International Epilepsy Day : ಅಂತರಾಷ್ಟ್ರೀಯ ಅಪಸ್ಮಾರ ದಿನ : ಇದು ಮಾನಸಿಕ ಕಾಯಿಲೆ ಅಲ್ಲ; ಮೆದುಳಿನ ಅಸ್ವಸ್ಥತೆ

ಅಪಸ್ಮಾರ ಅಥವಾ ಮೂರ್ಛೆ ರೋಗ (Epilepsy) ಇದು ಒಂದು ಗಂಭೀರ ಸಮಸ್ಯೆಯಾಗಿದೆ. ಇದು ನರವೈಜ್ಞಾನಿಕ ರೋಗಗಳಲ್ಲಿ ಒಂದಾಗಿದೆ. ಕೆಲವರು ಇದನ್ನು ಶಾಪ ಎಂದು ನಂಬುತ್ತಾರೆ, ಮೂಢನಂಬಿಕೆಗೆ ಅಂಟಿಕೊಂಡು ರೋಗಿಗೆ ಸರಿಯಾದ ಚಿಕಿತ್ಸೆ ಕೊಡಿಸದೇ ಇದರಿಂದ ಬಳಲುವಂತೆ ಮಾಡಿದ್ದಾರೆ. ಸರಿಯಾದ ಸಮಯದಲ್ಲಿ ಅಗತ್ಯ ಚಿಕಿತ್ಸೆ ಮತ್ತು ಮುನ್ನೆಚ್ಚರಿಕೆ ಅನುಸರಿಸದ್ದಿದ್ದರೆ ಅಪಸ್ಮಾರವು ಜೀವಹಾನಿಯನ್ನುಂಟು ಮಾಡುತ್ತದೆ. ತಜ್ಞರ ಪ್ರಕಾರ ಪ್ರತಿ 1000 ಜನರಲ್ಲಿ 14 ಜನರಿಗೆ ಈ ಸಮಸ್ಯೆ ಇದೆ. ಇದರ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಫೆಬ್ರವರಿ ಎರಡನೇ ಸೋಮವಾರವನ್ನು ವಿಶ್ವ ಮೂರ್ಛೆ ರೋಗ ದಿನವನ್ನಾಗಿ (International Epilepsy Day) ಆಚರಿಸಲಾಗುತ್ತದೆ. ಪ್ರಪಂಚದ 130 ದೇಶಗಳು ಈ ದಿನವನ್ನು ಮೂರ್ಛೆರೋಗದ ಗಂಭೀರ ಸಮಸ್ಯೆಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಆಚರಿಸುತ್ತವೆ. ಈ ವರ್ಷ, ಅಪಸ್ಮಾರ (ಎಪಿಲೆಪ್ಸಿ) ದಿನವನ್ನು ಫೆಬ್ರವರಿ 13, ಸೋಮವಾರದಂದು ಆಚರಿಸಲಾಗುತ್ತಿದೆ.

ಅಪಸ್ಮಾರ ಎಂದರೇನು ಮತ್ತು ಇದು ಹೇಗೆ ಸಂಭಿಸುತ್ತದೆ?

ಅಪಸ್ಮಾರ ಒಂದು ರೋಗವಲ್ಲ, ಆದರೆ ಇದು ನರವೈಜ್ಞಾನಿಕ (ನ್ಯೂರಾಲಾಜಿಕಲ್‌) ಅಸ್ವಸ್ಥತೆ. ಅಪಸ್ಮಾರ ಸಂಭವಿಸಲು ಅನೇಕ ಕಾರಣಗಳಿವೆ. ಕೆಲವು ಇದನ್ನು ಪ್ರಚೋದಿಸುತ್ತವೆ. ಈ ರೋಗಕ್ಕೆ ವಂಶಪಾರಂಪರ್ಯವೇ ದೊಡ್ಡ ಕಾರಣ. ಇದರ ಜೊತೆಗೆ ಈ ಕೆಳಗಿನ ಕಾರಣಗಳು ಅಪಸ್ಮಾರ್ ಅಥವಾ ಮೂರ್ಛೆರೋಗವನ್ನುಂಟು ಮಾಡುತ್ತದೆ.‌

  • ತಲೆಗೆಬಿದ್ದ ಬಲವಾದ ಪೆಟ್ಟು
  • ಮೆದುಳಿನ ಗೆಡ್ಡೆ
  • ಸ್ಟ್ರೋಕ್
  • ಆಲ್ಝೈಮರ್ ಅಥವಾ ಬುದ್ಧಿಮಾಂದ್ಯತೆಯಂತಹ ಮಾನಸಿಕ ಅಸ್ವಸ್ಥತೆಯನ್ನು ಹೊಂದಿರುವುದು
  • ಪಾರ್ಶ್ವವಾಯು
  • ಮೆನಿಂಜೈಟಿಸ್, ಏಡ್ಸ್ ಅಥವಾ ವೈರಲ್ ಎನ್ಸೆಫಾಲಿಟಿಸ್ನಂತಹ ಸಾಂಕ್ರಾಮಿಕ ರೋಗಗಳು.
  • ಗರ್ಭಾವಸ್ಥೆಯಲ್ಲಿ ಭ್ರೂಣಕ್ಕೆ ಆಘಾತ
  • ಗರ್ಭಾವಸ್ಥೆಯಲ್ಲಿ ತಾಯಿಗೆ ಉಂಟಾದ ಸೋಂಕು
  • ಗರ್ಭಾವಸ್ಥೆಯಲ್ಲಿ ಪೋಷಣೆಯ ಕೊರತೆ ಅಥವಾ ಆಮ್ಲಜನಕದ ಕೊರತೆ

ಅಪಸ್ಮಾರವನ್ನು ಪ್ರಚೋದಿಸುವ ಅಂಶಗಳು ಯಾವವು?

ನಿದ್ರೆಯ ಕೊರತೆ
ತುಂಬಾ ಜ್ವರ
ಪ್ರಕಾಶಮಾನವಾದ ದೀಪಗಳು
ಈಜು
ಮದ್ಯ

ಇದನ್ನೂ ಓದಿ : Herbs good for arthritis : ಈ 5 ಗಿಡಮೂಲಿಕೆಗಳು ಸಂಧಿವಾತ ನೋವಿಗೆ ರಾಮಬಾಣ

ಯಾವ ವಯಸ್ಸಿನಲ್ಲಿ ಅಪಸ್ಮಾರ ಉಂಟಾಗುತ್ತದೆ?
ಸಾಮಾನ್ಯವಾಗಿ ಅಪಸ್ಮಾರ ರೋಗವು ಬಾಲ್ಯದಲ್ಲಿ ಕಾಣಿಸಿಕೊಳ್ಳುತ್ತದೆ. ಆದರೆ, ಕೆಲವು ಸಂದರ್ಭಗಳಲ್ಲಿ ಪ್ರೌಢಾವಸ್ಥೆ ಮತ್ತು ಅದರ ನಂತರದಲ್ಲೂ ಕಾಣಿಸಿಕೊಳ್ಳುತ್ತದೆ. ಮಕ್ಕಳಲ್ಲಿ ಹೆಚ್ಚಿನದಾಗಿ ಈ ರೋಗವು ಜ್ವರದಿಂದ ಪ್ರಚೋದಿಸಲ್ಪಡುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಈ ರೋಗವು ಹೆಚ್ಚಾಗಿ ಕಂಡುಬರುತ್ತದೆ. ಇದಕ್ಕೆ ಕಾರಣ ಅಪೌಷ್ಟಿಕತೆ ಮತ್ತು ರೋಗದ ಬಗ್ಗೆ ಸರಿಯಾದ ಮಾಹಿತಿಯ ಕೊರತೆ.

ಅಪಸ್ಮಾರಕ್ಕೆ ಚಿಕಿತ್ಸೆ ಏನು?
ಯಾರಿಗಾದರೂ ಆನುವಂಶಿಕವಾಗಿ ಅಥವಾ ಇನ್ನಾವುದೇ ಕಾರಣದಿಂದ ಅಪಸ್ಮಾರದ ಸಮಸ್ಯೆ ಇದ್ದರೆ, ಅಂತಹವರಿಗೆ ಔಷಧಿಗಳ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಆದರೆ ಸರಿಯಾದ ಜೀವನಶೈಲಿ ಮತ್ತು ಕೆಲವು ಅಂಶಗಳನ್ನು ಕಾಳಜಿ ವಹಿಸದಿದ್ದರೆ, ನಂತರದ ದಿನಗಳಲ್ಲಿ ಈ ರೋಗವು ಮತ್ತೆ ಪ್ರಚೋದಿಸಬಹುದು. ಇದಲ್ಲದೇ, ಮಿದುಳಿನ ಗಡ್ಡೆಗಳಿಂದ ಉಂಟಾಗುವ ಅಪಸ್ಮಾರಕ್ಕೆ ಚಿಕಿತ್ಸೆ ಭಿನ್ನವಾಗಿದ್ದು, ದೀರ್ಘಕಾಲದ ಚಿಕಿತ್ಸೆಯ ಅಗತ್ಯವಿರುತ್ತದೆ. ಸರಿಯಾದ ಸಮಯದಲ್ಲಿ ರೋಗನಿರ್ಣಯ ಮತ್ತು ಸರಿಯಾದ ಚಿಕಿತ್ಸೆ ನೀಡಿದರೆ, 60 ರಿಂದ 70 ರಷ್ಟು ರೋಗಿಗಳಲ್ಲಿ ಮೂರ್ಛೆ ರೋಗವನ್ನು ಸಂಪೂರ್ಣವಾಗಿ ನಿಯಂತ್ರಿಸಬಹುದು ಎಂದು ತಜ್ಞ ವೈದ್ಯರು ಹೇಳುತ್ತಾರೆ.

ಇದನ್ನೂ ಓದಿ : Weight loss tips : ನಿಮ್ಮ ದೇಹದ ತೂಕ ಇಳಿಸಲು ಈ ಮೂರು ಆಹಾರದಿಂದ ದೂರವಿರಿ

(ಈ ಲೇಖನದಲ್ಲಿ ಉಲ್ಲೇಖಿಸಲಾದ ವಿಷಯ ಮತ್ತು ವಿಧಾನಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ಯಾವುದೇ ಚಿಕಿತ್ಸೆ/ಔಷಧಿ/ಆಹಾರ ಮತ್ತು ಸಲಹೆಯನ್ನು ಅಳವಡಿಸಿಕೊಳ್ಳುವ ಮೊದಲು, ದಯವಿಟ್ಟು ತಜ್ಞ ವೈದ್ಯರನ್ನು ಸಂಪರ್ಕಿಸಿ.)

(International Epilepsy Day. How does it affect mental health, and what are the cause and treatments?)

Comments are closed.