ನಿಮ್ಮ ಬಳಿ 5 ರೂ. 10 ರೂ. ಕಾಯಿನ್ ಇದ್ಯಾ ? ಹಾಗಾದ್ರೆ ಕೋಟ್ಯಾಧಿಪತಿಯಾಗೋದು ಗ್ಯಾರಂಟಿ !

0

ಇತ್ತೀಚಿನ ದಿನಗಳಲ್ಲಿ 10 ರೂಪಾಯಿಯ ನಾಣ್ಯಗಳ ಚಲಾವಣೆ ಮಾಡೋದಕ್ಕೆ ಜನರು ಹಿಂದೇಟು ಹಾಕುತ್ತಿದ್ದಾರೆ. ಒಂದಿಷ್ಟು ದಿನ 10 ರೂಪಾಯಿಯ ನಾಣ್ಯ ಬ್ಯಾನ್ ಆಗಿದೆ ಅಂತಾನೂ ಹೇಳುತ್ತಿದ್ದರು. ಆದ್ರೀಗ ನಿಮ್ಮಲ್ಲಿ ಹಳೆಯ 5 ರೂಪಾಯಿ ಹಾಗೂ 10 ರೂಪಾಯಿಯ ನಾಣ್ಯವಿದ್ರೆ ಕೋಟ್ಯಾಧಿಪತಿಯಾಗೋದು ಗ್ಯಾರಂಟಿ.

ಇತ್ತೀಚಿನ ವರ್ಷಗಳಲ್ಲಿ ಜನರು ನೋಟುಗಳ ಚಲಾವಣೆಯ ಬದಲು ಆನ್ ಲೈನ್ ಪೇಮೆಂಟ್ ಮೊರೆ ಹೋಗುತ್ತಿದ್ದಾರೆ. ಹೀಗಾಗಿ ನಾಣ್ಯಗಳ ಚಲಾವಣೆಯೂ ಬಹಳಷ್ಟು ಕಡಿಮೆಯಾಗಿದೆ. ಆದ್ರೀಗ ಹಳೆ ನಾಣ್ಯಗಳಿಗೆ ಬಂಗಾರದ ಬೆಲೆ ಬಂದಿದೆ. ಆದರೆ ನಿಮ್ಮಲ್ಲಿರುವ ನಾಣ್ಯದಲ್ಲಿ ವೈಷ್ಣೋ ದೇವಿಯ ಚಿತ್ರವಿರಬೇಕು.

2002ರಲ್ಲಿ ಮುದ್ರಿಸಿರುವ 5 ರೂಪಾಯಿ ಹಾಗೂ 10 ರೂಪಾಯಿಯ ನಾಣ್ಯದಲ್ಲಿ ವೈಷ್ಣೋದೇವಿಯ ಚಿತ್ರವಿದೆ. ವೈಷ್ಣೋದೇವಿ ಹಿಂದೂ ಗಳ ಆರಾಧ್ಯ ದೇವರಾಗಿದ್ದು, ಬಹಳಷ್ಟು ಜನರ ಲಕ್ಷಾಂತರ ರೂಪಾಯಿ ವ್ಯಯಿಸಿ ನಾಣ್ಯಗಳನ್ನು ಸ್ವಂತವಾಗಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಯೇ ನಾಣ್ಯಗಳನ್ನು ಹೊಂದಿರುವವರು ಕೋಟ್ಯಾಂತರ ರೂಪಾಯಿ ಹಣಗಳಿಸುತ್ತಿದ್ದಾರೆ.

ಅದ್ರಲ್ಲೂ ನಾಣ್ಯಗಳನ್ನು ಸಂಗ್ರಹಿಸುವ ಹವ್ಯಾಸ ರೂಢಿಸಿಕೊಂಡಿರುವವರು ಇಂಡಿಯಾ ಮಾರ್ಟ್ ಮೂಲಕ ಹಲವು ಜನರು ಹಳೆಯ ನಾಣ್ಯಗಳ ಹುಡುಕಾಟವನ್ನೂ ನಡೆಸುತ್ತಿದ್ದಾರೆ. ಹೀಗಾಗಿ ಹಳೆಯ ನಾಣ್ಯಗಳಿಗೆ ಇನ್ನಷ್ಟು ಬೆಲೆ ಬರೋ ಸಾಧ್ಯತೆಯೂ ಇದೆ.

ಕೇವಲ ಹಳೆಯ ನಾಣ್ಯವಲ್ಲ, ನೋಟುಗಳಲ್ಲಿ 786 ಸಂಖ್ಯೆಯಿದ್ರೆ ಆ ನೋಟುಗಳಿಗೂ ಭಾರಿ ಡಿಮ್ಯಾಂಡ್ ಇದೆಯಂತೆ. 786 ಸಂಖ್ಯೆ ಮುಸ್ಲೀಂ ಧರ್ಮೀಯರ ಪ್ರಕಾರ ಸಮೃದ್ದಿಯ ಪ್ರತೀಕವೆನ್ನಲಾಗುತ್ತಿದೆ.

ಇದೇ ಕಾರಣಕ್ಕೆ ಈ ಸಂಖ್ಯೆ ನೋಟುಗಳು ಕೂಡ ಲಕ್ಷಾಂತರ ರೂಪಾಯಿಗೆ ಬಿಕರಿಯಾಗುತ್ತಿದೆ. ಈ ಎರಡೂ ಸುದ್ದಿಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ.

Leave A Reply

Your email address will not be published.