SSLC Result 2026 : ಕನ್ನಡದಲ್ಲೇ ಹೆಚ್ಚು ಮಕ್ಕಳು ಫೇಲ್; ಮಾತೃಭಾಷೆಯಲ್ಲೇ ಕರುನಾಡಿನ ವಿದ್ಯಾರ್ಥಿಗಳು ಎಡವಿದ್ದೆಲ್ಲಿ?

ವಿಜ್ಞಾನ, ಗಣಿತ ಅಥವಾ ಇಂಗ್ಲೀಷ್​ನಂತಹ ಕಠಿಣ ವಿಷಯಗಳಿಗೆ ಹೋಲಿಕೆ ಮಾಡಿದರೆ ಪ್ರಥಮ ಭಾಷೆ ಕನ್ನಡದಲ್ಲಿಯೆ ಅತೀ ಹೆಚ್ಚು ವಿದ್ಯಾರ್ಥಿಗಳು ಫೇಲ್​ ಆಗಿರುವುದು, ಕರ್ನಾಟಕದ ಶೈಕ್ಷಣಿಕ ಇತಿಹಾಸದಲ್ಲೇ ಅತ್ಯಂತ ಕಳವಳಕಾರಿ ವಿಚಾರ

SSLC Result 2026 : ಬೆಂಗಳೂರು : ರಾಜ್ಯ ಸರ್ಕಾರ ಈ ಬಾರಿ ದ್ವಿಭಾಷಾ ನೀತಿ ಜಾರಿಗೆ ತಂದು ತೃತೀಯ ಭಾಷೆಗಳಿಗೆ ಅಂಕಗಳ ಬದಲು ಗ್ರೇಡಿಂಗ್​ ನೀಡುವ ನಿರ್ಧಾರ ಕೈಗೊಂಡಿತ್ತು. ಆದರೆ ಬಳಿಕ ನ್ಯಾಯಾಂಗ ಹೋರಾಟದಲ್ಲಿ ಹಿನ್ನೆಡೆ ಅನುಭವಿಸಿತ್ತು. ಅದಾದ ಬಳಿಕ ಎಸ್​ಎಸ್​ಎಲ್​​ಸಿ ಫಲಿತಾಂಶ ಹೊರಬಿದ್ದು, ಈ ಬಾರಿ ಐತಿಹಾಸಿಕ ರಿಸಲ್ಟ್​ ಕೂಡ ದಾಖಲಾಯ್ತು.

ಆದರೆ ಈ ಎಲ್ಲದರ ನಡುವೆ ಕಳವಳಕಾರಿ ವಿಚಾರವೊಂದು ಹೊರಬಿದ್ದಿದೆ. ಈ ಬಾರಿಯ ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಮಾತೃಭಾಷೆಯಲ್ಲಿಯೇ 10 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದು, ಆತಂಕಕಾರಿ ವಿಚಾರವಾಗಿದೆ.

ವಿಜ್ಞಾನ, ಗಣಿತ ಅಥವಾ ಇಂಗ್ಲೀಷ್​ನಂತಹ ಕಠಿಣ ವಿಷಯಗಳಿಗೆ ಹೋಲಿಕೆ ಮಾಡಿದರೆ ಪ್ರಥಮ ಭಾಷೆ ಕನ್ನಡದಲ್ಲಿಯೆ ಅತೀ ಹೆಚ್ಚು ವಿದ್ಯಾರ್ಥಿಗಳು ಫೇಲ್​ ಆಗಿರುವುದು, ಕರ್ನಾಟಕದ ಶೈಕ್ಷಣಿಕ ಇತಿಹಾಸದಲ್ಲೇ ಅತ್ಯಂತ ಕಳವಳಕಾರಿ ವಿಚಾರ.

ಕನ್ನಡ ಪ್ರಥಮ ಭಾಷೆಯನ್ನಾಗಿ ಹೊಂದಿದ್ದ 6,07,275 ವಿದ್ಯಾರ್ಥಿಗಳ ಪೈಕಿ 18,678 ವಿದ್ಯಾರ್ಥಿಗಳು ಫೇಲ್​ ಆಗಿದ್ದರೆ, ಕನ್ನಡ ತೃತೀಯ ಭಾಷೆ ಹೊಂದಿರುವ 289 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಒಟ್ಟಾರೆ ಕನ್ನಡ ಭಾಷೆಯಲ್ಲಿ ಈ ಬಾರಿ 96.92 ಶೆಕಡಾ ಫಲಿತಾಂಶ ದಾಖಲಾಗಿದೆ.

ಇದನ್ನೂ ಓದಿ : ರಾಜ್ಯದಲ್ಲಿ ಮುಂದಿನ 7 ದಿನದ ಗುಡುಗು ಸಹಿತ ಭಾರಿ ಮಳೆ : ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ

ತಮಿಳು ಮತ್ತು ತೆಲುಗು ಭಾಷೆಯನ್ನು ಪ್ರಥಮ ಭಾಷೆಯಾಗಿ ಆಯ್ದುಕೊಂಡವರು ಶೇ. 100 ರಷ್ಟು ಫಲಿತಾಂಶ ದಾಖಲಿಸಿದ್ದಾರೆ. ಸಂಸ್ಕೃತದಲ್ಲಿ ಶೇ. 99.99 ರಷ್ಟು ಮಕ್ಕಳು ಉತ್ತೀರ್ಣರಾಗಿದ್ದಾರೆ.ಇಂಗ್ಲಿಷ್ ಮತ್ತು ಉರ್ದು ಭಾಷೆಗಳಲ್ಲೂ ಕನ್ನಡಕ್ಕಿಂತ ಉತ್ತಮ ಫಲಿತಾಂಶ ಬಂದಿರುವುದು ವಿಶೇಷ.

ಕರ್ನಾಟಕದ ನೆಲದಲ್ಲೇ ಇದ್ದು, ನಿರಂತರವಾಗಿ ಕನ್ನಡ ಮಾತನಾಡುತ್ತಾ ಬೆಳೆದ ಮಕ್ಕಳು ಪರೀಕ್ಷೆಯಲ್ಲಿ ಫೇಲ್ ಆಗುತ್ತಿರುವುದು ಭಾಷಾ ಪ್ರೇಮಿಗಳಲ್ಲಿ ಆತಂಕ ಮೂಡಿಸಿದೆ.

ವರದಿಯ ಪ್ರಕಾರ, ಪ್ರಥಮ ಭಾಷಾ ವಿಷಯಗಳಲ್ಲೇ ಅತಿ ಹೆಚ್ಚು ಮಕ್ಕಳು ಫೇಲ್ ಆಗುತ್ತಿರುವುದು ಇತಿಹಾಸದಲ್ಲೇ ಇದು ಮೊದಲ ಬಾರಿಯಾಗಿದೆ. ಕನ್ನಡದ ಕಾಗುಣಿತ, ವ್ಯಾಕರಣ ಮತ್ತು ಬರವಣಿಗೆಯ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಕುಸಿಯುತ್ತಿದೆಯೇ? ಅಥವಾ ಬೋಧನಾ ಕ್ರಮದಲ್ಲಿ ದೋಷವಿದೆಯೇ ? ಎಂಬ ಪ್ರಶ್ನೆಗಳು ಏಳುತ್ತಿವೆ.

ಇದನ್ನೂ ಓದಿ :  SSLC Result 2026 : ಮುದ್ದೂರು ವಿಎಸ್‌ಎಸ್‌ನ ಕಲ್ಯಾಣಿಗೆ ರಾಜ್ಯದಲ್ಲಿ 5ನೇ ರಾಂಕ್‌, ಸತತ 100 % ರಿಸಲ್ಟ್‌

ಈ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ, ನಮ್ಮ ಭಾಷೆಯ ಬೋಧನೆ ಹಾಗೂ ಕಲಿಕೆಗೆ ನಾವು ಹೆಚ್ಚು ಆದ್ಯತೆ ನೀಡಬೇಕಿರುವುದು ಈ ಫಲಿತಾಂಶದಿಂದ ಸ್ಪಷ್ಟವಾಗಿದೆ.

ಇತರ ಭಾಷಾ ಕಲಿಕೆಯಿಂದ ಆಗುತ್ತಿರುವ ಒತ್ತಡವೇ ಇದಕ್ಕೆ ಕಾರಣವೇ ಎಂಬ ಬಗ್ಗೆ ಇಲಾಖೆ ಸೂಕ್ತ ನಿರ್ಧಾರಕ್ಕೆ ಬರಲಿದೆ. ಕನ್ನಡ ಭಾಷಾ ಫಲಿತಾಂಶ ಸುಧಾರಣೆಗೆ ಇನ್ನು ಮುಂದೆ ಹೆಚ್ಚಿನ ಗಮನ ಹರಿಸಲಾಗುವುದು ಎಂದು ಹೇಳಿದ್ದಾರೆ.

 

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories