ರಾಮಾಯಣದ ಫಲಗಳ ಮಹತ್ವ ತಿಳಿದ್ರೆ ಆಶ್ವರ್ಯ ಪಡ್ತೀರಿ !

0
  • ರಕ್ಷಾ ಬಡಾಮನೆ

ಹಣ್ಣುಗಳು ನಮ್ಮ ಆರೋಗ್ಯಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಸಹಕಾರಿ ಯಾಗಿವೆ. ಅನಾರೋಗ್ಯಕ್ಕೆ ತುತ್ತಾದಾಗ ಹಣ್ಣುಗಳನ್ನೇ ನೆಚ್ಚಿಕೊಳ್ಳುತ್ತೇವೆ. ಅದರಲ್ಲೂ ರಾಮಾಯಣದಲ್ಲಿಯೂ ಬಳಕೆ ಮಾಡುತ್ತಿದ್ದ ಹಲವು ಹಣ್ಣು ಗಳಲ್ಲಿ ಔಷಧೀಯ ಗುಣವಿತ್ತು. ಅಂತಹ ಹಣ್ಣುಗಳು ಇಂದಿಗೂ ಬಳಕೆ ಯಲ್ಲಿದೆ. ರಾಮನಿಗೆ ಅತೀ ಪ್ರಿಯವಾಗಿರೋ ರಾಮಫಲ, ಸೀತಾಫಲ, ಲಕ್ಷ್ಮಣ ಫಲ ಹಾಗೂ ಹನುಮಂತ ಫಲಗಳು ಬಹು ಉಪಯೋಗಿ. ಈ ಹಣ್ಣುಗಳು ನಮ್ಮ ಆರೋಗ್ಯದ ವೃದ್ದಿಗೆ ಹೇಗೆ ಸಹಕಾರಿ ಅಂತಾ ತಿಳಿದು ಕೊಳ್ಳೋಣಾ..   ಸೀತಾಫಲ : ಚಿಕ್ಕ ಚಿಕ್ಕ ಎಸಳುಗಳು ಒಂದಾಗಿ ಹಣ್ಣಾಗಿ ಮಾರ್ಪಾಡಾಗಿರು ವುದೇ ಸೀತಾಫಲ. ತುಂಬಾ ಸಿಹಿಯಾಗಿಯೂ ಇದ್ದು ಈ ಹಣ್ಣು ಹಸಿರು ಮಿಶ್ರಿತ ಹಳದಿ ಬಣ್ಣದಲ್ಲಿರುತ್ತದೆ.       
ರಾಮಫಲ : ಸೀತಾಫಲದಂತೆ ಸ್ಪಷ್ಟವಾದ ಕಣ್ಣುಗಳ ಕವಚವಿಲ್ಲದಿದ್ದರೂ ಕಣ್ಣುಗಳ ರಚನೆಯ ಗೆರೆಯನ್ನು ಹೊಂದಿರುವ ರಾಮಫಲಕ್ಕೆ ನಸುಗೆಂಪು ಸಿಪ್ಪೆ ಇರುತ್ತದೆ. ತಿರುಳು ಬೆಣ್ಣೆಯಷ್ಟು ಮೃದುವಾಗಿರುತ್ತದೆ.
ಲಕ್ಷ್ಮಣ ಫಲ : ಈ ಹಣ್ಣುಗಳು ರಾಮಫಲವನ್ನೇ ಹೋಲುತ್ತದೆ. ಮೇಲ್ಮೈ ನಲ್ಲಿ ಸಣ್ಣ ಸಣ್ಣ ಚುಕ್ಕೆ ಮುಳ್ಳುಗಳನ್ನು ಹೊಂದಿರುತ್ತದೆ. ತಿರುಳು ಬೆಣ್ಣೆ ಯಂತೆ ಮೃದುವಾಗಿರುತ್ತದೆ. ಇದನ್ನು miracle fruit for cancer ಅಂತಾನೆ ಕರೆಯುತ್ತಾರೆ.ಹನುಮಂತ ಫಲ : ಲಕ್ಷ್ಮಣ ಫಲವನ್ನು ಬಹುಮಟ್ಟಿಗೆ ಹೋಲುವ ಹನುಮಂತ ಫಲದಲ್ಲಿ ಸಣ್ಣ ಸಣ್ಣ ಚುಕ್ಕೆಗಳೇ ಉದ್ದನೆಯ ಮೃದು ಮುಳ್ಳು ಗಳಾಗಿದ್ದು ಒಳಗೆ ಬೆಣ್ಣೆಯಂತಹ ತಿರುಗಳನ್ನು ಹೊಂದಿರುತ್ತದೆ.

ಸೀತಾಫಲ, ರಾಮಫಲ, ಲಕ್ಷ್ಮಣಫಲ ಹಾಗೂ ಹನುಮಂತ ಫಲ ಹಣ್ಣುಗಳು ಒಂದೇ ಗುಂಪಿಗೆ ಸೇರಿದ್ದು, ಒಂದೇ ರೀತಿಯ ರೋಗ ನಿರೋಧಕ ಜೀವಸತ್ವ ಗಳನ್ನು ಹೊಂದಿದ್ದು ಸೋಂಕು ನಿವಾರಕ ಔಷಧೀಯ ಗುಣಗಳನ್ನು ಹೊಂದಿದೆ. ಇವುಗಳಲ್ಲಿ ಪೊಟ್ಯಾಶೀಯಂ, ಮ್ಯಾಗ್ನೇಶಿಯಂ, ಐರನ್, ಕ್ಯಾಲ್ಶಿಯಂ, ಸೋಡಿಯಂ, ವಿಟಮಿನ್ ಸಿ, ವಿಟಮಿನ್ ಡಿ, ವಿಟಮಿನ್ ಬಿ6 ಮುಂತಾದ ಜೀವದ್ರವಗಳು ಸಮೃದ್ದವಾಗಿರುವುದ ರಿಂದಲೇ ನಮ್ಮ ಆರೋಗ್ಯವನ್ನು ವೃದ್ದಿಸಲು ಸಹಕಾರಿಯಾಗಿದೆ.

ಉಪಯೋಗಗಳು :
ರಾಮಫಲ, ಸೀತಾಫಲ, ಲಕ್ಷ್ಮಣಫಲ ಹಾಗೂ ಹನುಮಂತ ಫಲಗಳಲ್ಲಿ ಗ್ಲೂಕೋಸ್ ಅಂಶಗಳು ಕಡಿಮೆಯಿರುವುದರಿಂದ ಸಕ್ಕರೆ ಖಾಯಿಲೆಗೆ ರಾಮಬಾಣದಂತೆ ಕೆಲಸ ಮಾಡುತ್ತದೆ.
ಕ್ಯಾನ್ಸರ್ ರೋಗದ ವಿರುದ್ದ ಹೋರಾಡುವ ಶಕ್ತಿಯನ್ನು ಹೊಂದಿದ್ದು. ಕ್ಯಾನ್ಸರ್ ಗಳನ್ನು ಸಂಹರಿಸುವ ಶಕ್ತಿಯನ್ನು ಈ ಹಣ್ಣುಗಳು ಹೊಂದಿವೆ. ಅದರಲ್ಲೂ ಲಕ್ಷ್ಮಣ ಫಲ ಕ್ಯಾನ್ಸರ್ ರೋಗಿಗಳ ಪಾಲಿಗೆ ಪವಾಡವನ್ನೇ ಸೃಷ್ಟಿಸುತ್ತಿದೆ. ಕ್ಯಾನ್ಸರ್ ರೋಗಿಗಳು ಈ ಹಣ್ಣನ್ನು ತಿನ್ನುವುದರಿಂದ ಕ್ಯಾನ್ಸರ್ ಬಹುಬೇಗ ಗುಣವಾಗುತ್ತೆ ಅನ್ನುತ್ತಿದೆ ಆಯುರ್ವೇದ.
ಇನ್ನು ಹಲವರನ್ನು ಬಹುವಾಗಿ ಕಾಡುವ ಟಿಬಿ, ಏಡ್ಸ್ ಗಳಿಗೂ ಈ ಹಣ್ಣು ಗಳಿಂದ ಉತ್ತಮ ಚಿಕಿತ್ಸೆಯನ್ನು ಪಡೆಯಬಹುದಾಗಿದೆ. ಕಿಮೋ ಥೆರಪಿ ಗಳಿಗಿಂತಲೂ ಈ ಹಣ್ಣುಗಳು ಹೆಚ್ಚು ಪರಿಣಾಮಕಾರಿಯಾಗಿದ್ದು ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ಕಾಪಾಡುತ್ತದೆ.
ಇನ್ನು ರಕ್ತದತ್ತೊಡವನ್ನು ನಿವಾರಿಸಿ ಹೃದಯ ಸಂಬಂಧಿ ಕಾಯಿಲೆಗಳನ್ನು ಕಡಿಮೆ ಮಾಡುತ್ತದೆ. ಈ ಹಣ್ಣುಗಳು ದುರ್ಬಲ ಸಂಧುಗಳಿಗೆ ಶಕ್ತಿಯುತ ವಾಗಿದ್ದು, ನಿಶಕ್ತಿಯ ಸ್ನಾಯುಗಳಿಗೆ ನವಚೈತನ್ಯವನ್ನು ನೀಡುತ್ತದೆ.ಕಾಲಿನ ಪಾದಗಳು ಒಡೆಯದಂತೆ ತಡೆಯುತ್ತದೆ. ಜೀರ್ಣ ಶಕ್ತಿಯನ್ನು ಹೆಚ್ಚಿಸಿ ಮಲಬದ್ದತೆಯನ್ನು ಹೋಗಲಾಡಿಸಿ ಒಳ್ಳೆಯ ನಿದ್ದೆಗೆ ಕಾರಣ ವಾಗುತ್ತದೆ. ಇವುಗಳ ಸಿಪ್ಪೆಯನ್ನು ಪುಡಿ ಮಾಡಿ ಬಳಕೆ ಮಾಡುವುದರಿಂದ ದಂತಕ್ಷಯ, ಒಸಡುನೋವು, ಬಾಯಿಹುಣ್ಣುಗಳ ನಿವಾರಣೆಗೆ ಸಹಕಾರಿ ಯಾಗಿದೆ.
ಗರ್ಭವತಿಯಾಗಿರುವ ಹೆಣ್ಣು ಮಕ್ಕಳಿಗೆ ಈ ಹಣ್ಣುಗಳು ಬಹು ಉಪಯೋಗಿಯಾಗಿದ್ದು, ಬ್ರೂಣದ ಬೆಳವಣಿಗೆಗೆ ಸಹಕಾರಿಯಾಗಿದೆ. ಅಲ್ಲದೇ ರಕ್ತಹೀನತೆಯಿಂದ ಬಳಲುತ್ತಿರುವರು ಈ ಹಣ್ಣುಗಳನ್ನು ಬಳಕೆ ಮಾಡುವುದರಿಂದ ರಕ್ತಹೀನತೆಗೆ ರಾಮಬಾಣದಂತೆ ಕೆಲಸ ಮಾಡುತ್ತದೆ.

Leave A Reply

Your email address will not be published.