‘ರೋಬೊಟಿಕ್ಸ್ ಮತ್ತು ಯಂತ್ರ ಕಲಿಕೆ’ ವೆಬ್‌ನಾರ್: ಶ್ರೀನಿವಾಸ ವಿವಿಯಿಂದ ವಿಭಿನ್ನ ಕಾರ್ಯಕ್ರಮ

1

ಮಂಗಳೂರು : ಭವಿಷ್ಯದಲ್ಲಿ ಉದ್ಯೋಗಾವಕಾಶಕ್ಕೆ ವಿಫಲ ಅವಕಾಶವಿರುವ ರೋಬೊಟಿಕ್ಸ್ ಮತ್ತು ಯಂತ್ರ ಕಲಿಕೆಯ ಉಚಿತ ಅಂತರಾಷ್ಟ್ರೀಯ ವೆಬ್ನಾರ್ ಜೂನ್ 26ರಂದು ನಡೆಯಲಿದೆ. ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಮಂಗಳೂರಿನ ಪ್ರಖ್ಯಾತ ಶ್ರೀನಿವಾಸ ವಿಶ್ವವಿದ್ಯಾಲಯ ಈ ವಿಭಿನ್ನ ಅಂತರಾಷ್ಟ್ರೀಯ ವೆಬ್‌ನಾರ್ ಆಯೋಜಿಸುತ್ತಿದೆ. ಝೂಮ್ ಆಪ್ ಮೂಲಕ ವಿದ್ಯಾರ್ಥಿಗಳು ಈ ಉಚಿತ ಕಾರ್ಯಾಗಾರದಲ್ಲಿ ಪಾಲ್ಗೊಳ್ಳಬಹುದಾಗಿದೆ.

ಹೆಸರಾಂತ ರೋಬೊಟಿಕ್ಸ್ ವಿಜ್ಞಾನಿ ಕನ್ನಡಿಗ ಶ್ರೀ ಹರ್ಷ ಕಿಕ್ಕೇರಿ ಅವರು ವೆಬ್ನಾರ್ ನಡೆಸಿಕೊಡಲಿದ್ದಾರೆ. ರೋಬೊಟಿಕ್ಸ್ ತಂತ್ರಜ್ಞಾನದಲ್ಲಿ ಈಗಾಗಲೇ ಅಂತರಾಷ್ಟ್ರೀಯ ಮಟ್ಟದಲ್ಲಿ ಶ್ರೀ ಹರ್ಷ ಕಿಕ್ಕೇರಿ ಅವರು ಮಹಾನ್ ಸಾಧನೆಯನ್ನು ಮಾಡಿದ್ದಾರೆ. ಮಾತ್ರವಲ್ಲ ಹರ್ಷ ಕಿಕ್ಕೇರಿ ಅವರ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಕೊಂಡಾಡಿದ್ದಾರೆ. ಪ್ರಸ್ತುತ ಸಿಂಗಾಪುರದ ಹೊಲೊಸೂಟ್ ಸಂಸ್ಥೆಯ ಸಿಇಓ ಆಗಿ ಕಾರ್ಯನಿರ್ವಹಿಸುತ್ತಿರುವ ಹರ್ಷ ಕಿಕ್ಕೇರಿ ಅವರು ವೆಬ್ನಾರ್ ನಲ್ಲಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಅನುಕೂಲಕರವಾದ ಮಾಹಿತಿಯನ್ನು ಒದಗಿಸಲಿದ್ದಾರೆ.

https://youtu.be/N8wx0NYBB04

ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗದಲ್ಲಿ ಕಲಿಕೆ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವೆಬ್ನಾರ್ ಹೆಚ್ಚು ಉಪಯುಕ್ತವಾಗಲಿದೆ. ಜೂನ್ 26ರಂದು ಸಂಜೆ 6.30ಕ್ಕೆ ವೆಬ್ನಾರ್ ನಡೆಯಲಿದ್ದು, ಉಚಿತ ವೆಬ್ನಾರ್ ನಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳು ಜೂನ್ 25ರಂದು ( ಗುರುವಾರ) ಸಂಜೆ 5 ಗಂಟೆಯೊಳಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ ಶ್ರೀನಿವಾಸ ವಿಶ್ವ ವಿದ್ಯಾಲಯದ ವತಿಯಿಂದ ವಿಶೇಷ ಉಡುಗೊರೆಯನ್ನು ನೀಡಲಾಗುತ್ತದೆ. 1 ಗಂಟೆಗಳ ಕಾಲ ನಡೆಯಲಿರುವ ವೆಬ್ನಾರ್ ನಲ್ಲಿ ವಿದ್ಯಾರ್ಥಿಗಳಿಗೆ ಭವಿಷ್ಯ ಉದ್ಯೋಗಾವಕಾಶಗಳ ಕುರಿತು ಉಪಯುಕ್ತ ಮಾಹಿತಿಯನ್ನು ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಪ್ರೋ. ಅಂಕಿತ್ ಡೆಪ್ಯುಟಿ ರಿಜಿಸ್ಟ್ರಾರ್ ಶ್ರೀನಿವಾಸ ಯೂನಿವರ್ಸಿಟಿ ಮೊಬೈಲ್ : +91 9741141433 ಸಂಪರ್ಕಿಸಬಹುದಾಗಿದೆ.

Join Zoom Meeting
https://us02web.zoom.us/j/84163814610?pwd=UjFKRnJ6aUdieHh6RG1jdnVnZ0ZWdz09

Meeting ID: 841 6381 4610
Password: 632206

Registration form link :

https://forms.gle/JebSD2ZTm4hEBRnA6

1 Comment
  1. Bhoomika says

    Good

Leave A Reply

Your email address will not be published.