White Hair : ಬಿಳಿಕೂದಲ ಶಾಶ್ವತ ಪರಿಹಾರಕ್ಕೆ ನೆಲ್ಲಿಕಾಯಿ

0
  • ರಕ್ಷಾ ಬಡಾಮನೆ

ಹಿಂದಿನ ಕಾಲದಿಂದಲೂ ಕೂದಲು ಹಾಗೂ ಚರ್ಮದ ಆರೈಕೆಗಾಗಿ ಹಲವಾರು ರೀತಿಯ ನೈಸರ್ಗಿಕ ಸಾಮಗ್ರಿಗಳನ್ನು ಬಳಸುತ್ತಾ ಬರಲಾಗುತ್ತಿದೆ. ನಿಸರ್ಗದತ್ತವಾಗಿರುವ ಕೆಲವೊಂದು ಹಣ್ಣುಗಳು ಹಾಗೂ ಕಾಯಿಗಳು ಕೂದಲು ಹಾಗೂ ತ್ವಚೆಯ ಆರೈಕೆಯಲ್ಲಿ ಫಲಿತಾಂಶವನ್ನು ನೀಡುತ್ತದೆ.

ಈ ನಿಟ್ಟಿನಲ್ಲಿ ನೈಸರ್ಗಿಕವಾಗಿ ದೊರೆಯುವ ಬೆಟ್ಟದ ನೆಲ್ಲಿಕಾಯಿಯು ಎಲ್ಲದಕ್ಕಿಂತಲೂ ಮೊದಲ ಸ್ಥಾನ ದಲ್ಲಿ ಬಂದು ನಿಲ್ಲುತ್ತದೆ. ಅದರಲ್ಲೂ ಕೂದಲಿನ ಆರೈಕೆಯ ವಿಷಯಕ್ಕೆ ಬಂದಾಗ, ಇದು ಕೂದಲ ಬುಡ ಕ್ಕೆ ರಕ್ತದ ಪರಿಚಲನೆಯನ್ನು ಹೆಚ್ಚಿಸಿ, ಕೂದಲಿಗೆ ಆಮ್ಲಜನಕ ಮತ್ತು ಪೋಷಕಾಂಶಗಳು ದೊರೆಯುವಂತೆ ಮಾಡುವುದರಿಂದ ಕೂದಲು ಆರೋಗ್ಯವಂತವಾಗಿ ಬೆಳೆಯುತ್ತದೆ.

ನೆಲ್ಲಿಕಾಯಿ ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಅತೀ ಹೆಚ್ಚು ಬಳಕೆಯಾಗುತ್ತದೆ. ಆರೋಗ್ಯವರ್ಧಕ, ಶಕ್ತಿ ವರ್ಧಕ ಔಷಧಿಯಾಗಿಯೂ ನೆಲ್ಲಿಕಾಯಿ ಪ್ರಸಿದ್ದಿಯನ್ನು ಪಡೆದುಕೊಂಡಿದೆ. ನಮ್ಮ ಕೂದಲು ಸೌಂದರ್ಯ ವನ್ನು ವೃದ್ದಿಸುವಲ್ಲಿ ನೆಲ್ಲಿಕಾಯಿ ಬಹುಮುಖ್ಯ ಪಾತ್ರವನ್ನುವಹಿಸುತ್ತಿದೆ.

ಒತ್ತಡದಲ್ಲಿ ಕಾರ್ಯನಿರ್ವಹಣೆ, ನಿರಂತರ ದುಡಿಮೆ, ಆಹಾರ ಪದ್ಧತಿಯಲ್ಲಿನ ಏರುಪೇರು, ಪೌಷ್ಠಿಕಾಂಶ ಗಳ ಕೊರತೆಯಿಂದಾಗಿ ದೇಹವೇ ನಿಶ್ಯಕ್ತಿಯಿಂದ ಕೂಡಿರುವ ಈ ಕಾಲದಲ್ಲಿ ಕೂದಲನ್ನು ಸಂಪೂರ್ಣವಾಗಿ ಆರೈಕೆ ಮಾಡುವುದಂತೂ ಅತ್ಯಂತ ಪ್ರಯಾಸದ ಕೆಲಸ. ಒಮ್ಮೆ ಕೂದಲ ಸೌಂದರ್ಯ ಹಾಳಾದ್ರೆ ಮತ್ತೆ ನೈಜರೂಪಕ್ಕೆ ತರುವುದು ಕಷ್ಟದ ಕೆಲಸ.

ಹೀಗಾಗಿ ಕಾಂತಿಯುತ ಮತ್ತು ಆರೋಗ್ಯವಂತ ಕೂದಲ ಬೆಳವಣಿಗೆಗೆ ನೆಲ್ಲಿಕಾಯಿಯು ಸಾಂಪ್ರದಾಯಿಕ ಪರಿಹಾರ. ಕೂದಲಿನ ಬೆಳವಣಿಗೆಗೆ ಮುಖ್ಯ ಕಾರಣ ಜೀವಕೋಶಗಳು. ಷ್ಟುಮಾತ್ರವಲ್ಲದೆ ನೆಲ್ಲಿಕಾಯಿಯ ಕೆಲವು ಗೃಹ ಔಷಧಿಯಿಂದ ಕೂದಲ ಬೆಳವಣಿಗೆಯ ಸಮಸ್ಯೆಯನ್ನು ಪರಿಹರಿಸುತ್ತದೆ.

ಅಕಾಲಿಕ ಬಿಳಿಯಾಗುವುದನ್ನು ತಡೆಯುವುದು ಕೆಲವು ನೆಲ್ಲಿಕಾಯಿಗಳನ್ನು ನೀರಿನಲ್ಲಿ ಕೆಲವು ಗಂಟೆಗಳ ಕಾಲ ನೆನೆಸಿದ ಬಳಿಕ ಒಂದು ಚಮಚ ನೀಲಗಿರಿ ಎಣ್ಣೆಯನ್ನು ಹಾಕಿ ಗಾಳಿಯಾಡದ ಗಾಜಿನ ಜಾಡಿಯಲ್ಲಿ ಒಂದು ರಾತ್ರಿ ನೆನೆಸಿಡಬೇಕು. ಬೆಳಿಗ್ಗೆ ಈ ದ್ರಾವಣವನ್ನು ಒಂದು ಮೊಟ್ಟೆ, ಒಂದು ಲಿಂಬೆಯ ರಸ ಹಾಗೂ ಸ್ವಲ್ಪ ಮೊಸರಿನೊಂದಿಗೆ ಮಿಶ್ರ ಮಾಡಿಕೊಂಡು ಕೂದಲಿಗೆ ಹಚ್ಚಿಕೊಂಡು ಒಂದೆರಡು ಗಂಟೆಗಳ ಬಳಿಕ ಸ್ನಾನ ಮಾಡಬೇಕು. ನೆಲ್ಲಿಕಾಯಿಯ ರಸವನ್ನು ಸೇವಿಸುವುದರಿಂದ ಅಥವಾ ಹಸಿಯಾಗಿ ತಿನ್ನುವುದರಿಂದ ಕೂದಲ ಆರೋಗ್ಯ ಹೆಚ್ಚುವುದು ಹಾಗೂ ದೇಹದ ಇನ್ನೂ ಹಲವು ತೊಂದರೆಗಳಿಗೆ ಪರಿಹಾರ ದೊರಕುತ್ತದೆ.

ನೆಲ್ಲಿಕಾಯಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ, ತುಂಡರಿಸಿದ ಹೋಳುಗಳನ್ನು ನೆರಳಿನಲ್ಲಿ ಒಣಗಿಸಿ, ಈ ತುಂಡುಗಳು ಕರಕಲಾಗುವವರೆಗೆ ತೆಂಗಿನೆಣ್ಣೆಯಲ್ಲಿ ಹಾಕಿ ಕುದಿಸಿ. ಈ ಗಾಢಬಣ್ಣದ ಎಣ್ಣೆಯು ಕೂದಲಿನ ನೆರೆತವನ್ನು ತಡೆಗಟ್ಟಲು ಉತ್ತಮ ಔಷಧಿ. ಕೇವಲ ಕೂದಲಿನ ಪೋಷಣೆಗೆ ಮಾತ್ರವಷ್ಟೇ ನೆಲ್ಲಿಕಾಯಿ ಸೀಮಿತವಾಗಿಲ್ಲ.

ನಮ್ಮ ದೇಹದ ರೋಗನಿರೋಧಕ ಶಕ್ತಿಯಂತೆ ಕೆಲಸ ಮಾಡುವ ನೆಲ್ಲಿಕಾಯಿಯನ್ನು ಹಲವು ರೋಗಗಳಿಗೆ ಔಷಧವಾಗಿ ಬಳಸಲಾಗುತ್ತದೆ. ವಿಟಮಿನ್ ‘ಸಿ’ ಕೊರತೆಯಿರುವವರಿಗೆ ನೆಲ್ಲಿಕಾಯಿ ರಾಮಬಾಣ. ನೆಲ್ಲಿ ಕಾಯಿಯಲ್ಲಿ ಹೇರಳ ಪ್ರಮಾಣದಲ್ಲಿ ‘ಸಿ’ ಪೋಷಕಾಂಶವನ್ನು ಹೊಂದಿದ್ದು, ಜೀಟನ್ ಜಿರೋಬೋಸೈಡ್ ಮತ್ತು ನ್ಯೂಕ್ಲಿಯೋಸೈಡ್ ಎಂದು ಗುರುತಿಸಲಾದ ಸೈಟೋಕೈನ್ಪದಾರ್ಥಗಳನ್ನು ದೇಹಕ್ಕೆ ಅತೀ ಅಗತ್ಯವಾಗಿದೆ.

ಒಣಗಿದ ನೆಲ್ಲಿಕಾಯಿ ರಕ್ತಸಾರ, ಅತಿಬೇಧಿ ತಡೆಗಟ್ಟಲು ಸಹಕಾರಿ. ಅಲ್ಲದೇ ಏಕಾಣು ಜೀವನಿರೋಧಕ ವಾಗಿರೋ ನೆಲ್ಲಿಕಾಯಿಯಲ್ಲಿರುವ ಚೊಗರು ಗುಣವು ಸೋಂಕನ್ನು ತಡೆಗಟ್ಟಿ ಆಲ್ಸರ್ ಹುಣ್ಣು ಮಾಗಲು ಸಹಾಯ ಮಾಡುತ್ತದೆ. ಅಲ್ಲದೆ ಬಿಳಿಸೆರಗು, ಮಲಬದ್ಧತೆ, ಮುಂತಾದ ಅನೇಕ ಕಾಯಿಲೆಗಳಿಗೆ ಇದನ್ನು ಪ್ರಭಾವೀ ಔಷಧಿಯಾಗಿ ಬಳಸಲಾಗುತ್ತದೆ.

ನೆಲ್ಲಿಕಾಯಿ ನೆನೆಸಿದ ನೀರಿನಿಂದ ಮುಂಜಾನೆ ಮುಖ ತೊಳೆಯುವುದರಿಂದ ಕಣ್ಣಿನ ದೃಷ್ಟಿ ಸುಧಾರಿಸು ತ್ತದೆ. ನಮ್ಮ ದೇಹವನ್ನು ಅತಿಯಾಗಿ ಕಾಡುವ ಆಸ್ತಮಾ, ಶ್ವಾಸಕೋಶ ಸಂಬಂಧೀ ಕಾಯಿಲೆಗಳು, ಅಜೀರ್ಣ, ಅತೀ ಆಮ್ಲೀಯತೆ, ಅಲ್ಸರ್‌ನಂತಹ ಜೀರ್ಣಕ್ರಿಯೆಗೆ ಸಂಬಂಧಿಸಿದ ಕಾಯಿಲೆಗಳು, ರಕ್ತಹೀನತೆ, ಮಧುಮೇಹ, ರಕ್ತಸ್ರಾವ ಸಮಸ್ಯೆ, ಸ್ತ್ರೀಯರಸಮಸ್ಯೆ, ಕಣ್ಣಿನ ಕಾಯಿಲೆಗಳು ಮತ್ತು ಚರ್ಮ ಸಂಬಂಧಿ ಕಾಯಿಲೆಗಳ ನಿವಾರಣೆಗೆ ನೆಲ್ಲಿಕಾಯಿ ಸಿದ್ದೌಷಧ.

ನೆಲ್ಲಿಕಾಯಿ ತಿನ್ನುವುದರಿಂದ ದೇಹದಲ್ಲಿರುವ ವಿಷಶಕ್ತಿಯನ್ನು ಹೊರಹಾಕಿ ದೇಹದಲ್ಲಿ ನಿರೋಧಕ ಶಕ್ತಿ ಯನ್ನು ತುಂಬುತ್ತದೆ. ಇಷ್ಟು ಮಾತ್ರವಲ್ಲದೆ ನೆಲ್ಲಿಕಾಯಿಯನ್ನು ಉಪ್ಪಿನಕಾಯಿಯಾಗಿಯೂ ಬಳಕೆ ಮಾಡಬಹುದಾಗಿದೆ. ನೆಲ್ಲಿಕಾಯಿಯನ್ನು ಸ್ವಲ್ಪ ನೀರಿನಲ್ಲಿ ಮೆತ್ತಗಾಗುವವರೆಗೆ ಉಪ್ಪು ಹಾಕಿ ಬೇಯಿಸಿ ಬಳಸಬಹುದಾಗಿದೆ.

ಒಟ್ಟಾರೆ ಹಸಿರು ಔಷಧಿಗಳ ರಾಜನೆಂದೇ ಕರೆಯಬಹುದಾದ ನೆಲ್ಲಿಕಾಯಿಯು ನಮ್ಮ ದೇಹದ ರಕ್ಷಣಾ ಪಡೆಯಂತೆ ಕೆಲಸ ಮಾಡುತ್ತದೆ. ಹಾಗಾಗಿ ನೆಲ್ಲಿಕಾಯಿಯ ಸೇವನೆಯಿಂದ ಆರೋಗ್ಯಕರ ದೇಹ ನಿಮ್ಮದಾಗಲಿದೆ.

Leave A Reply

Your email address will not be published.