ಶಬರಿಮಲೆ ವಿವಾದ : 3 ವಾರ ಮುಂದೂಡಿದ ಸುಪ್ರೀಂ ಕೋರ್ಟ್

0

ನವದೆಹಲಿ : ಶಬರಿಮಲೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಬೇಕೆಂದು ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಯನ್ನ ಮೂರು ವಾರಗಳ ಕಾಲ ಸುಪ್ರೀಂ ಕೋರ್ಟ್ ಮುಂದೂಡಿದೆ. ಸಿಜೆಐ ಎಸ್.ಎ ಬೊಬ್ಡೆ ನೇತೃತ್ವದ 9 ನ್ಯಾಯಾಧೀಶರ ಪೀಠವು ಇಂದು ವಿಚಾರಣೆಗೆ ಒಳಪಡಿಸಿತ್ತು. 2019 ನವೆಂಬರ್‌ನಲ್ಲಿ ನೀಡಿದ ಅದೇಶದಲ್ಲಿ ಉಲ್ಲೇಖಿಸಲಾದ ಪ್ರಶ್ನೆಗಳ ಕುರಿತು ಮಾತ್ರ ವಿಚಾರಣೆ ನಡೆಸುವುದಾಗಿ ಸುಪ್ರೀಂ ಹೇಳಿದೆ.ಶಬರಿಮಲೆ ದೇವಸ್ಥಾನಕ್ಕೆ ಎಲ್ಲಾ ವಯಸ್ಸಿನ ಮಹಿಳೆಯರು ಪ್ರವೇಶ ಮಾಡಬಹುದು ಅಂತ ನಿವೃತ್ತ ಮುಖ್ಯ ನ್ಯಾಯಾಧೀಶ ರಂಜನ್ ಗೊಗಾಯ್ ನೇತೃತ್ವದ ಪೀಠ ಆದೇಶ ನೀಡಿತ್ತು, ಇದನ್ನ ಪ್ರಶ್ನಿಸಿ ೫೦ ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆ ಯಾಗಿದ್ದವು

ಶಬರಿಮಲೆ ಪ್ರಕರಣದಂತೆ ಹಲವು ಧಾರ್ಮಿಕ ಕೇಂದ್ರಗಳಿಗೆ ಮಹಿಳೆಯರ ಪ್ರವೇಶ ನಿರ್ಬಂಧನೆ ಕುರಿತು ಅನೇಕ ಅರ್ಜಿಗಳು ಇದೆ, ಹೀಗಾಗಿ ಎಲ್ಲಾ ಪ್ರಕರಣಗಳನ್ನೂ ಒಟ್ಟಿಗೆ ವಿಚಾರಣೆ ನಡೆಸುವುದು ಸೂಕ್ತ ಅಂತ ಸುಪ್ರೀಂ ಕೋರ್ಟ್ ಅಭಿಪ್ರಾಯ ತಿಳಿಸಿದೆ. ಎಲ್ಲಾ ಪ್ರಕರಣದ ಅರ್ಜಿದಾರರು, ಪ್ರತಿವಾದಿಗಳ ಪರ ವಕೀಲರು ಚರ್ಚೆ ನಡೆಸಿ ಯಾವ ಸಮಸ್ಯೆ ನ್ಯಾಯಾಲಯದ ಮುಂದೆ ಇಡಬೇಕು ಎಂದು ನಿರ್ಧರಿಸುವಂತೆ ಸುಪ್ರೀಂ ಸೂಚನೆ ನೀಡಿದೆ. ಇದಕ್ಕಾಗಿ ಸುಪ್ರೀಂ ಕೋರ್ಟ್ ಮೂರು ವಾರಗಳ ಕಾಲಾವಕಾಶ ನೀಡಿದೆ.

Leave A Reply

Your email address will not be published.