ಬೀಟ್ ರೂಟ್ ಜ್ಯೂಸ್ ಮಾಡುತ್ತೆ ಅದ್ಬುತ ಚಮತ್ಕಾರ !

0

ರಕ್ಷಾ ಬಡಾಮನೆ

ದಿನ ನಿತ್ಯದ ಬಳಕೆಯಲ್ಲಿ ಹಲವಾರು ತರಕಾರಿಗಳನ್ನು ಬಳಕೆ ಮಾಡ್ತೇವೆ. ತರಕಾರಿ ಸೇವನೆ ಆರೋಗ್ಯವನ್ನು ವೃದ್ದಿಸುತ್ತೆ. ಅದ್ರಲ್ಲೂ ಬೀಟ್ ರೂಟ್ ಅಂದ್ರೆ ಸಾಕು ಮೂಗು ಮುರಿಯುವವರೇ ಹೆಚ್ಚು. ಆದರೆ ಕೆಲವರಿಗೆ ರಕ್ತ ಹೀನತೆ, ಬಲಹೀನತೆಯ ಸಮಸ್ಯೆಯನ್ನು ಬಗೆ ಹರಿಸುತ್ತೆ ಅನ್ನೋಷ್ಟೇ ಗೊತ್ತು. ಆದರೆ ಬೀಟ್ ರೂಟ್ ಜ್ಯೂಸ್ ನಮ್ಮ ಆರೋಗ್ಯದ ಮೇಲೆ ಎಂತಹಾ ಚಮತ್ಕಾರ ಮಾಡುತ್ತೆ ಅನ್ನೋದು ನಿಮಗೆ ಗೊತ್ತಾ ?

ರಕ್ತ ಹೀನತೆ, ಬಲಹೀನತೆಯ ಸಮಸ್ಯೆಯ ನಿವಾರಣೆಗೆ ಭಾರತೀಯರು ಬೀಟ್ ರೂಟ್ ಸೇವನೆ ಮಾಡಿದ್ರೆ, ರೋಮನ್ನರು ಲೈಂಗಿಕ ಶಕ್ತಿಯನ್ನು ವೃದ್ದಿಸಿಕೊಳ್ಳಲು ಬೀಟ್ ರೂಟ್ ಬಳಕೆ ಮಾಡ್ತಾರೆ. ಬೀಟ್ ರೂಟ್ ನಲ್ಲಿ ಹೇರಳ ಪ್ರಮಾಣದಲ್ಲಿ ನೈಟ್ರೇಟ್ ಅಂಶವಿರುವುದರಿಂದ ಬೀಟ್ ರೂಟ್ ಸೇವನೆಯಿಂದ ನಮ್ಮ ದೇಹದಲ್ಲಿ ನೈಟ್ರೈಟ್ ಗಳು ಮತ್ತು ನೈಟ್ರಿಕ್ ಆಕ್ಸೈಡ್ ವಿಂಗಡನೆಯಾಗುತ್ತದೆ. ಅಪದಮನಿಗಳನ್ನು ಹಿಗ್ಗಿಸುವುದರ ಜೊತೆಗೆ ರಕ್ತದೊತ್ತಡ ನಿಯಂತ್ರಣದಲ್ಲಿಡಲು ಸಹಕಾರಿಯಾಗಿದೆ. ನಿತ್ಯವೂ 500 ಗ್ರಾಂ ಬೀಟ್ ರೂಟ್ ಸೇವನೆ ಮಾಡಿದ್ರೆ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.

ಬೀಟ್ ರೂಟ್ ಜ್ಯೂಸ್ ನಮ್ಮ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಗಳನ್ನು ನೀಡುತ್ತದೆ. ಹಲ್ಲು ಹಾಗೂ ಮೂಳೆಗಳಿಗೆ ಕ್ಯಾಲ್ಸಿಯಂ ಅತೀ ಅಗತ್ಯ ಇರುವುದರಿಂದ ದಿನಕ್ಕೊಂದು ಕಪ್ ಬೀಟ್ ರೂಟ್ ಜ್ಯೂಸ್ ಸೇವನೆ ಮಾಡಿದ್ರೆ ಹಲ್ಲು ಮತ್ತು ಮೂಳೆ ಸದೃಢವಾಗಿರುತ್ತದೆ. ಮಾತ್ರವಲ್ಲ ಬೀಟ್ ರೂಟ್ ಜ್ಯೂಸ್ ಸೇವನೆ ಮಾಡೋದ್ರಿಂದ ಸುಲಭವಾಗಿ ಮೂಳೆ ಮುರಿತಕ್ಕೆ ಒಳಗಾಗುವ ಸಾಧ್ಯತೆಯನ್ನು ತಪ್ಪಿಸುತ್ತದೆ.

ಬೀಟ್ ರೂಟ್ ನಲ್ಲಿ ಹೇರಳ ಪ್ರಮಾಣದಲ್ಲಿ ಫಾಲಿಕ್ ಆಸಿಡ್ ಇರೋದ್ರಿಂದ ಗರ್ಭಿಣಿಯರಿಗೆ ಮತ್ತು ಮಗುವಿನ ಆರೋಗ್ಯಕ್ಕೆ ಬಹಳ ಮುಖ್ಯ. ಗರ್ಭಿಣಿಯರು ಬೀಟ್ ರೂಟ್ ಸೇವನೆ ಮಾಡುವುದರಿಂದ ಮಗುವಿನ ಬೆನ್ನು ಮೂಳೆಯ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಇಷ್ಟೇ ಅಲ್ಲಾ ಮಹಿಳೆಯರಿಗೆ ಹೆಚ್ಚಿನ ಶಕ್ತಿಯನ್ನು ನೀಡುತ್ತದೆ.

ಬೀಟ್ ರೂಟ್ ಮಾನವನ ದೈಹಿಕ ಕ್ಷಮತೆಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ನೈಟ್ರೇಟ್ ಅಂಶ ಅಪದಮನಿಗಳನ್ನು ಹಿಗ್ಗಿಸಿ ರಕ್ತ ಚಲನೆಯನ್ನು ಸರಾಗವಾಗಿ ಮಾಡುವುದರಿಂದ ದೇಹದ ಕ್ಷಮತೆ ಹೆಚ್ಚುತ್ತಿದೆ. ಮಾತ್ರವಲ್ಲ ಕಬ್ಬಿಣದ ಅಂಶವೂ ಹೇರಳ ಪ್ರಮಾಣದಲ್ಲಿ ಇರುವುದರಿಂದ ಶಕ್ತಿಯನ್ನು ವೃದ್ದಿಸುತ್ತದೆ ಅನ್ನೋ ಅಂಶ ಸಂಶೋಧನೆಗಳಿಂದಲೇ ಬಯಲಾಗಿದೆ.

ಕೇವಲ ರಕ್ತದೊತ್ತಡವನ್ನು ನಿಯಂತ್ರಿಸುವುದು ಮಾತ್ರವಲ್ಲ ಬೀಟ್ ರೂಟ್ ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣವನ್ನು ನಿಯಂತ್ರಣದಲ್ಲಿಡುತ್ತದೆ. ಕರಗುವ ನಾರು, ಪದಾರ್ಥಗಳು, ಪ್ಲವೋನೈಡ್ ಮತ್ತು ಬೆಟಾಸಿಯಾನಿಸ್ ಗಳ ಪ್ರಮಾಣ ಅಧಿಕವಾಗಿರುವುದರಿಂದ ಹೃದಯಘಾತವನ್ನು ತಡೆಯಲು ಸಹಕಾರಿಯಾಗಿದೆ.

ತಿನ್ನೋದಕ್ಕೆ ಕೊಂಚ ಸಿಹಿ ಸಿಹಿಯಾಗಿರುವ ಬೀಟ್ ರೂಟ್ ಮಧುಮೇಹ ನಿಯಂತ್ರಕ ಗುಣವನ್ನು ಹೊಂದಿದೆ. ಬೀಟ್ ರೂಟ್ ನಲ್ಲಿರುವ ಔಷಧೀಯ ಗುಣ ದೇಹದಲ್ಲಿ ಸಕ್ಕರೆಯ ಅಂಶವನ್ನು ನಿಯಂತ್ರಣದಲ್ಲಿ ಇರಿಸುತ್ತದೆ.

ಐರೋಪ್ಯ ರಾಷ್ಟ್ರಗಳಲ್ಲಿ ಬೀಟ್ ರೂಟ್ ನ್ನು ನೈಸರ್ಗಿಕ ವಯಾಗ್ರ ಅಂತಾನೆ ಕರೆಯಲಾಗುತ್ತದೆ. ಪುರಾತನ ಕಾಲದಿಂದಲೂ ಲೈಂಗಿಕ ಆರೋಗ್ಯವನ್ನು ಹೆಚ್ಚಿಸಿಕೊಳ್ಳಲು ಬೀಟ್ ರೂಟ್ ಬಳಕೆಯಾಗುತ್ತಿದೆ. ಬೀಟ್ ರೂಟ್ ನಲ್ಲಿರುವ ನೈಟ್ರೇಟ್ ದೇಹಕ್ಕೆ ನೈಟ್ರಿಕ್ ಆಕ್ಸೈಡ್ ಬಿಡುಗಡೆ ಮಾಡಲು ಸಹಾಯ ಮಾಡುವುದರ ಮೂಲಕ, ರಕ್ತನಾಳಗಳು ಮತ್ತು ಜನನಾಂಗಗಳಲ್ಲಿ ರಕ್ತದ ಹರಿವನ್ನು ವಿಸ್ತರಣೆ ಮಾಡುತ್ತದೆ.

ವೈದ್ಯಕೀಯ ಕ್ಷೇತ್ರದಲ್ಲಿ ಈಗೀಗ ಪ್ರಮುಖ ವಯಾಗ್ರ ಉತ್ಪಾದಕವಾಗಿಯೂ ಇದನ್ನು ಬಳಸಲಾಗುತ್ತದೆ. ಲೈಂಗಿಕ ಹಾರ್ಮೋನುಗಳ ಉತ್ಪಾದನೆಗೆ ಅಗತ್ಯವಾಗಿರೋ ಬೊರೊನ್ ಅಂಶ ಬೀಟ್ ರೂಟ್ ನಲ್ಲಿ ಹೇಳರವಾಗಿರುವುದರಿಂದ ಮಾತ್ರೆಗಳನ್ನು ತಿಂದು ಆರೋಗ್ಯವನ್ನು ಹಾಳು ಮಾಡಿಕೊಳ್ಳುವ ಬದಲು ಬೀಟ್ ರೂಟ್ ಸೇವಿಸೋದು ಉತ್ತಮ.

ಬೀಟ್ ರೂಟ್ ನಲ್ಲಿರುವ ಬೀಟಾಸೈನಿನ್ ಅಂಶ ಕ್ಯಾನ್ಸರ್ ತಡೆಯುವ ಶಕ್ತಿಯನ್ನು ಹೊಂದಿದೆ. ದೇಹದಲ್ಲಿ ಕ್ಯಾನ್ಸರ್ ಗ್ರಂಥಿಗಳ ಬೆಳವಣಿಗೆಯನ್ನು ಬೀಟ್ ರೂಟ್ ನಲ್ಲಿರುವ ಬೀಟಾಸೈನಿನ್ ಅಂಶ ಕಡಿಮೆ ಮಾಡುತ್ತದೆ. ಬೀಟ್ ರೂಟ್ ಸೇವನೆಯನ್ನು ಮಾಡುವುದರಿಂದ ಕ್ಯಾನ್ಸರ್ ಬಾರದಂತೆ ತಡೆಯಬಹುದು, ಮಾತ್ರವಲ್ಲ ಕ್ಯಾನ್ಸರ್ ರೋಗಿಗಳಿಗೂ ಹೆಚ್ಚು ಉಪಯುಕ್ತ.

ಬೀಟ್ ರೂಟ್ ನಲ್ಲಿ ಕರಗಬಲ್ಲ ಫೈಬರ್ ಅಂಶವಿರುವುದರಿಂದ ಮಲವಿಸರ್ಜನೆಗೆ ಅತ್ಯಂತ ಸಹಾಯಕಾರಿ. ಕರಗಬಲ್ಲ ಫೈಬರ್ ಅಂಶದಿಂದ ಕರುಳಿನ ಶುದ್ದೀಕರಣ ಮಾಡುವುದರ ಜೊತೆಗೆ ಕರುಳಿನ ಚಲನೆಗಳನ್ನು ಸುಲಭಗೊಳಿಸಿ ಹೊಟ್ಟೆಯ ಆರೋಗ್ಯವನ್ನು ಕಾಪಾಡುತ್ತದೆ.

Leave A Reply

Your email address will not be published.