ಸರ್ವರೋಗಕ್ಕೂ ರಾಮಬಾಣ ‘ಅಮೃತಬಳ್ಳಿ’

0
  • ರಕ್ಷಾ ಬಡಾಮನೆ

ಅಮೃತ ಬಳ್ಳಿ…. ಹೆಸರೇ ಸೂಚಿಸುವಂತೆ ಈ ಬಳ್ಳಿಯು ನಮ್ಮ ಸರ್ವತೋಮುಖ ಬೆಳವಣಿಗೆಗೆ ಪೂರಕವಾದುದು. ಈ ಬಳ್ಳಿಗೆ ಈ ಹೆಸರು ಯಾಕೆ ಬಂತೆಂದು ಯೋಚನೆ ಬರುವುದು ಸಹಜ…ಸಾಮಾನ್ಯವಾಗಿ ಅಮೃತಬಳ್ಳಿಯ ಕಾಂಡ, ಎಲೆ ಹಾಗೂ ಬೇರು ಔಷಧೀಯ ಗುಣವನ್ನು ಹೊಂದಿದೆ. ಅಮೃತಬಳ್ಳಿಯ ಕಾಂಡದ ಒಂದು ಚಿಕ್ಕ ಭಾಗವನ್ನು ಮಣ್ಣಿ ನಲ್ಲಿ ಹಾಕಿ ನೆಟ್ಟರೆ ಸಾಕು ಬಳ್ಳಿಯಾಗಿ ಹಬ್ಬಿ ರಾಶಿ ರಾಶಿಯಾಗಿ ಬೆಳೆಯುತ್ತದೆ. ಇದು ಒಣಗುವುದಿಲ್ಲ ಸುಲಭವಾಗಿ ಸಾಯುವುದಿಲ್ಲ. ಅದಕ್ಕೆ ಈ ಗಿಡವನ್ನು ಅಮೃತಕ್ಕೆ ಹೋಲಿಸಿ ಅಮೃತಬಳ್ಳಿ ಎಂದು ಕರೆಯಲ್ಪಡುತ್ತದೆ.

ಅಮೃತಬಳ್ಳಿಯ ತೊಗಟೆ ಬೂದು ಮಿಶ್ರಿತ ಹಳದಿ ಬಣ್ಣ ಮತ್ತು ಎಲೆಯು ಹಸಿರು ನುಣುಪಾಗಿ ಹೃದಯ ಆಕಾರ ದಲ್ಲೀ ಇರುತ್ತದೆ. ಸಸ್ಯದ ಎಲ್ಲಾ ಭಾಗಗಳು ಕಹಿಯಾಗಿದ್ದು, ಔಷಧವೂ ಹೌದು. ಅಮೃತಬಳ್ಳಿ ಗಿಡವು ತ್ರಿದೋಷ ಎಂದರೆ ವಾತ, ಪಿತ್ತ, ಕಫವನ್ನು ಹೋಗಲಾಡಿಸುವ ಗುಣವನ್ನು ಹೊಂದಿದೆ.

ಬಳ್ಳಿಯ ಕಾಂಡದಲ್ಲಿ ಬೆರ್ಬೆರಿನ್, ಟೆಮ್ಬೆಟಾರಿನ್, ಐಸೋಕೊಲುಂಬಿನ್, ಮಾಗ್ನೊಫ್ರೋರಿನ್, ಕೊಲಿನ್ ಮುಂತಾದ ಆಲ್ಕಲಾಯ್ಡಗಳು, ಕಾರ್ಡಿಫಾಲ್, ಟಿನೋಸ್ಪೋರಿನ್ ಹಾಗೂ ಟಿನೋಸ್ಪೋರೈಡ್ ಎಂಬ ಗ್ಲೈಕೋಸೈಡಗಳು, ಬೇಟಾ – ಸಿಟೋಸ್ಟೀರೊಲ್, ಎಕ್ಡೊಸ್ಟಿರೋನ್ ಎಂಬ ಸ್ಟಿರಾಯ್ಡಗಳು ಮತ್ತು ಕೋಸನೊಲ್ ಮುಂತಾದ ವಿಷೇಶ ರಾಸಾಯನಿಕ ಅಂಶಗಳಿದ್ದು ಇವು ಅನೇಕ ರೋಗನಿವಾರಣೆಯಲ್ಲಿ ಮಹತ್ತರ ಪಾತ್ರ ನಿರ್ವಹಿಸುತ್ತವೆ.

ಅಮೃತ ಬಳ್ಳಿಯು ಎಲ್ಲಾ ಬಗೆಯ ಜ್ವರಗಳ ನಿವಾರಣೆಗೆ ಸಹಕಾರಿಯಾಗಿದೆ. ಮಧುಮೇಹ ರೋಗಿಗಳಿಗೂ ಇದು ಉತ್ತಮ ಔಷಧಿಯಾಗಿದೆ. ಸ್ಮರಣ ಶಕ್ತಿಯನ್ನು ಹೆಚ್ಚಿಸಲು ಕೂಡ ಅಮೃತ ಬಳ್ಳಿಯು ಬಹು ಉಪಕಾರಿ. ಮೂತ್ರನಾಳದಲ್ಲಿದ್ದ ಕಲ್ಲುಗಳ ನಿರ್ಮೂಲನೆಗಾಗಿ ಅಮೃತ ಬಳ್ಳಿಯನ್ನು ಔಷಧಿಯಾಗಿ ಬಳಸಲಾಗುತ್ತದೆ.

ಹೊಟ್ಟೆ ಉರಿ ಇದ್ದಲ್ಲಿ ಹಸಿ ಸೊಪ್ಪಿನ ರಸಕ್ಕೆ ಎರಡು ಚಮಚ ಓಂ ಪುಡಿ ಬೆರೆಸಿ ಮಜ್ಜಿಗೆಯಲ್ಲಿ ಕದಡಿ ಕೂಡಿಯುದರಿಂದ ಕಮ್ಮಿಯಾಗುತ್ತದೆ. ತುಂಬಾ ದಿನಗಳಿಂದ ಜರದಿಂದ ಬಳಲುತ್ತಿದ್ದರೆ. ಅಮೃತ ಬಳ್ಳಿ ಹಾಗೂ ಹಿಪ್ಪಲಿಯ ಕಷಾಯ ತಯಾರಿಸಿ ಸೆವಿಸುದರಿಂದ ಒಳ್ಳೆಯ ಪರಿಣಾಮವನ್ನು ಉಂಟು ಮಾಡುತ್ತದೆ.

ಕಾಮಾಲೆ ರೋಗದಲ್ಲಿ ನಿತ್ಯ ಬೆಳಿಗ್ಗೆ ಅಮೃತ ಬಳ್ಳಿಯ ಕಷಾಯ ಕುಡಿದರೆ ಹಿತಕರ ವಾಗಿರುತ್ತದೆ. ಅಸ್ತಮಾ ರೋಗಿಗಳು ದಿನ ನಿತ್ಯ ಅಮೃತ ಬಳ್ಳಿ ಸೇವಿಸಿದರೆ ರೋಗವು ಹತೋಟಿಗೆ ಬರುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಪಾಯಕಾರಿ ರೋಗಗಳಿಗೆ ದೇಹ ತುತ್ತಾಗಾದಂತೆ ಸಂರಕ್ಷಣೆ ಮಾಡುತ್ತದೆ.

ಅಮೃತ ಬಳ್ಳಿಯ ರಸವನ್ನು ದಿನನಿತ್ಯವೂ ಸೇವಿಸುವುದರಿಂದ ಶರೀರದ ಧಾತುಗಳ ವೃದ್ಧಿಯಾಗಿ ಶರೀರಕ್ಕೆ ಪೋಷಣೆ ಸಿಗುವುದು. ಕೂದಲು ಸೊಂಪಾಗಿ ಬೆಳೆಯಲು ಕೂಡ ಸಹಕಾರಿಯಾಗಿದೆ.

ಬಾಣಂತಿಯರು ಅಮೃತಬಳ್ಳಿ ಹಾಗೂ ಶುಂಠಿಯಿಂದ ತಯಾರಿಸಿದ ಕಷಾಯವನ್ನು ಸೇವಿಸುವುದರಿಂದ ಸ್ತನ್ಯ (ಎದೆಹಾಲು) ಶುದ್ಧಿಯಾಗುವುದು.

ವಾತ ದೋಷ ಪ್ರಧಾನವಾಗಿರುವ ಜ್ವರದಲ್ಲಿ ಅಮೃತ ಬಳ್ಳಿಯ ಕಾಂಡಗಳನ್ನು ಜಜ್ಜಿ ನೀರನ್ನು ಸೇರಿಸಿ ಕುದಿಸಿ ಅರ್ಧದಷ್ಟು ಇಳಿಸಿ ಕಷಾಯ ತಯಾರಿಸಿ ಸೋಸಿ ಕುಡಿಯುವುದು ಉತ್ತಮ. ರಕ್ತದೊತ್ತಡ, ಬೊಜ್ಜು, ಅಜೀರ್ಣ, ಅಗ್ನಿಮಾಂದ್ಯಗಳು ದೂರವಾಗುತ್ತವೆ. ತಾಜಾ ಅಮೃತಬಳ್ಳಿಯ ರಸ ದೊರಕದಿದ್ದಾಗ ಒಣಗಿದ ಅಮೃತ ಬಳ್ಳಿಯ ಕಷಾಯವನ್ನು ಸೇವಿಸಬಹುದು.

ಪ್ರತಿನಿತ್ಯ ಎರಡು ಚಮಚ ಅಮೃತ ಬಳ್ಳಿಯ ರಸಕ್ಕೆ ಒಂದು ಅಥವಾ ಎರಡು ಚಮಚ ಜೇನುತುಪ್ಪವನ್ನು ಸೇರಿಸಿ ಖಾಲಿ ಹೊಟ್ಟೆಯಲ್ಲಿ ಮೂರು ತಿಂಗಳು ಸೇವಿಸುತ್ತಾ ಬಂದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.

ಅರ್ಧ ಗ್ರಾಂ ಅಮೃತ ಬಳ್ಳಿಯನ್ನು ನೆಲ್ಲಿಕಾಯಿ ಜೊತೆ ಮಿಶ್ರಣ ಮಾಡಿ ಸೇವಿಸಿದರೆ ಹೊಟ್ಟೆ ನೋವು ಸಮಸ್ಯೆ ನಿವಾರಣೆಯಾಗುತ್ತದೆ. ಕಾಂಡವನ್ನು ಸಾಮಾನ್ಯ ಜ್ವರದಿಂದ ಹಿಡಿದು ಮಲೇರಿಯಾ, ವಿಷಮಶೀತ ಜ್ವರ, ಟೈಫೋಯಿಡ್, ಮೆದುಳುಜ್ಚರ, ಚಿಕನ್ಗುನ್ಯಾ ಮುಂತಾದ ಜ್ವರ ರೋಗಗಳ ನಿವಾರಣೆಯಲ್ಲಿ ಪರಿಣಾಮಕಾರಿಯಾಗಿ ಬಳಸುತ್ತಾರೆ.

Leave A Reply

Your email address will not be published.