ದಿನಕ್ಕೆ ಎಷ್ಟು ಮೊಟ್ಟೆಗಳನ್ನು ಸೇವಿಸಬೇಕು ಗೊತ್ತಾ ?

0
  • ರಕ್ಷಾ ಬಡಾಮನೆ

ಮೊಟ್ಟೆ ಉತ್ತಮ ಪೌಷ್ಠಿಕಯುಕ್ತ ಆಹಾರವಾಗಿದೆ. ಅಂತೆಯೇ ಅನೇಕ ರೋಗಗಳು ಬಾರದಂತೆಯೂ ನಿಯಂತ್ರಿಸುತ್ತದೆ. ಮೊಟ್ಟೆಯಲ್ಲಿ ಕೊಲೆಸ್ಟ್ರಾಲ್ ಮತ್ತು ಕೊಬ್ಬಿನ ಅಂಶವಿದ್ದರೂ ಸರಿಯಾದ ಪ್ರಮಾಣದಲ್ಲಿ ತೆಗೆದುಕೊಂಡರೆ ಆರೋಗ್ಯವಂತರಾಗಿ ಇರಬಹುದು. ನಮ್ಮ ದೇಹದಲ್ಲಿ ಪೌಷ್ಠಿಕಾಂಶವೂ ಹೆಚ್ಚಾಗುತ್ತದೆ.

ಮೊಟ್ಟೆಯಿಂದ ನಮ್ಮ ದೇಹಕ್ಕೆ ಪೊಟಾಸಿಯಂ, ಮೆಗ್ನಿಷಿಯಂ, ಸೋಡಿಯಂ ಜೊತೆಗೆ ಗುಣಮಟ್ಟದ ಪ್ರೋಟಿನ್ ಗಳು ದೊರೆಯುತ್ತವೆ. ಅಲ್ಲದೇ, ವಿಟಮಿನ್ ಎ, ರಂಜಕ, ಕಬ್ಬಿಣ, ಸತು, ವಿಟಮಿನ್ ಡಿ, ವಿಟಮಿನ್ ಬಿ6, ಮತ್ತು ಬಿ12, ಪೊಲಿಕ್ ಆಮ್ಲವನ್ನು ಕೂಡಾ ಪೂರೈಸುತ್ತವೆ. 

ಇತ್ತೀಚಿನ ಅಧ್ಯಯನಗಳ ಪ್ರಕಾರ  ಆಹಾರದಲ್ಲಿನ  ಕೊಲೆಸ್ಟ್ರಾಲ್ ಹೃದ್ರೋಗ,  ಪಾರ್ಶ್ವವಾಯು ಮತ್ತು ರಕ್ತದೊತ್ತಡದಂತಹ ಅಪಾಯವನ್ನುಂಟುಮಾಡುವುದಿಲ್ಲ. ಆದ್ದರಿಂದ ಮೊಟ್ಟೆಗಳನ್ನು ಸೇವಿಸುವುದು ಆರೋಗ್ಯಕ್ಕೆ ಉತ್ತಮವಾಗಿದೆ.

ಒಂದು ಮೊಟ್ಟೆಯಲ್ಲಿ  180ರಿಂದ 300 ಮಿಲಿ ಗ್ರಾಂನಷ್ಟು ಕೊಲೆಸ್ಟ್ರಾಲ್ ಇರುತ್ತದೆ. ಮೊಟ್ಟೆಯ ಹಳದಿ ಭಾಗದಲ್ಲಿ  ಮಾತ್ರ  ಕೊಲೆಸ್ಟ್ರಾಲ್ ಇರುತ್ತದೆ. ಬಿಳಿ ಭಾಗ ಕೊಲೆಸ್ಟ್ರಾಲ್ ಮುಕ್ತವಾಗಿರುತ್ತದೆ. 

ಐಸಿಎಂಆರ್ ಮತ್ತು ಎನ್ ಐಎನ್ ಮಾರ್ಗಸೂಚಿಗಳ ಪ್ರಕಾರ  ದಿನ 300 ಗ್ರಾಂನಷ್ಟು ಕೊಲೆಸ್ಟ್ರಾಲ್ ಸೇವಿಸಬಹುದು ಅನ್ನುವುದಾದರೆ ನಾವು ಪ್ರತಿದಿನ ಒಂದೊಂದು ಮೊಟ್ಟೆ ತಿನ್ನಬಹುದು.ಮೊಟ್ಟೆಗಳಲ್ಲಿ ಹೃದಯ ಸಂಬಂಧಿತ ಕಾಯಿಲೆಗಳಿಗೆ ಕಾರಣವಾಗುವಂತಹ ಅಂಶಗಳು ಹೆಚ್ಚಿನ ಪ್ರಮಾಣದಲ್ಲಿರುತ್ತವೆ ಎಂಬುದು ಸತ್ಯಕ್ಕೆ ದೂರವಾದ ಮಾತಾಗಿದೆ. 

ದಿನಕ್ಕೆ ಎಷ್ಟು ಮೊಟ್ಟೆಗಳನ್ನು ಸೇವಿಸಬೇಕು

ಯುವಕರು ಸಮತೋಲಿತ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿದಿನ ಒಂದಂತೆ ವಾರಕ್ಕೆ ಮೂರರಿಂದ ನಾಲ್ಕು ಮೊಟ್ಟೆಗಳನ್ನು ಸೇವಿಸಬೇಕು. ಮಕ್ಕಳು ಪ್ರತಿದಿನ ಒಂದೊಂದು ಮೊಟ್ಟೆಗಳನ್ನು ಸೇವಿಸಬೇಕು, ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರು ವಾರದಲ್ಲಿ ಮೂರು ಮೊಟ್ಟೆಗಳನ್ನು ತಿನ್ನಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಇದನ್ನೂ ಓದಿ : ದಿನಕ್ಕೆರಡು ಏಲಕ್ಕಿ ತಿಂದ್ರೆ ಲಾಭವೇನು ಗೊತ್ತಾ ?

ಇದನ್ನೂ ಓದಿ : ಮಾನಸಿಕ ಒತ್ತಡಗಳಿಂದ ಹೊರ ಬರಬೇಕಾ? ಹಾಗಾದರೆ ಈ ಟಿಪ್ಸ್‌ ನಿಮಗಾಗಿ…!

ಇದನ್ನೂ ಓದಿ : ಮೊಸರಿನಿಂದ ತ್ವಚೆಯ ಅಂದವನ್ನು ಹೀಗೂ ಹೆಚ್ಚಿಸ ಬಹುದು…!!!

ಇದನ್ನೂ ಓದಿ : ಯೋಗದಿಂದ ಉತ್ತಮ ಆರೋಗ್ಯ ನಿಮ್ಮದಾಗಿಸಿಕೊಳ್ಳಿ

( Do you know how many eggs should be consumed per day? )

Leave A Reply

Your email address will not be published.