ಬೆಂಡೆಕಾಯಿ ನೆನೆಸಿಟ್ಟ ನೀರು ಜೀವಾಮೃತ !

0
  • ರಕ್ಷಾ ಬಡಾಮನೆ

ವರ್ಷದ ಎಲ್ಲಾ ಋತುವಿನಲ್ಲಿಯೂ ಲಭ್ಯವಿರೋ ಬೆಂಡೆಕಾಯಿ ಸೇವನೆ ಹೆಚ್ಚು ಆರೋಗ್ಯಕರ. ಲೇಡಿಸ್ ಪಿಂಗರ್ ಅಂತಾ ಕರೆಯಲಾಗೋ ಚೆಂಡೆ ಕಾಯಿಯನ್ನು ಪದಾರ್ಥದ ರೂಪದಲ್ಲಿ ಸೇವಿಸುತ್ತೇವೆ. ರುಚಿಕರ ವಾಗಿರೋ ಚೆಂಡೆ ಕಾಯಿ ಅಂದ್ರೆ ಬಹುತೇಕರಿಗೆ ಇಷ್ಟ. ಆದ್ರೆ ಈ ಬೆಂಡೆಕಾಯಿ ನಮ್ಮ ಆರೋಗ್ಯಕ್ಕೆ ಎಷ್ಟು ಉತ್ತಮ ಅನ್ನೋದನ್ನು ತಿಳಿದುಕೊಳ್ಳೋಣ.

ಬೆಂಡೆಕಾಯಿಯಲ್ಲಿ ನಾರಿನಾಂಶ, ಸತು, ಕ್ಯಾಲ್ಸಿಯಂ, ರಿಬೊಫ್ಲೆವಿನ್, ಫಾಲಿಕ್ ಆ್ಯಸಿಡ್, ವಿಟಮಿನ್ ಸಿ, ವಿಟಮಿನ್ ಬಿ6 ಮತ್ತು ಎ, ಥೈಮಿನ್, ಮ್ಯಾಗ್ನಿಶಿಯಂ ಸೇರಿದಂತೆ ಹಲವಾರು ಪೋಷಕಾಂಶಗಳಿವೆ. ಅದರಲ್ಲೂ ಗಾಜಿನ ಲೋಟವೊಂದರಲ್ಲಿ ಬೆಂಡೆಕಾಯಿಯನ್ನು ರಾತ್ರಿ ನೆನೆಸಿಟ್ಟ ಬೆಂಡೆಕಾಯಿಯ ನೀರನ್ನು ಮುಂಜಾನೆ ಎದ್ದು ಕುಡಿದ್ರೆ ದೇಹ ದಲ್ಲಿ ಚಮತ್ಕಾರವೇ ನಡೆಯುತ್ತದೆ..

ನೆನೆಸಿಟ್ಟ ಬೆಂಡೆಕಾಯಿಯ ನೀರನ್ನು ಸೇವನೆ ಮಾಡುವುದರಿಂದ ಕಿಡ್ನಿ ಸಮಸ್ಯೆ, ಸಕ್ಕರೆ ಕಾಯಿಲೆ ಸಮಸ್ಯೆ, ಕೊಲೆಸ್ಟ್ರಾಲ್ ಸಮಸ್ಯೆ ಮತ್ತು ಅಸ್ತಮಾವನ್ನು ನಿವಾರಣೆಯಾಗುತ್ತದೆ ಎಂದು ಹೇಳಲಾಗುತ್ತಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಬೆಂಡೆಕಾಯಿ ನೀರು ಕುಡಿಯುವುದರಿಂದ ದೇಹ ತೂಕವನ್ನು ಇಳಿಸ ಬಹುದು. ದೇಹದಲ್ಲಿನ ತ್ಯಾಜ್ಯವನ್ನು ಹೊರಹಾಕುವ ಶಕ್ತಿ ಬೆಂಡೆಕಾಯಿ ಯಲ್ಲಿದೆ. ಹಾಗೆಯೇ ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸು ತ್ತದೆ. ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸಲು ಕೂಡ ಬೆಂಡೆಕಾಯಿ ನೀರು ಕುಡಿಯುವುದು ಉತ್ತಮ. ಇದರಿಂದ ದೇಹದ ಉಷ್ಣತೆ ಸಮತೋಲನದಿಂದ ಕೂಡಿರುತ್ತದೆ.

ರಾತ್ರಿ ಮಲಗುವ ವೇಳೆಯಲ್ಲಿ ಒಂದು ಗಾಜು ನೀರಿಗೆ ಎರಡು ಅಥವಾ ಮೂರು ಬೆಂಡೆಕಾಯಿಗಳನ್ನು ಕತ್ತರಿಸಿ ನೀರಿನಲ್ಲಿ ನೆನೆ ಹಾಕಬೇಕು. ಬೆಳಗ್ಗೆ ಎದ್ದ ಕೂಡಲೇ ಬೆಂಡೆಕಾಯಿಯ ತುಂಡುಗಳನ್ನು ಕತ್ತರಿಸಿ ಗಾಜನ ಲೋಟದಲ್ಲಿರುವ ನೀರಿನಲ್ಲಿ ನೆನೆ ಹಾಕಬೇಕು. ಬೆಳಗೆದ್ದು ಬೆಂಡೆಕಾಯಿಯ ಪೀಸ್ ಗಳನ್ನು ಹೊರಗೆ ಎಸೆದು ನೀರನ್ನು ಕುಡಿಯುವುದರಿಂದ ದೇಹದಲ್ಲಿರುವ ಬೊಬ್ಜನ್ನು ಕರಗಿಸಲು ಸಹಕಾರಿಯಾಗಿದೆ.


ಡಯಾಬಿಟಿಸ್ ಇರುವವರಿಗೆ ಮತ್ತು ಸಕ್ಕರೆ ಮಟ್ಟವನ್ನು ನಿಯಂತ್ರಿ ಸಲು ಬೆಂಡೆಕಾಯಿ ನೀರನ್ನು ಕುಡಿಯುವುದು ಒಳ್ಳೆದು. ಬೆಂಡೆಕಾಯಿ ನೆನೆಸಿಟ್ಟ ನೀರನ್ನು ನಿಯಮಿತವಾಗಿ ಕುಡಿಯುವುದರಿಂದ ದೃಷ್ಟಿ ಸಮಸ್ಯೆಗೆ ಪರಿಹಾರ ಕಾಣಬಹುದು. ಹಾಗೆಯೇ ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ಹೆಚ್ಚಿಸುತ್ತದೆ.

ಬೆಂಡೆಕಾಯಿಯ ಸೇವನೆ ನೀರನ್ನು ಸೇವೆಸುವುದರ ಬದಲಾಗಿ ಸುಲಭ ವಾಗಿ ಹೊಟ್ಟೆ ಮತ್ತು ಕರುಳು ಶುದ್ಧವಾಗುತ್ತದೆ. ಅಸಿಡಿಟಿ, ಅನಿಲ ಮತ್ತು ಮಲಬದ್ಧತೆ ಸಮಸ್ಯೆ ದೂರವಾಗುತ್ತವೆ. ಫೈಬರ್ ಅಂಶ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ.


ಬೆಂಡೆಕಾಯಿ ನೆನೆಸಿದ ನೀರನ್ನು ಕುಡಿಯುವುದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ. ರಕ್ತದೊತ್ತಡ ಕಡಿಮೆಯಾಗುತ್ತದೆ. ಹೃದಯದ ಆರೋಗ್ಯವನ್ನು ಕಾಪಾಡಲು ಮತ್ತು ಆರೋಗ್ಯಕರವಾಗಿರಲು ಪ್ರತಿದಿನ ಬೆಂಡೆಕಾಯಿ ನೆನೆಸಿಟ್ಟ ನೀರು ಕುಡಿಯುವುದು ಉತ್ತಮ.

Leave A Reply

Your email address will not be published.