ವಿಎಸ್‌ಎಸ್ ಶಾಲೆಯಲ್ಲಿ ಎಪ್ರಿಲ್ 13ರಿಂದ ಬೇಸಿಗೆ ಶಿಬಿರ : ಇಂದೇ ಹೆಸರು ನೋಂದಾಯಿಸಿ
ಗುರುಪರಂಪರೆಯ ಶಿಕ್ಷಣದ ಮೂಲಕ ಖ್ಯಾತಿ ಪಡೆದಿದ್ದ ವಿದ್ಯಾಸಂಸ್ಥೆಯಲ್ಲೀಗ ಮಕ್ಕಳಿಗಾಗಿ ಗ್ರಾಮೀಣ, ಸಾಂಪ್ರದಾಯಿಕ, ಕೃಷಿಬದುಕಿನ ಅನಾವರಣ. ವಿಭಿನ್ನ ಸಮ್ಮರ್ ಕ್ಯಾಂಪ್ ಆಯೋಜನೆ

ಉಡುಪಿ : ಉಡುಪಿ ಜಿಲ್ಲೆಯ ಪ್ರತಿಷ್ಠಿತ ವಿದ್ಯಾಸಂಸ್ಥೆಯಾಗಿರುವ ಮುದ್ದೂರಿನ ವಿಎಸ್‌ಎಸ್ ಸಿಬಿಎಸ್‌ಇ ಶಾಲೆ ( VSS CBSE School Udupi Muddur) ಯಲ್ಲಿ ಎಪ್ರಿಲ್ 13ರಿಂದ ಎಪ್ರಿಲ್ 18ರ ವರೆಗೆ ಒಟ್ಟು 6 ದಿನಗಳ ವಿಶೇಷ ಬೇಸಿಗೆ ಶಿಬಿರ ( Summer Camp) ವನ್ನು ಆಯೋಜಿಸಲಾಗಿದೆ.
ಗುಣಮಟ್ಟದ ಶಿಕ್ಷಣದ ಮೂಲಕ ಕಳೆದ ಸಾಲಿನಲ್ಲಿ 10ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳು 100% ಫಲಿತಾಂಶ ನೀಡಿದ್ದು ಮಾತ್ರವಲ್ಲ, ಎಲ್ಲಾ ವಿದ್ಯಾರ್ಥಿಗಳು ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾಗುವ ಮೂಲಕ ಉಡುಪಿ ಜಿಲ್ಲೆಯ ಮುದ್ದೂರಿನಲ್ಲಿರುವ ವಿಎಸ್‌ಎಸ್ ಸಿಬಿಎಸ್‌ಇ ಶಾಲೆ ಶಿಕ್ಷಣ ಕ್ಷೇತ್ರದಲ್ಲಿ ಗಮನ ಸೆಳೆದಿದೆ. ಉತ್ತಮ ಶಿಕ್ಷಣದಿಂದಾಗಿಯೇ ಈ ಬಾರಿ ದಾಖಲೆಯ ಸಂಖ್ಯೆಯಲ್ಲಿ ದಾಖಲಾತಿಗಳು ನಡೆಯುತ್ತಿದೆ. ಇದೇ ಕಾರಣದಿಂದಲೇ 5 ರಿಂದ 10ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯವನ್ನೂ ಒದಗಿಸಲಾಗುತ್ತಿದೆ.
ವಿಎಸ್‌ಎಸ್ ಶಾಲೆಯಲ್ಲಿ ನಡೆದ ದಾಖಲಾತಿ ಪರೀಕ್ಷೆಯಲ್ಲಿ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 3,000ಕ್ಕೂ ಅಧಿಕ ವಿದ್ಯಾರ್ಥಿಗಳು ಹಾಜರಾಗುವ ಮೂಲಕ ಹೊಸ ದಾಖಲೆಯನ್ನು ಬರೆದಿದ್ದರು. ಇದೀಗ 1,000ಕ್ಕೂ ಅಧಿಕ ವಿದ್ಯಾರ್ಥಿಗಳಿಗಾಗಿ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿದೆ.
ಗುರುಪರಂಪರೆಯ ಶಿಕ್ಷಣದ ಮೂಲಕ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣವನ್ನು ನೀಡುತ್ತಿರುವ ವಿಎಸ್‌ಎಸ್ ಶಾಲೆ ಬೇಸಿಗೆಯ ರಜಾ ಕಾಲದಲ್ಲಿ ಮಕ್ಕಳಿಗೆ ಮರೆಯಾಗುತ್ತಿರುವ ಗ್ರಾಮೀಣ ಕ್ರೀಡೆ, ಕೃಷಿಯ ಬದುಕು, ಮಣ್ಣಿನ ಮಹತ್ವ, ಹೆರಿಟೇಜ್‌ಗಳ ಪ್ರಾಮುಖ್ಯತೆ, ಗತಿಸಿ ಹೋಗುತ್ತಿರುವ ಐತಿಹಾಸಿಕ ಕುರುಹುಗಳ ಕುರಿತು ಮಕ್ಕಳಿಗೆ ಅರಿವು ಮೂಡಿಸುವ ವಿಭಿನ್ನ ಪ್ರಯತ್ನಕ್ಕೆ ಕೈಹಾಕಿದೆ.
5-14 ವರ್ಷದೊಳಗಿನ ಮಕ್ಕಳಿಗಷ್ಟೇ ಅವಕಾಶ
5 ವರ್ಷದಿಂದ 14 ವರ್ಷ ವಯೋಮಿತಿಯ ವಿದ್ಯಾರ್ಥಿಗಳಿಗಾಗಿ ಈ ಶಿಬಿರ ನಡೆಯಲಿದೆ. ಗ್ರಾಮೀಣ ಕ್ರೀಡೆ, ತೆಂಗಿನ ಗರಿಯಲ್ಲಿ ಕಲಾಕೃತಿ, ಕೃಷಿ ಪಯಣ, ಜೀವ ಜಲದೊಂದಿಗೆ ಒಂದು ದಿನ ( ಅಂಜಲಿ ವಾಟರ್ ಪಾರ್ಕ್), ಆಲೆ ಮನೆ, ಕೆಸರಿನಲ್ಲೊಂದು ದಿನ, ಸೂರಾಲು ಅರಮನೆ ವೀಕ್ಷಣೆ, ಬಾರಕೂರಿನ ಕತ್ತಲೆ ಬಸದಿ, ಬಾರಕೂರು ಕೋಟೆಯ ಭೇಟಿಯ ಜೊತೆಗೆ ಕೊನೆಯ ದಿನ ಫೈರ್ ಕ್ಯಾಂಪ್ ಮಜಾ ಮಕ್ಕಳಿಗೆ ಸಿಗಲಿದೆ.
Also read: Marathi Mandatory: ಮಹಾರಾಷ್ಟ್ರದ ಎಲ್ಲಾ ಶಾಲೆಗಳಲ್ಲಿ ಮರಾಠಿ ಕಡ್ಡಾಯ: ನಿಯಮ ಮೀರಿದರೆ ಶಾಲಾ ಮಾನ್ಯತೆ ರದ್ದು!
6 ದಿನದ ಶಿಬಿರದಲ್ಲಿ ಏನೇನು ಇರುತ್ತದೆ ?
ಬೇಸಿಗೆ ಶಿಬಿರದ 1ನೇ ದಿನ ಸಾಂಪ್ರದಾಯಿಕ ಆಟಗಳನ್ನು ಆಡಿಸಲಾಗುತ್ತದೆ. ಬೇಸಿಗೆ ಶಿಬಿರದ 2ನೇ ದಿನ ಹೆರಿಟೇಜ್ ಟೂರ್ ಇರಲಿದ್ದು, 3ನೇ ದಿನ ತೆಂಗಿನ ಗರಿಯಲ್ಲಿ ವಿವಿಧ ಕಲೆ, ಜೊತೆಗೆ ರಂಗೋಲಿ ಮತ್ತು ಮೆಹಂದಿ ಹಚ್ಚಲು ತರಬೇತಿ ನೀಡಲಾಗುತ್ತದೆ. 4ನೇ ದಿನ ಅಗ್ರಿಟೂರ್ ಮೂಲಕ ಮಕ್ಕಳಿಗೆ ಕೃಷಿಪಾಠ ನೀಡಿದ್ರೆ, ಬೇಸಿಗೆ ಶಿಬಿರದ 5ನೇ ದಿನ ವಾಟರ್ ಪಾರ್ಕ್‌ನಲ್ಲಿ ಮಕ್ಕಳಿಗೆ ವಿವಿಧ ಆಟೋಟದ ಮಜಾ ಉಣಬಡಿಸಲಾಗುತ್ತದೆ. ಬೇಸಿಗೆ ಶಿಬಿರದ 6ನೇ ದಿನ ಮಕ್ಕಳಿಗೆ ಫೇಸ್ ಪೈಂಟಿಂಗ್, ಗಾಳಿಪಟ ಹಾರಾಟದ ಜೊತೆಗೆ ಫೈರ್ ಕ್ಯಾಂಪ್ ಇರಲಿದೆ.
ಸಾಂಪ್ರದಾಯಿಕ ಆಟದ ಮಜಾ
ಇತ್ತೀಚಿನ ವರ್ಷಗಳಲ್ಲಿ ಗ್ರಾಮೀಣ ಭಾಗದ ಮಕ್ಕಳ ಅಚ್ಚು ಮೆಚ್ಚಿನ ಅದೆಷ್ಟೋ ಸಾಂಪ್ರದಾಯಿಕ ಕ್ರೀಡೆಗಳು ಮರೆಯಾಗಿವೆ. ಇದೇ ಕಾರಣದಿಂದಲೇ ಓಳಾಂಗಣದಲ್ಲಿ, ಚೆನ್ನೆಮಣೆ, ಹಿಡಿಕಡ್ಡಿ ಆಟ, ಗುಡ್ನ, ರಂಗೋಲಿ, ಮಡಲು ಹೆಣೆಯುವುದು, ಹಸಿನ ಕೊಟ್ಟೆ, ಮೆಹಂದಿ, ತೆಂಗಿನಗರಿ ವಾಚ್, ಹಾವು, ಹಿಡಿಸುಡಿ ಆಟದ ಜೊತೆಗೆ ಹೊರಾಂಗಣ ಕ್ರೀಡೆಗಳಾದ, ಕಣ್ಣಾಮುಚ್ಚಾಲೆ, ಲಗೋರಿ, ಜೂಜಾಟ, ಗಿಲ್ಲಿದಾಂಡು, ಟೈರ್, ಬುಗುರಿ, ಗೋಲಿ ಆಟ, ಒಂಟಿ ಕಾಲಿನ ಆಟ, ಕುಂಟೆಬಿಲ್ಲೆ, ಬೆನ್ ಚೆಂಡು, ಕೆರೆದಡ, ಗಾಳಿಪಟ ಹುಲಿದನ ಆಟವನ್ನು ಆಡಿಸಲಾಗುತ್ತದೆ.
ವಿಎಸ್‌ಎಸ್ ಸಿಬಿಎಸ್‌ಇ ಶಾಲೆ ಆಯೋಜಿಸಿರುವ ಬೇಸಿಗೆ ಶಿಬಿರದಲ್ಲಿ 1,000ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಎಲ್ಲಾ ವಿದ್ಯಾರ್ಥಿಗಳಿಗೆ ಶಾಲೆಯಿಂದ ವಾಹನದ ಜೊತೆಗೆ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಶಿಬಿರ ಸಂಪೂರ್ಣವಾಗಿ ಉಚಿತವಾಗಿ ಇರಲಿದ್ದು, 600 ರೂಪಾಯಿ ನೋಂದಣಿ ಶುಲ್ಕವನ್ನು ನೀಡಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
ವಿಎಸ್‌ಎಸ್ ಸಿಬಿಎಸ್‌ಇ ಶಾಲೆ ಮುದ್ದೂರು
ಮೊಬೈಲ್ : 9482481648, 7795116935
vsscbse2025@gmail.com website : www.vsscbsemuddur.in ಸಂಪರ್ಕಿಸಬಹುದಾಗಿದೆ.



