ಭೂಮಿ ಮೇಲಿದೆ ಬಂಗಾರದ ಹೋಟೆಲ್ ! ಇಲ್ಲಿ ಸರ್ವವೂ ಬಂಗಾರ ಮಯಂ

0

ಇಷ್ಟು ದಿನ ಐಶಾರಾಮಿ ಹೋಟೆಲ್ ಗಳನ್ನು ನೋಡಿದ್ದೇವೆ. ಅತ್ಯಾಧುನಿಕ ಸೌಲಭ್ಯಗಳನ್ನು ಗ್ರಾಹರಿಗೆ ಹೋಟೆಲ್ ಗಳನ್ನೂ ಕಂಡಿದ್ದೇವೆ. ಆದರೆ ಇಲ್ಲೊಂದು ಹೋಟೆಲ್ ಇದೆ. ಇದು ಅಪರೂಪದಲ್ಲಿ ಅಪರೂಪದ ಹೋಟೆಲ್. ಯಾಕಂದ್ರೆ ಈ ಹೋಟೆಲ್ ನಿರ್ಮಾಣವಾಗಿರೋದು ಬಂಗಾರದಲ್ಲಿ.

ಈ ಹೋಟೆಲ್ ಅಪ್ಟಟ ಬಂಗಾರದ ಹೋಟೆಲ್. 24 ಕ್ಯಾರೆಟ್ ಚಿನ್ನವನ್ನು ಬಳಸಿ, ನಿರ್ಮಿಸಿರುವ ವಿಶ್ವದ ಮೊದಲ ಬಂಗಾರದ ಹೋಟೆಲ್ . ನಂಬೋದಕ್ಕೆ ಕಷ್ಟವಾದ್ರೂ ನೀವು ನಂಬಲೇ ಬೇಕು !

ಅಂದಹಾಗೆ ಈ ಹೋಟೆಲ್ ಇರೋದು ನಮ್ಮ ದೇಶದಲ್ಲಲ್ಲಾ ಬದಲಾಗಿದೆ. ವಿಯೆಟ್ನಾಂ ರಾಜಧಾನಿಯಾಗಿರೋ ಜಿಯಾಂಗ್ ವೋ ಲೇಕ್ ಪ್ರದೇಶದಲ್ಲಿದೆ.

ಹೋಟೆಲ್ ಹೆಸರು ಡಾಲ್ಸ್ ಹನೋಯಿ ಗೋಲ್ಡನ್ ಲೇಕ್. ಈ ಬಂಗಾರದ ಹೋಟೆಲ್ ನಲ್ಲಿ ಬರೋಬ್ಬರಿ 24 ಅಂತಸ್ತಿನಿಂದ ಕೂಡಿದ್ದು ಗ್ರಾಹಕರಿಗೆ ಸೇವೆಯನ್ನು ನೀಡಲು 400 ಕೊಠಡಿಗಳಿವೆ.

ಕೊರೊನಾದ ಲಾಕ್ ಡೌನ್ ಮುಗಿಸಿಯುತ್ತಿದ್ದಂತೆಯೇ ಬಂಗಾರದ ಹೋಟೆಲ್ ಗ್ರಾಹಕರಿಗೆ ಸೇವೆಯನ್ನು ನೀಡಲು ಮುಂದಾಗಿದೆ. ಹೋಟೆಲ್ ನಲ್ಲಿ ಹಲವು ವಿಶೇಷತೆಗಳಿಗೆ.

ಸುಮಾರು ಹನ್ನೊಂದು ವರ್ಷಗಳ ಕಾಲ ಹೋಟೆಲ್ ನಿರ್ಮಾಣದ ಕಾರ್ಯವನ್ನು ಮಾಡಲಾಗಿದೆ. ಹೋಟೆಲ್ ಗೋಡೆ, ರೂಂ, ಬಾತ್ ರೂಮ್ ಅಷ್ಟೇ ಯಾಕೆ ಹೋಟೆಲ್ ಹೊರಭಾಗಕ್ಕೆ ಹಾಗೂ ಒಳಾಂಗಣವನ್ನು ಸಂಪೂರ್ಣವಾಗಿ 24 ಕ್ಯಾರೆಟ್ ಚಿನ್ನದ ಪ್ಲೇಟ್ ಅಥವಾ ತಗಡುಗಳನ್ನು ಬಳಸಿ ನಿರ್ಮಿಸಲಾಗಿದೆ.

ಬಾತ್ ಟಬ್, ಹೋಟೆಲ್ ರೂಂ, ಸ್ವಿಮ್ಮಿಂಗ್ ಪೂಲ್, ಮೇಲು ಛಾವಣಿ ಹೀಗೆ ಎತ್ತ ಕಡೆ ನೋಡಿದ್ರೂ ಸಂಪೂರ್ಣವಾಗಿ ಬಂಗಾರ ಕಾಣಿಸುತ್ತದೆ. ಹೋಟೆಲ್ ಒಳಗೆ ಒಮ್ಮೆ ಪ್ರವೇಶಿಸಿದ್ರೆ ಸಾಕು ಎಲ್ಲೆಲ್ಲೂ ಚಿನ್ನವೇ ಹೊಳೆಯುತ್ತಿರುತ್ತದೆ.

ಅಂದಹಾಗೆ ಈ ಬಂಗಾರದ ಹೋಟೆಲ್ ನಲ್ಲಿ ಒಂದು ರಾತ್ರಿ ವಾಸ್ತವ್ಯಹೂಡಲು 250 ಅಮೆರಿಕನ್ ಡಾಲರ್ ನೀಡಬೇಕು. ಅಂದ್ರೆ ಭಾರತದ ಸರಿ ಸುಮಾರು 18 ಸಾವಿರ ರೂಪಾಯಿ. ನಿಮಗೇನಾದ್ರೂ ಬಂಗಾರದ ಹೋಟೆಲ್ ನಲ್ಲಿ ಉಳಿಯಬೇಕು ಅನ್ನೋ ಆಸೆಯಿದ್ರೆ ಕೊರೊನಾ ಮುಗಿಯುವವರೆಗೆ ಕಾಯಲೇ ಬೇಕು.

Leave A Reply

Your email address will not be published.