ಖಾಲಿಹೊಟ್ಟೆಯಲ್ಲಿ ಎಳನೀರು ಕುಡಿಯೋದ್ರಿಂದ ಏನಾಗುತ್ತೆ ಗೊತ್ತಾ ?

0

ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ನಾವು ನಿತ್ಯವೂ ಒಂದಿಲ್ಲೊಂದು ಆಹಾರ, ಔಷಧಿಗಳ ಮೊರೆ ಹೋಗುತ್ತೇವೆ. ಆದರೆ ನಿತ್ಯವೂ ನಾವು ಸೇವಿಸೋ ಆಹಾರ, ಪಾನೀಯ ಎಷ್ಟರ ಮಟ್ಟಿಗೆ ನಮ್ಮ ಆರೋಗ್ಯಕ್ಕೆ ಉತ್ತಮ ಅನ್ನೋದನ್ನು ತಿಳಿದುಕೊಂಡಿರು ವುದು ಉತ್ತಮ.

ಸಾಮಾನ್ಯವಾಗಿ ದಣಿವಾರಿಸಿಕೊಳ್ಳಲು ಕುಡಿಯುವ ಎಳನೀರು ದೇಹಕ್ಕೆ ಎಷ್ಟೇಲ್ಲಾ ಚೈತನ್ಯವನ್ನು ಕೊಡುತ್ತದೆ ಅನ್ನೋದು ನಿಮಗೆ ಗೊತ್ತಾ.

ದೇಹಕ್ಕೆ ಬೇಕಾಗುವ ನೀರಿನ ಅಗತ್ಯಗಳನ್ನು ಪೂರೈಸೋ ಎಳನೀರಿನಲ್ಲಿ ಹೇರಳ ಪ್ರಮಾಣದಲ್ಲಿ ಖನಿಜ, ಲವಣ ಮತ್ತು ಸಕ್ಕರೆಯ ಅಂಶವಿದೆ. ಇವುಗಳು ದೇಹದ ಆರೋಗ್ಯವನ್ನು ವೃದ್ದಿಸುವುದರಿಂದ ಎಳನೀರು ಅಮೃತವೆನಿಸಿಕೊಂಡಿದ್ದು, ಕಲ್ಪವೃಕ್ಷವೆಂತಲೂ ಕರೆಯುತ್ತಾರೆ.

ಎಂತಹಾ ಆರೋಗ್ಯ ಸಮಸ್ಯೆಯಿದ್ದಾಗಲೂ ವೈದ್ಯರು ಎಳನೀರು ಕುಡಿಯಲು ಸಲಹೆ ನೀಡುತ್ತಾರೆ. ಅದ್ರಲ್ಲೂ ನಿತ್ಯವೂ ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿಯೋದ್ರಿಂದ ಎಷ್ಟೆಲ್ಲಾ ಪ್ರಯೋಜನ ಗಳಿವೆ ಅನ್ನೋದನ್ನು ನೀವೇ ನೋಡಿ..

ಮಧುಮೇಹ ನಿಯಂತ್ರಣ
ಇತ್ತೀಚಿನ ದಶಕಗಳಲ್ಲಿ ಬಹುತೇಕರನ್ನು ಕಾಡುತ್ತಿರೋ ಆರೋಗ್ಯ ಸಮಸ್ಯೆಗಳಲ್ಲಿ ಮಧುಮೇಹವೂ ಒಂದು. ಇಂತಹ ಮಧುಮೇಹವನ್ನು ನಿಯಂತ್ರಣದಲ್ಲಿಡಲು ಎಳನೀರು ಹೆಚ್ಚು ಸಹಕಾರಿ ಅನ್ನುತ್ತಿದೆ ಆಯುರ್ವೇದ. ಎಳನೀರಿನಲ್ಲಿ ಕಡಿಮೆ ಪ್ರಮಾಣದಲ್ಲಿ ಸಕ್ಕರೆಯ ಅಂಶವಿರುವುದರಿಂದ ವೈದ್ಯರ ಸಲಹೆಯ ಮೇರೆಗೆ ನಿಗದಿತ ಪ್ರಮಾಣ ದಲ್ಲಿ ಎಳನೀರು ಸೇವನೆ ಮಾಡುವುದು ಹೆಚ್ಚು ಸಹಕಾರಿ. ಎಳನೀರು ಸೇವನೆಯಿಂದ ರಕ್ತದ ಸಂಚಾರ ಉತ್ತಮಗೊಂಡು ಮಧುಮೇಹ ನಿಯಂತ್ರಣಕ್ಕೆ ಬರಲು ಸಹಕರಿಸುತ್ತದೆ.

ರಕ್ತದೊತ್ತಡಕ್ಕೆ ಮುಕ್ತಿ
ಮಧುಮೇಹ ಸಮಸ್ಯೆಯಷ್ಟೇ ಅಲ್ಲಾ ರಕ್ತದೊತ್ತಡ ಸಮಸ್ಯೆಯ ಪರಿಹಾರಕ್ಕೂ ಎಳನೀರು ಹೆಚ್ಚು ಸಹಕಾರಿಯಾಗಿದೆ. ರಕ್ತದಲ್ಲಿರುವ ಎಲೆಕ್ಟ್ರೋಲೈಟೆ ಕಣಗಳು ರಕ್ತದೊತ್ತಡವನ್ನು ಹೆಚ್ಚಿಸುತ್ತವೆ. ಆದರೆ ಎಲೆಕ್ಟ್ರೋಲೈಟ್ ಕಣಗಳ ತೀವ್ರತೆಯನ್ನು ಕಡಿಮೆ ಮಾಡುವ ಶಕ್ತಿ ಎಳನೀರಿಗೆ ಇದೆ. ಹೀಗಾಗಿ ನಿತ್ಯವೂ ಎಳನೀರು ಸೇವನೆ ಮಾಡುವುದರಿಂದ ರಕ್ತದೊತ್ತಡ ಸಮಸ್ಯೆಯಿಂದಲೂ ದೂರವಿರಬಹುದು.

ಮೂತ್ರಪಿಂಡ ಕಲ್ಲು ಕರಗಿಸುತ್ತೆ
ಮೂತ್ರಪಿಂಡದಲ್ಲಿ ಕಲ್ಲಿನ ಸಮಸ್ಯೆ ಇತ್ತೀಚಿನ ವರ್ಷಗಳಲ್ಲಿ ಸರ್ವೆ ಸಾಮಾನ್ಯ. ಮೂತ್ರಪಿಂಡ ಕಲ್ಲುಕರಗಿಸಲು ನಾನಾ ಕಸರತ್ತುಗಳನ್ನು ನಡೆಸುತ್ತೇವೆ. ದುಬಾರಿ ಹಣತೆತ್ತು ಔಷಧ ಮಾಡಿದ್ರೂ ಕಲ್ಲು ಕರಗ ಲಿಲ್ಲಾ ಅನ್ನೋ ಚಿಂತೆ ಕಾಡೋದು ಸಹಜ. ಆದರೆ ಮೂತ್ರಪಿಂಡ ಕಲ್ಲನ್ನು ಕರಗಿಸೋ ಶಕ್ತಿ ಎಳನೀರಿಗೆ ಇದೆ. ಯೂರಿಕ್ ಆಮ್ಲ ಅಥವಾ ಸಿಸ್ಟೈನ್ ಲವಣಗಳಿಂದ ಮೂತ್ರಪಿಂಡದಲ್ಲಿ ಕಲ್ಲು ಉಂಟಾಗಿದ್ದರೆ ಎಳನೀರು ಕುಡಿಯುವುದು ಉತ್ತಮ. ಎಳನೀರಿನಲ್ಲಿರುವ ಪೊಟ್ಯಾಶಿಯಂ ಅಂಶ ಮೂತ್ರಪಿಂಡದ ಕಲ್ಲನ್ನು ಸುಲಭವಾಗಿ ಕರಗಿಸುತ್ತದೆ.

ಒತ್ತಡವನ್ನು ನಿವಾರಿಸುತ್ತದೆ
ದಿನ ಬೆಳಗಾದ್ರೆ ಮನುಷ್ಯ ಒಂದಿಲ್ಲೊಂದು ಒತ್ತಡದಿಂದ ಬಳಲುತ್ತಿರುತ್ತಾನೆ. ಇಂತಹ ಒತ್ತಡವನ್ನು ನಿವಾರಿಸುವಲ್ಲಿ ಎಳನೀರು ಹೆಚ್ಚು ಸಹಕಾರಿಯಾಗಿದೆ. ಎಳನೀರಿನಲ್ಲಿರುವ ವಿಟಮಿನ್ ಬಿ ಅಂಶವು ದೇಹಕ್ಕೆ ಹೊಸ ಚೈತನ್ಯವನ್ನು ನೀಡುವುದರ ಜೊತೆಗೆ ಒತ್ತಡವನ್ನು ನಿವಾರಿಸುತ್ತದೆ. ಮಾತ್ರವಲ್ಲ ಹೆಚ್ಚುವರಿಯಾಗಿರುವ ದೇಹ ತೂಕವನ್ನು ಕಡಿಮೆ ಮಾಡುವುದರ ಮೂಲಕ ತೂಕ ಇಳಿಕೆಗೂ ಎಳನೀರು ಹೆಚ್ಚು ಸಹಕಾರಿಯಾಗಿದೆ ಅನ್ನೋ ಅಂಶ ಸಂಶೋಧನೆಯಿಂದಲೂ ದೃಢಪಟ್ಟಿದೆ.

ಕ್ಯಾನ್ಸರ್ ಗೆ ರಾಮಬಾಣ
ದಣಿವಾರಿಸಿಕೊಳ್ಳೋದಕ್ಕೆ ಕುಡಿಯುವ ಎಳನೀರಿಗೆ ಕ್ಯಾನ್ಸರ್ ತಡೆಯೋ ಶಕ್ತಿಯಿದೆ ಎಂದ್ರೆ ನಂಬೋದಕ್ಕೆ ಸಾಧ್ಯಾನಾ ? ಆದರೂ ನಂಬಲೇ ಬೇಕು. ಎಳನೀರಿನಲ್ಲಿರುವ ಸೈಟೋಕೈನ್ ಮತ್ತು ಲಾರಿಕ್ ಆಸಿಡ್ ಅಂಶ ಜೀವಕೋಶಗಳ ಬೆಳವಣಿಗೆ ಸಹಕಾರಿಯನ್ನು ಮಾಡುತ್ತದೆ. ಅಲ್ಲದೇ ದೇಹದಲ್ಲಿರುವ ಕ್ಯಾನ್ಸರ್ ಕಾರಕ ಅಂಶಗಳನ್ನು ದೂರ ಮಾಡುವಲ್ಲಿ ಎಳನೀರಿನಲ್ಲಿ ಇರುವ ಪೋಷಕಾಂಶಗಳು ಹೆಚ್ಚು ಸಹಕಾರಿಯಾಗಿವೆ.

ಹೆಚ್ಚಿಸುತ್ತೆ ಚರ್ಮದ ಕಾಂತಿ
ಎಳನೀರನ್ನು ನಿಯಮಿತವಾಗಿ ಕುಡಿಯುವುದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ. ಚಳಿಗಾಲದಲ್ಲಿ ಗಾಳಿಯ ತೇವಾಂಶವಿಲ್ಲದೇ ಚರ್ಮ ಒಣಗಿದ್ರೆ, ಬೇಸಿಗೆಯಲ್ಲಿ ಬಿಸಿಲಿನ ಝಳಕ್ಕೆ ಚರ್ಮ ತನ್ನ ಕಾಂತಿಯನ್ನು ಕಳೆದುಕೊಳ್ಳುತ್ತದೆ. ಬೇಸಿಗೆಯ ಅವಧಿಯಲ್ಲಿ ಚರ್ಮದ ಭಾಗ ಹೆಚ್ಚು ಗಾಢವಾಗಿರಲು ಮೆಲನಿನ್ ಕಾರಣವಾಗಿರುತ್ತದೆ. ಚಳಿಗಾಲ ಹಾಗೂ ಬೇಸಿಗೆಯ ಕಾಲದಲ್ಲಿ ಚರ್ಮದ ಆರೈಕೆಗಾಗಿ ಎಣ್ಣೆಯನ್ನು ಹೆಚ್ಚಾಗಿ ಬಳಕೆ ಮಾಡುತ್ತಾರೆ. ಆದರೆ ಎಣ್ಣೆಯನ್ನು ಚರ್ಮದ ಮೇಲೆ ಲೇಪಿಸುವುದರಿಂದ ಧೂಳು ಚರ್ಮದ ಮೇಲೆ ಕುಳಿತು ಚರ್ಮ ಸಮಸ್ಯೆಗೆ ಕಾರಣವಾಗಬಹುದು. ಆದರೆ ಹತ್ತಿಯನ್ನು ಎಳನೀರಿನಲ್ಲಿ ಮುಳುಗಿಸಿ ಹಚ್ಚುವುದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ. ಒಣಗಿದ ಚರ್ಮವು ಹೊಸ ಚೈತನ್ಯವನ್ನು ಪಡೆದುಕೊಳ್ಳುತ್ತದೆ.

ಜೀರ್ಣಶಕ್ತಿ ವೃದ್ದಿಸುತ್ತೆ
ಎಳನೀರಿನಲ್ಲಿರುವ ಪೋಲಿಕ್ ಆಮ್ಲ, ಫಾಸ್ಪಟೇಟ್, ಕ್ಯಾಟಲೇಸ್, ಡಿಹೈಡ್ರೋಜಿನೆಸ್, ಡೈಯಾಸ್ಟೇಸ್, ಪೆರಾಕ್ಸಿಡೇಸ್, ಆರ್.ಎನ್.ಎ, ಪಾಲಿಮರೇಸಸ್ ನಂತ ಕಿಣ್ವಗಳು ನಾವು ಸೇವಿಸೋ ಆಹಾರ ಸರಿಯಾದ ಪ್ರಮಾಣದಲ್ಲಿ ಜೀರ್ಣವಾಗಲು ಸಹಕಾರಿಯಾಗಿದೆ. ಮಾತ್ರವಲ್ಲ ನಿರ್ಲಜೀಕರಣ ಸಮಸ್ಯೆಯಿಂದ ತಲೆದೋರುವ ಕಾಲರಾ, ಬೇಧಿ, ಹೊಟ್ಟೆಯ ಪ್ಲೂನಂತಹ ಆರೋಗ್ಯ ಸಮಸ್ಯೆಗಳಿಗೂ ಎಳನೀರು ರಾಮಬಾಣದಂತೆ ಕಾರ್ಯನಿರ್ವಹಿಸುತ್ತದೆ. ಹೊಟ್ಟೆ ಉಬ್ಬರಿಸುವ ಸಮಸ್ಯೆಯಿದ್ದವರು ಎಳನೀರು ಸೇವನೆ ಮಾಡುವುದು ಸೂಕ್ತ. ಜಠರಕ್ಕೆ ಎಳನೀರು ಸೇರುವುದರಿಂದ ಅನಗತ್ಯ ವಾಯು ಉತ್ಪತ್ತಿಯಾಗುವು ದನ್ನು ತಡೆಯುತ್ತದೆ. ಇದರಿಂದಾಗಿ ಹೊಟ್ಟೆಯುರಿ, ವಾಯುಪ್ರಕೋಪ, ಹೊಟ್ಟೆಯುಬ್ಬರ ಹಾಗೂ ಹುಳಿತೇಗಿನಂತಹ ಸಮಸ್ಯೆಗಳು ಕೂಡ ಪರಿಹಾರವಾಗುತ್ತದೆ. ಎಳನೀರಿನ 100 ಮಿಲಿ ನೀರು 250 ಮಿಗ್ರಾಂ ಪೊಟ್ಯಾಷಿಯಂ ಮತ್ತು 105 ಮಿಗ್ರಾಂ ಸೋಡಿಯಂ ಅಂಶಗಳನ್ನು ಹೊಂದಿದೆ. ಇಂತಹ ಅಂಶಗಳು ಅತಿಸಾರದಂತಹ ಸಮಸ್ಯೆಯನ್ನು ತಡೆಯುತ್ತವೆ.

ಕಾಂತಿಯುತ ಕೂದಲು ಪಡೆಯಿರಿ
ಕೂದಲು ಉದುರುವ ಸಮಸ್ಯೆಯಿಂದ ನೀವೇನಾದ್ರೂ ಬಳಲುತ್ತಿದ್ರೆ ಎಳನೀರು ಬಳಸೋದ್ರಿಂದ ನಿಮ್ಮ ಸಮಸ್ಯೆಗೆ ಮುಕ್ತಿಯನ್ನು ಪಡೆಯ ಬಹುದು. ತಲೆಕೂದಲಿಗೆ ಎಣ್ಣೆಯ ಬದಲು ಎಳನೀರನ್ನು ಹಚ್ಚಿ ನಿಧಾನವಾಗಿ ಮಸಾಜ್ ಮಾಡುವುದರಿಂದ ಕೂದಲು ದೃಢವಾಗುತ್ತದೆ. ಬುಡದಿಂದಲೇ ಹೆಚ್ಚು ಶಕ್ತಿಯುತವಾಗಿ ಬೆಳೆಯಲು ಸಹಕಾರಿಯಾಗಿದೆ. ಬುಡದಿಂದಲೇ ಕೂದಲು ಗಟ್ಟಿಯಾಗುವುದರಿಂದ ಕೂದಲು ಸದೃಢ ವಾಗಿ ಬೆಳೆಯುತ್ತದೆ. ಮಾತ್ರವಲ್ಲ ಎಳನೀರಿನಲ್ಲಿರುವ ವಿಟಮಿನ್ ಹಾಗೂ ಕಬ್ಬಿಣದ ಅಂಶ ಕೂದಲಿಗೆ ಹೊಳಪನ್ನು ನೀಡುವಲ್ಲಿಯೂ ಸಹಕಾರಿಯಾಗಿದೆ. ಕೂದಲು ಮೃದುವಾಗಿ, ಕಾಂತಿಯುಕ್ತವಾಗಿರಲು ಎಳನೀರು ಬಳಕೆ ಹೆಚ್ಚು ಸೂಕ್ತ.

ಸ್ನಾಯು ಸೆಳೆತ ಸಮಸ್ಯೆಗೆ ರಾಮಬಾಣ
ಸ್ನಾಯುಗಳ ಸೆಳೆತವನ್ನು ನಿವಾರಿಸುವಲ್ಲಿಯೂ ಎಳನೀರು ಹೆಚ್ಚು ಸಹಕಾರಿ. ಸಾಮರ್ಥ್ಯಕ್ಕಿಂತ ಹೆಚ್ಚು ಕೆಲಸ ಮಾಡಿದ್ರೆ, ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿ ಸ್ನಾಯುಗಳ ಸೆಳೆ ಉಂಟಾಗುತ್ತದೆ. ದೇಹದಲ್ಲಿ ಪೊಟ್ಯಾಶಿಯಂ ಕೊರತೆಯೇ ಸ್ನಾಯು ಸೆಳೆತಕ್ಕೆ ಕಾರಣವಾಗುವು ದರಿಂದ ಎಳನೀರಿನಲ್ಲಿರುವ ಪೊಟ್ಯಾಶಿಯಂ ಅಂಶ ಸ್ನಾಯು ಸೆಳೆತ ವನ್ನು ತಡೆಯುತ್ತದೆ. ಎಳನೀರಿನಲ್ಲಿರುವ ಪೊಟ್ಯಾಶಿಯಂ ಅಂಶ ಮೂಳೆಗಳು ಗಟ್ಟಿಯಾಗಿ ಸ್ನಾಯು ಸೆಳೆತದಂತಹ ಸಮಸ್ಯೆ ತಲೆದೋರ ದಂತೆ ತಡೆಯುತ್ತದೆ.

Leave A Reply

Your email address will not be published.