RGUHS ಫಲಿತಾಂಶ 2025 ಪ್ರಕಟ: ಅಂಕಪಟ್ಟಿ ಪರಿಶೀಲನೆ ಹೇಗೆ?
RGUHS Result 2025: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯವು (RGUHS) ಇತ್ತೀಚೆಗೆ ನಡೆಸಿದ್ದ MBBS, BHMS, BSc ನರ್ಸಿಂಗ್, B ಫಾರ್ಮಾ ಮತ್ತು ಇತರ ಪರೀಕ್ಷೆಗಳು ಸೇರಿದಂತೆ ಹಲವಾರು UG ಕೋರ್ಸ್‌ಗಳ ವಾರ್ಷಿಕ ಫಲಿತಾಂಶವನ್ನು ಬಿಡುಗಡೆ ಮಾಡಿದೆ.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಪ್ರಕಟಿಸಿರುವ ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್ gnanasangama.karnataka.gov.in ನಲ್ಲಿ ಪರೀಕ್ಷಿಸಬಹುದಾಗಿದೆ.
ಪರೀಕ್ಷೆಗೆ ಹಾಜಾರಾದ ವಿದ್ಯಾರ್ಥಿಗಳು ವೆಬ್‌ಸೈಟ್‌ಗೆ ಭೇಟಿ ನೀಡಿ ಫಲಿತಾಂಶವನ್ನು ಪರೀಕ್ಷಿಸಿ ಅದನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಫಲಿತಾಂಶವನ್ನು ಪರಿಶೀಲಿಸಲು ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ.
RGUHS 2025 ಫಲಿತಾಂಶ ಪರಿಶೀಲಿಸುವುದು ಹೇಗೆ?
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ನಡೆಸಿರುವ ವಿವಿಧ ಯುಜಿ ಕೋರ್ಸ್‌ಗಳಲ್ಲಿ ತಮ್ಮ ಇಎಂಎಸ್ ಫಲಿತಾಂಶವನ್ನು ಪರಿಶೀಲಿಸಲು ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಪರಿಶೀಲಿಸಬಹುದು. ಫಲಿತಾಂಶ ವೀಕ್ಷಿಸಲು ಹೀಗೆ ಮಾಡಿ…
- ಮೊದಲಿಗೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಅಧಿಕೃತ ಫಲಿತಾಂಶ ಪೋರ್ಟಲ್ gnanasangama.karnataka.gov.in ಗೆ ಭೇಟಿ ನೀಡಿ.
- ಅಲ್ಲಿ ನಿಮ್ಮ ನೋಂದಣಿ ಸಂಖ್ಯೆಯನ್ನು ನಮೂದಿಸಿ, ಕೋರ್ಸ್ ಆಯ್ಕೆ ಮಾಡಿ. ನಂತರ View ಮೇಲೆ ಕ್ಲಿಕ್ಕಿಸಿ.
- ನಿಮ್ಮ ಫಲಿತಾಂಶವು ಸ್ಕೀನ್ ಮೇಲೆ ಕಾಣಿಸುತ್ತದೆ.
- ಭವಿಷ್ಯದ ಉಲ್ಲೇಖಕ್ಕಾಗಿ ಸ್ಕೋರ್‌ಕಾರ್ಡ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ ಅಥವಾ ಪ್ರಿಂಟ್‌ಔಟ್ ತೆಗೆದುಕೊಳ್ಳಿ.
ಇದನ್ನೂ ಓದಿ: ವೈದ್ಯ ವಕೀಲರಂತೆಯೇ ಇನ್ಮುಂದೆ ಇಂಜಿನಿಯರ್ಸ್‌ಗೂ ಪರವಾನಿಗೆ ಕಡ್ಡಾಯ ? ಶೀಘ್ರದಲ್ಲೇ ಬರಲಿದೆ ಹೊಸ ಕಾನೂನು
ಮಾರ್ಕ್‌ಶೀಟ್‌ನಲ್ಲಿ ಯಾವ ಮಾಹಿತಿಗಳಿರುತ್ತವೆ?
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯವು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ RGUHS ಫಲಿತಾಂಶ 2025 ಅಂಕಪಟ್ಟಿಯನ್ನು ಬಿಡುಗಡೆ ಮಾಡಿದೆ. RGUHS ಅಂಕಪಟ್ಟಿ 2025 ರಲ್ಲಿ ಈ ಕೆಳಗೆ ತಿಳಿಸಲಾದ ಮಾಹಿತಿಗಳು ಒಳಗೊಂಡಿರುತ್ತವೆ.
- ವಿದ್ಯಾರ್ಥಿಯ ಹೆಸರು
- ನೋಂದಣಿ ಸಂಖ್ಯೆ
- ಕೋರ್ಸ್‌ನ ಹೆಸರು
- ಒಟ್ಟು ಅಂಕಗಳು
- ಪಡೆದ ಅಂಕಗಳು
- ಕೋರ್ಸ್/ವಿಷಯ ಕೋಡ್
- ಕೋರ್ಸ್/ವಿಷಯದ ಹೆಸರು
- ಫಲಿತಾಂಶದ ಸ್ಥಿತಿ
- ಒಟ್ಟು ಅಂಕಗಳು
- ಗರಿಷ್ಠ ಅಂಕಗಳು
- ಫಲಿತಾಂಶ ದಿನಾಂಕ
ಕರ್ನಾಟಕದ ಬೆಂಗಳೂರಿನಲ್ಲಿರುವ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ (RGUHS) ವನ್ನು 1996 ರಲ್ಲಿ ಸ್ಥಾಪಿಸಲಾಯಿತು. RGUHS ಮಾಡರ್ನ್ ಮೆಡಿಸಿನ್, ಹೋಮಿಯೋಪತಿ ಮತ್ತು ಆಯುರ್ವೇದ, ಸಿದ್ಧ, ಯೋಗ, ಪ್ರಕೃತಿ ಚಿಕಿತ್ಸೆ, ಯುನಾನಿ ಮತ್ತು ಇತರ ಸಂಬಂಧಿತ ವಿಜ್ಞಾನಗಳಂತಹ ಭಾರತೀಯ ವೈದ್ಯಕೀಯ ವ್ಯವಸ್ಥೆಗಳು ಸೇರಿದಂತೆ ವಿವಿಧ ವಿಷಯಗಳಲ್ಲಿ ಪದವಿಪೂರ್ವ, ಸ್ನಾತಕೋತ್ತರ ಮತ್ತು ಡಿಪ್ಲೊಮಾ ಕೋರ್ಸ್‌ಗಳನ್ನು ನೀಡುತ್ತದೆ.



