ಬೆಳಿಗ್ಗೆ ಬೆಳ್ಳುಳ್ಳಿ ತಿಂದ್ರೆ ಕೊಲೆಸ್ಟ್ರಾಲ್ ಕಂಟ್ರೋಲ್‌ಗೆ ಬರತ್ತಾ? ಇಲ್ಲಿದೆ ಅದಕ್ಕೆ ಉತ್ತರ
Cholesterol Control Remedies: ರಕ್ತ ನಾಳಗಳಲ್ಲಿ ಶೇಖರಣೆಯಾಗುವ ಕೆಟ್ಟ ಕೊಲೆಸ್ಟ್ರಾಲ್ ಹೃದ್ರೋಗಗಳ ಕರೆಗಂಟೆಯಾಗಿದೆ. ದೇಹದಲ್ಲಿನ ಹೆಚ್ಚಿನ ಕೊಲೆಸ್ಟ್ರಾಲ್ ಅನ್ನು ಸಮಯಕ್ಕೆ ಸರಿಯಾಗಿ ನಿಯಂತ್ರಿಸದಿದ್ದರೆ ಅದು ಹೃದಯಾಘಾತದಂತಹ ಮಾರಣಾಂತಿಕ ಸ್ಥಿತಿಗೆ ತಲುಪಬಹುದು.
ಹೆಚ್ಚಿನ ಕೊಲೆಸ್ಟ್ರಾಲ್ ಇರುವ ಜನರು ತಮ್ಮ ಆರೋಗ್ಯದ ಬಗ್ಗೆ ಅತ್ಯಂತ ಜಾಗರೂಕರಾಗಿರಬೇಕು. ಆಹಾರದ ಕ್ರಮವನ್ನು ಪಾಲಿಸಿದರೂ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗದೇ ಚಿಂತಿಗೆ ಕಾರಣವಾಗುವುದೂ ಉಂಟು.
ಔಷಧಿಗಳಲ್ಲಿದೆಯೇ ಆಹಾರದಲ್ಲಿಯೇ ಕೊಲೆಸ್ಟ್ರಾಲ್ ಹಿಡಿತದಲ್ಲಿರುವಂತಾಗಿದ್ದರೆ ಎಂಬ ಯೋಚನೆ ಬಹಳಷ್ಟು ಜನರಿಗೆ ಬರುತ್ತದೆ. ಈ ಯೋಚನಗೆ ಇದೀಗ ಪರಿಹಾರ ಸಿಕ್ಕಿದೆ.
ಸಂಶೋಧನೆಯ ಪ್ರಕಾರ ನಾವು ಅಡುಗೆಯಲ್ಲಿ ಬಳಸುವ ಬೆಳ್ಳುಳ್ಳಿ ಕೊಲೆಸ್ಟ್ರಾಲ್ ಅಪಾಯವನ್ನು ಕಡಿಮೆ ಮಾಡುವ ಸಾಮರ್ಥ್ಯ ಹೊಂದಿದೆ ಎಂಬುದು ತಿಳಿದುಬಂದಿದೆ.
ಹಾಗಾದರೆ ಬೆಳ್ಳುಳ್ಳಿ ಯಾವ ರೀತಿಯಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೋಗಲಾಡಿಸಲು ಸಹಾಯಮಾಡುತ್ತದೆ? ಮತ್ತು ಅದನ್ನು ಸೇವಿಸುವ ಸರಿಯಾದ ವಿಧಾನ ಯಾವುದು? ಎಂದು ತಿಳಿಯೋಣ.
ಬೆಳ್ಳುಳ್ಳಿಯಲ್ಲಿ ಅಡಗಿದೆ ಆರೋಗ್ಯದ ರಹಸ್ಯ
- ಬೆಳ್ಳುಳ್ಳಿಯಲ್ಲಿ ಆಲಿಸಿನ್ ಎಂಬ ಜೈವಿಕ ಸಂಯಕ್ತವಿದೆ. ಅದು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ. ರಕ್ತ ನಾಳಗಳಲ್ಲಿ ಶೇಖರಣೆಯಾಗಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ತೆಗೆದುಹಾಕುತ್ತದೆ.
- ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುವ ಮೂಲಕ ಹೃದಯದ ಆರೋಗ್ಯ ಸುಧಾರಿಸುತ್ತದೆ.
- ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಋತುಮಾನದ ಸಾಮಾನ್ಯ ಕಾಯಿಲೆಗಳ ವಿರುದ್ಧ ಹೋರಡಲು ಸಹಾಯಮಾಡುತ್ತದೆ.
ಬೆಳ್ಳುಳ್ಳಿ ಹೇಗೆ ತಿಂದ್ರೆ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ?
ಬೆಳಿಗ್ಗೆ ಸಿಪ್ಪೆ ಸುಲಿದ ಬೆಳ್ಳುಳ್ಳಿ ಎಸಳನ್ನು ಅಗಿಯುವುದರಿಂದ 15 ರಿಂದ 20 ದಿನಗಳಲ್ಲಿ ಹೆಚ್ಚಿನ ಕೊಲೆಸ್ಟ್ರಾಲ್ ಕಡಿಮೆಯಾಗಲು ಸಹಾಯ ಮಾಡುತ್ತದೆ. ಇನ್ಸ್ಟಿಟ್ಯೂಟ್ ಫಾರ್ ಲಿಪಿಡ್ ಆಂಡ್ ಎಥೆರೋಸ್ಕ್ಲೆರೋಸಿಸ್ ಇಸ್ರೇಲ್ ಈ ವಿಷಯದ ಬಗ್ಗೆ ಅಭಿಪ್ರಾಯವನ್ನು ನೀಡಿದೆ. ಅದರ ಪ್ರಕಾರ ಬೆಳ್ಳುಳ್ಳಿಯಲ್ಲಿರುವ ಆಲಿಸಿನ್ ಯಕೃತ್ತಿನ ಜೀವಕೋಶಗಳ ಮೇಲೆ ರಿಸೆಪ್ಟರ್ಸ್ ಜೊತೆ ಸೇರಿ ಕೆಟ್ಟ ಕೊಲೆಸ್ಟ್ರಾಲ್ ಉತ್ಪಾದನೆಯನ್ನು ತಡೆಯುತ್ತದೆ. ಈ ಪ್ರಕ್ರಿಯೆಯು ಸೆಲ್ಯುಲಾರ್ ಮಟ್ಟದಲ್ಲಿ ಸಂಭವಿಸುತ್ತದೆ ಎಂದು ಅಧ್ಯಯನವು ಕಂಡುಹಿಡಿದಿದೆ.
ಬೆಳ್ಳುಳ್ಳಿ ತಿನ್ನುವ ಸರಿಯಾದ ಮಾರ್ಗ ಯಾವುದು?
ದಿನಕ್ಕೆ ಒಂದು ಅಥವಾ ಎರಡು ಎಸಳು ಹಸಿ ಬೆಳ್ಳುಳ್ಳಿ ತಿನ್ನುವುದು ಸುರಕ್ಷಿತ ಎಂದು ಅಧ್ಯಯನಗಳು ತೋರಿಸುತ್ತವೆ. ಇದನ್ನು ಆಹಾರದೊಂದಿಗೆ ಸೇರಿಸಿಯೂ ತಿನ್ನಬಹುದು. ಇದೇ ವೇಳೆ ಬೆಳ್ಳುಳ್ಳಿಯ ಅತಿಯಾದ ಸೇವನೆಯು ಎದೆಯುರಿ, ಅಜೀರ್ಣ, ಅತಿಸಾರ ಮತ್ತು ದುರ್ವಾಸನೆಯಂತಹ ಅಡ್ಡ ಪರಿಣಾಮಗಳಿಗೆ ಕಾರಣವಾಗಬಹುದು.
ಇದನ್ನೂ ಓದಿ: 30 ದಾಟಿದ ಮಹಿಳೆಯರೇ ಗಮನಿಸಿ: ವರ್ಷಕ್ಕೊಮ್ಮೆ ಈ 7 ಆರೋಗ್ಯ ತಪಾಸಣೆಯನ್ನು ಮಾಡಿಸಿ
ಯಾರು ಎಚ್ಚರವಹಿಸಬೇಕು?
ಬೆಳ್ಳುಳ್ಳಿ ರಕ್ತವನ್ನು ತೆಳುಗೊಳಿಸುತ್ತದೆ. ರಕ್ತಸ್ರಾವದ ಕಾಯಿಲೆಯಿಂದ ಬಳಲುತ್ತಿರುವವರು ಬೆಳ್ಳುಳ್ಳಿ ತಿನ್ನುವಾಗ ಎಚ್ಚರವಹಿಸಬೇಕು. ಇಷ್ಟೇ ಅಲ್ಲದೇ ಬೆಳ್ಳುಳ್ಳಿ ಕೆಲವು ಔಷಧಿಗಳ ಪರಿಣಾಮವನ್ನು ಕಡಿಮೆಮಾಡುತ್ತದೆ. ಆದ್ದರಿಂದ ಆರೋಗ್ಯದಲ್ಲಿ ಸಮಸ್ಯೆ ಇರುವವರು ಬೆಳ್ಳುಳ್ಳಿಯನ್ನು ತಮ್ಮ ಡಯಟ್‌ನಲ್ಲಿ ಸೇರಿಸಿಕೊಳ್ಳುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಮುಖ್ಯ.



