ಕಾಶಿವಿಶ್ವನಾಥನ ದರ್ಶನ ಪಡೆಯಬೇಕಾದ್ರೆ ಈ ಡ್ರೆಸ್ ಹಾಕಲೇ ಬೇಕು !

0

ಉತ್ತರ ಪ್ರದೇಶ : ಜೀನ್ಸ್ ಪ್ಯಾಂಟ್, ಟೀ – ಶರ್ಟ್ ಬಳಸಿ ಇನ್ಮುಂದೆ ವಿಶ್ವನಾಥನ ದರ್ಶನ ಪಡೆಯುವಂತಿಲ್ಲ. ಕಾಶಿ ವಿಶ್ವನಾಥದ ದರ್ಶನ ಪಡೆಯಬೇಕಾದ್ರೆ ಡ್ರೆಸ್ ಕೋಡ್ ಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು.

ಇಷ್ಟು ದಿನ ಯಾರು ಯಾವುದೇ ಡ್ರೆಸ್ ಹಾಕಿ ಕಾಶಿ ವಿಶ್ವನಾಥನ ಸನ್ನಿಧಿಯ ಗರ್ಭಗುಡಿಯಲ್ಲಿರೊ ಜ್ಯೋತಿರ್ಲಿಂಗವನ್ನು ಮುಟ್ಟಿ ಪ್ರಾರ್ಥನೆ ಸಲ್ಲಿಸಬಹುದಾಗಿತ್ತು. ಆದ್ರೆ ಇನ್ಮುಂದೆ ಜ್ಯೋತಿರ್ಲಿಂಗ ದರ್ಶನಕ್ಕೆ ಧೋತಿ ಹಾಗೂ ಕುರ್ತಾ ತೊಟ್ಟು ಬರಲೇ ಬೇಕು.

ಒಂದೊಮ್ಮೆ ಜೀನ್ಸ್ ಪ್ಯಾಂಟ್ ಟೀ -ಶರ್ಟ್ ಧರಿಸಿ ಬಂದವರು ಹೊರಗಿನಿಂದಲೇ ದೇವರ ದರ್ಶನ ಮಾಡಬಹುದಾಗಿದೆ. ದೇವಾಲಯದ ಆಡಳಿತ ಮಂಡಳಿ ಭಕ್ತರ ಡ್ರೆಸ್ ಕೋಡ್ ಕುರಿತು ಕಾಶಿ ವಿದ್ವತ್ ಪರಿಷತ್ ಜೊತೆ ಸಭೆ ನಡೆಸಿ ನಿರ್ಧಾರ ಕೈಗೊಂಡಿದೆ.

Leave A Reply

Your email address will not be published.