೆ ಇಂದು ಅತ್ಯಂತ ಪ್ರಸಕ್ತವಾದ ದಿನ. ನಿಮ್ಮ ಮಕ್ಕಳ ಸಾಧನೆಯ, ಯಶಸ್ಸಿನಿಂದ ಮನೆಯಲ್ಲಿ ಸಂತೋಷ, ಸಂಭ್ರಮದ ವಾತಾವರಣ ಇರುತ್ತದೆ. ಸಂಬಂಧಿಗಳ ಭೇಟಿಯಿಂದ ಮನಸ್ಸು ಹಗುರವಾಗಲಿದೆ.
ಸಿಂಹ ರಾಶಿ (Leo)
ನಿಮ್ಮ ಆತ್ಮವಿಶ್ವಾಸ ಇಂದು ಉತ್ತುಂಗದಲ್ಲಿರಲಿದೆ. ಕೈಗೆತ್ತಿಕೊಂಡ ಕೆಲಸಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಿರಿ. ರಾಜಕೀಯ ಕ್ಷೇತ್ರದಲ್ಲಿ ಇರುವವರಿಗೆ ಶುಭ ಸುದ್ದಿ ಸಿಗಲಿದೆ. ಉದ್ಯೋಗಿಗಳಿಗೆ ಬಡ್ತಿ ಸಿಗುವ ಸಾಧ್ಯತೆ ಇದೆ. ಹಣಕಾಸಿನ ವ್ಯವಹಾರದಲ್ಲಿ ಎಚ್ಚರವಿರಲಿ. ದಾಂಪತ್ಯ ಜೀವನದಲ್ಲಿ ಮಧುರತೆ ಇರಲಿದೆ. ಕಣ್ಣಿನ ಸಮಸ್ಯೆಯಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಪ್ರವಾಸದ ಯೋಜನೆ ಕೈಗೂಡಲಿದೆ.
ಕನ್ಯಾ ರಾಶಿ (Virgo)
ಇಂದು ಹೂಡಿಕೆ ಮಾಡಲು ಯೋಗ್ಯವಾದ ದಿನವಲ್ಲ. ಶತ್ರುಗಳ ಬಗ್ಗೆ ಎಚ್ಚರದಿಂದಿರಿ. ವೃತ್ತಿಜೀವನದಲ್ಲಿ ಸಣ್ಣಪುಟ್ಟ ಅಡೆತಡೆಗಳು ಎದುರಾಗಬಹುದು. ಅತಿಯಾದ ಕೆಲಸದಿಂದ ಸುಸ್ತು ಅನುಭವಿಸಬಹುದು, ವಿಶ್ರಾಂತಿಗೆ ಆದ್ಯತೆ ನೀಡಿ. ನ್ಯಾಯಾಲಯದ ಕೆಲಸಗಳಲ್ಲಿ ಪ್ರಗತಿ ಕಂಡುಬರಲಿದೆ. ಸಂಗಾತಿಯ ಬೆಂಬಲ ನಿಮಗೆ ದೊಡ್ಡ ಶಕ್ತಿಯಾಗಲಿದೆ. ಮನೆಯ ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
ತುಲಾ ರಾಶಿ (Libra)
ತುಲಾ ರಾಶಿಯವರಿಗೆ ಇಂದು ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿವೆ. ಪ್ರೀತಿಪಾತ್ರರ ಜೊತೆ ಸಮಯ ಕಳೆಯಲು ಅವಕಾಶ ಸಿಗಲಿದೆ. ಕಲಾ ಕ್ಷೇತ್ರದಲ್ಲಿರುವವರಿಗೆ ದೊಡ್ಡ ಅವಕಾಶಗಳು ಸಿಗಬಹುದು. ನಿಮ್ಮ ಮಾತಿನ ಚಾಕಚಕ್ಯತೆಯಿಂದ ಎದುರಾಳಿಗಳನ್ನು ಗೆಲ್ಲುವಿರಿ. ವಾಹನ ಚಲಾಯಿಸುವಾಗ ಎಚ್ಚರಿಕೆ ಇರಲಿ. ಮನೆಗೆ ಹೊಸ ಅತಿಥಿಗಳ ಆಗಮನವಾಗುವ ಸಾಧ್ಯತೆ ಇದೆ. ಆರ್ಥಿಕ ಸ್ಥಿತಿ ಭದ್ರವಾಗಿರಲಿದೆ.
Also Read : ಮತ್ತೊಮ್ಮೆ ಬೆಲೆ ಏರಿಕೆಯ ಬಿಸಿ! ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಹೆಚ್ಚಳ ಸಾಧ್ಯತೆ
ವೃಶ್ಚಿಕ ರಾಶಿ (Scorpio)
ವೃಶ್ಚಿಕ ರಾಶಿಯವರು ಇಂದು ಮಾನಸಿಕ ಒತ್ತಡದಿಂದ ದೂರವಿರಲು ಪ್ರಯತ್ನಿಸಿ. ಕೆಲಸದಲ್ಲಿ ಹಿರಿಯ ಅಧಿಕಾರಿಗಳ ಕಿರಿಕಿರಿ ಉಂಟಾಗಬಹುದು. ತಾಳ್ಮೆಯಿಂದ ಕೆಲಸ ಮಾಡಿ. ಕೌಟುಂಬಿಕ ಸಮಸ್ಯೆಗಳನ್ನು ಚರ್ಚೆಯ ಮೂಲಕ ಬಗೆಹರಿಸಿಕೊಳ್ಳಿ. ದೂರದ ಪ್ರಯಾಣವನ್ನು ಇಂದು ಮುಂದೂಡುವುದು ಉತ್ತಮ. ಹಿರಿಯರ ಆಶೀರ್ವಾದ ಪಡೆಯಿರಿ. ಆಧ್ಯಾತ್ಮದ ಕಡೆಗೆ ಮನಸ್ಸು ವಾಲುವುದರಿಂದ ನೆಮ್ಮದಿ ಸಿಗಲಿದೆ.
ಧನು ರಾಶಿ (Sagittarius)
ನಿಮ್ಮ ಕಾರ್ಯಕ್ಷಮತೆ ಇಂದು ಎಲ್ಲರ ಗಮನ ಸೆಳೆಯಲಿದೆ. ಹೊಸ ಆಸ್ತಿ ಖರೀದಿಸಲು ಮನಸ್ಸು ಮಾಡುವಿರಿ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿಬರುವ ಸಾಧ್ಯತೆ ಇದೆ. ವಿದೇಶಿ ವ್ಯವಹಾರಗಳಲ್ಲಿ ಲಾಭವಾಗಲಿದೆ. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರಿಗೆ ಶುಭ ಫಲ ಸಿಗಲಿದೆ. ಆರೋಗ್ಯ ಉತ್ತಮವಾಗಿರುತ್ತದೆ. ಸ್ನೇಹಿತರೊಂದಿಗೆ ಸೇರಿ ಹೊಸ ಉದ್ಯಮದ ಬಗ್ಗೆ ಯೋಜನೆ ರೂಪಿಸುವಿರಿ.
ಮಕರ ರಾಶಿ (Capricorn)
ಇಂದು ಕೆಲಸದಲ್ಲಿ ಸ್ವಲ್ಪ ಮಂದಗತಿ ಇರಬಹುದು. ಸೋಮಾರಿತನ ಬಿಟ್ಟು ಸಕ್ರಿಯರಾಗಿರಿ. ಹಣದ ವರ್ಗಾವಣೆಯಲ್ಲಿ ಜಾಗರೂಕರಾಗಿರಿ. ಕುಟುಂಬ ಸದಸ್ಯರೊಂದಿಗೆ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳು ಉಂಟಾಗಬಹುದು. ಶಿಸ್ತಿನ ಜೀವನಶೈಲಿಯನ್ನು ಅಳವಡಿಸಿಕೊಳ್ಳಿ. ಕೃಷಿಕರಿಗೆ ಈ ದಿನ ಸಾಮಾನ್ಯ ಫಲ ನೀಡಲಿದೆ. ದೈಹಿಕವಾಗಿ ಸ್ವಲ್ಪ ಬಳಲಿಕೆ ಉಂಟಾಗಬಹುದು, ಯೋಗ ಮತ್ತು ಪ್ರಾಣಾಯಾಮ ಮಾಡಿ.
Also Read : ಈ ರೈತರಿಗೆ ಮಾತ್ರ ಹಣ, ಉಳಿದವರಿಗೆ ಕಟ್! ಪಿಎಂ ಕಿಸಾನ್ ಯೋಜನೆಯಲ್ಲಿ ಪ್ರಮುಖ ನಿರ್ಧಾರ
ಕುಂಭ ರಾಶಿ (Aquarius)
ಕುಂಭ ರಾಶಿಯವರಿಗೆ ಇಂದು ಅದೃಷ್ಟದ ದಿನ. ಬರಬೇಕಿದ್ದ ಬಾಕಿ ಹಣ ಇಂದು ನಿಮ್ಮ ಕೈ ಸೇರಲಿದೆ. ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯರಾಗಿ ಪಾಲ್ಗೊಳ್ಳುವಿರಿ. ಉದ್ಯೋಗದಲ್ಲಿ ಹೊಸ ಜವಾಬ್ದಾರಿಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ. ದಾಂಪತ್ಯದಲ್ಲಿ ಸುಖ ಶಾಂತಿ ನೆಲೆಸಲಿದೆ. ಪ್ರಯಾಣದ ಸಮಯದಲ್ಲಿ ಬೆಲೆಬಾಳುವ ವಸ್ತುಗಳ ಬಗ್ಗೆ ಗಮನವಿರಲಿ. ವಿದ್ಯಾರ್ಥಿಗಳು ಹೆಚ್ಚಿನ ಪರಿಶ್ರಮ ಹಾಕಬೇಕಾಗುತ್ತದೆ.
ಮೀನ ರಾಶಿ (Pisces)
ನಿಮ್ಮ ಕನಸುಗಳು ನನಸಾಗುವ ಹಾದಿಯಲ್ಲಿವೆ. ಹಳೆಯ ಸಮಸ್ಯೆಗಳಿಗೆ ಇಂದು ಪರಿಹಾರ ಕಂಡುಕೊಳ್ಳುವಿರಿ. ವ್ಯಾಪಾರದಲ್ಲಿ ಲಾಭದ ಪ್ರಮಾಣ ಹೆಚ್ಚಾಗಲಿದೆ. ಮನೆಯಲ್ಲಿ ಹಿರಿಯರ ಆರೋಗ್ಯ ಸುಧಾರಿಸಲಿದೆ. ಸಣ್ಣ ಉದ್ಯಮಿಗಳಿಗೆ ಹೊಸ ಅವಕಾಶಗಳು ಲಭ್ಯವಾಗಲಿವೆ. ಪ್ರೇಮ ಜೀವನದಲ್ಲಿ ಉತ್ಸಾಹವಿರುತ್ತದೆ. ದಾನ ಧರ್ಮ ಮಾಡುವುದರಿಂದ ಪುಣ್ಯ ಲಭಿಸಲಿದೆ. ಮನಸ್ಸು ಪ್ರಸನ್ನವಾಗಿರಲಿದೆ.
daily horoscope may 11 2026 kannada rashi bhavishya today



