Loss Of Appetite : ಕಡಿಮೆ ಹಸಿವಾಗಲು ಕಾರಣ ಗೊತ್ತಾ; ಅದಕ್ಕೆ ಪರಿಹಾರ ಇಲ್ಲಿದೆ ಓದಿ…

ನಮ್ಮ ದೇಹಕ್ಕೆ ಶಕ್ತಿ (Energy) ಯನ್ನು ಕೊಡುವುದು ಆಹಾರ (Food) . ಅದು ನಾವು ಆರೋಗ್ಯವಂತ ರಾಗಿರಲು ಮತ್ತು ಕಾರ್ಯಶೀಲರಾಗಿರಲು ಅವಶ್ಯಕವಾಗಿದೆ. ಹಸಿವಾಗದೇ (Loss Of Appetite) ಇರಲು ಅನೇಕ ಕಾರಣಗಳಿವೆ. ಯಾವಾಗಲಾದರೂ ಒಮ್ಮೆ ಹೀಗೆ ಎನಿಸಿದರೆ ತೊಂದರೆಯಿಲ್ಲ. ಆದರೆ ನಿರಂತರವಾಗಿ ಕಡಿಮೆ ಹಸಿವಾಗುವುದು ಅನಾರೋಗ್ಯಕ್ಕೆ ಕಾರಣವಾಗಬಹುದು. ದೇಹಕ್ಕೆ ಆಹಾರದ ಅವಶ್ಯಕತೆಯಿದ್ದಾಗಲೂ ಹಸಿವೆನಿಸದೇ ಇದ್ದರೆ ಆಗ ಖಂಡಿತ ಅದು ಯಾವುದೋ ಅನಾರೋಗ್ಯದ ಸಂಕೇತವಾಗಿರುತ್ತದೆ. ಸ್ಟೆಡ್‌ಫಾಸ್ಟ್ ನ್ಯೂಟ್ರಿಷನ್‌ನ ಸಂಸ್ಥಾಪಕ ಅಮನ್ ಪುರಿ ಅವರು ಹಸಿವಾಗದಿರಲು ಈ 5 ಕಾರಣಗಳನ್ನು ಹೇಳಿದ್ದಾರೆ.

ಕಡಿಮೆ ಹಸಿವಾಗಲು 5 ಕಾರಣಗಳು :
ಒತ್ತಡ :
ಅತಿಯಾದ ಒತ್ತಡವಾದಾಗ ನರಮಂಡಲು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುವ ಹಾರ್ಮೋನ್‌ಗಳನ್ನು ಬಿಡುಗಡೆ ಮಾಡುತ್ತದೆ. ಇದು ಹಸಿವಿನ ಮೇಲೆ ಪರಿಣಾಮ ಬೀರುತ್ತದೆ. ದೀರ್ಘಕಾಲದ ಆತಂಕ ಮತ್ತು ಖಿನ್ನತೆಯಿಂದ ವಾಕರಿಕೆಯ ಅನುಭವಾಗುತ್ತದೆ. ‌

ಔಷಧಗಳು :
ರೇಡಿಯೊಥೆರಪಿ, ಕಿಮೊಥೆರಪಿ ಮತ್ತು ಪೆರಿಟೋನಿಯಲ್ ಡಯಾಲಿಸಿಸ್‌ನಂತಹ ಚಿಕಿತ್ಸೆಗಳಲ್ಲಿ ಉಪಯೋಗಿಸುವ ಆಂಟಿಬಯಾಟಿಕ್‌, ಆಂಟಿಹೈಪರ್ಟೆನ್ಸಿವ್‌ಗಳು, ಮೂತ್ರವರ್ಧಕಗಳು ಮತ್ತು ಸೆಡೆಟಿವ್‌ನಂತಹ ಔಷಧಿಗಳು ಹಸಿವನ್ನು ಕಡಿಮೆ ಮಾಡಬಹುದು.

ವಯಸ್ಸು :
ಹಸಿವಾಗದಿರಲು ವಯಸ್ಸು ಒಂದು ಪ್ರಮುಖ ಕಾರಣವಾಗಿದೆ. ವಯಸ್ಸಾದಂತೆ ಹಾರ್ಮೋನ್‌ಗಳ ಉತ್ಪತ್ತಿ ಕಡಿಮೆಯಾಗುತ್ತದೆ. ಇದು ಚಯಾಪಚಯ ಕ್ರಿಯೆಯನ್ನು ನಿಧಾನಗೊಳಿಸುತ್ತದೆ.

ಗರ್ಭಾವಸ್ಥೆ :
ಗರ್ಭಾವಸ್ಥೆಯಲ್ಲಿ ಮಹಿಳೆಯರಲ್ಲಿ ಅನೇಕ ಹಾರ್ಮೋನ್ ಬದಲಾವಣೆಗಳಾಗುತ್ತವೆ. ಇದು ಕಡಿಮೆ ಹಸಿವಿಗೆ ಕಾರಣವಾಗುತ್ತದೆ. ಗರ್ಭಾವಸ್ಥೆಯಲ್ಲಿ ಬೆಳಗಿನ ಬೇನೆ, ವಾಕರಿಕೆ ಮತ್ತು ಎದೆಯುರಿಗಳು ಕಡಿಮೆ ಹಸಿವಾಗಲು ಕಾರಣವಾಗುತ್ತವೆ.

ಸೋಂಕು ಮತ್ತು ದೀರ್ಘಕಾಲದ ಅನಾರೋಗ್ಯ :
ಶೀತ, ಜ್ವರ, ಕೆಮ್ಮು ಮತ್ತು ವೈರಲ್‌ ಸೋಂಕು ಗಳು ಹಸಿವಿನ ಮೇಲೆ ಪರಿಣಾಮ ಬೀರುತ್ತದೆ. ಉಸಿರಾಟದ ತೊಂದರೆ ಮತ್ತು ಸೈನಸ್‌ ಇವು ಸಹ ಕಡಿಮೆ ಹಸಿವಾಗಲು ಕಾರಣವಾಗಿದೆ.

ಹಸಿವನ್ನು ಹೆಚ್ಚಿಸುವ 5 ಸುಲಭ ಮಾರ್ಗಗಳು :

ಒಬ್ಬರೇ ಕುಳಿತು ಊಟಮಾಡುವುದನ್ನು ಬಿಡಿ :
ಒಂಟಿಯಾಗಿ ಕುಳಿತು ತಿನ್ನುವ ಬದಲಿಗೆ ಕುಟುಂಬ ಮತ್ತು ಸ್ನೇಹತರೊಂದಿಗೆ ಊಟ ಮಾಡಿ. ಜೊತೆಗೆ ಬೇರೆ ಬೇರೆ ರುಚಿಯ ಆಹಾರಗಳನ್ನು ಸೇವಿಸಿ.

ಪೌಷ್ಟಿಕಾಂಶ ಭರಿತ ಆಹಾರ ಸೇವಿಸಿ:
ಕಡಿಮೆ ಹಸಿವಿನಿಂದ ಬಳಲುತ್ತಿರುವವರು ಆವಕಾಡೊ ಸಲಾಡ್‌, ಒಣ ಬೀಜಗಳು ಮತ್ತು ಹಣ್ಣು ಮತ್ತು ಕ್ಯಾಲೋರಿ ಹೆಚ್ಚಿರುವ ಆಹಾರಳನ್ನು ತಿನ್ನುವುದರ ಕಡೆಗೆ ಗಮನ ಹರಿಸಬೇಕು. ದೇಹಕ್ಕೆ ಪೌಷ್ಟಿಕಾಂಶದ ಅವಶ್ಯಕತೆಗಳನ್ನು ಪೂರೈಸಲು ಪ್ರೋಟೀನ್ಗಳು, ವಿಟಮಿನ್‌ಗಳು ಮತ್ತು ಖನಿಜಗಳು ಸಮೃದ್ಧವಾಗಿರುವ ಆಹಾರವನ್ನು ಸೇವಿಸಿ.

ರಿಮೈಂಡರ್‌ಗಳನ್ನು ಸೆಟ್‌ ಮಾಡಿಕೊಳ್ಳಿ :
ಅತಿಯಾದ ಒತ್ತಡ, ಆತಂಕ ಮತ್ತು ಖಿನ್ನತೆಯನ್ನು ಹೊಂದಿರುವವರು ಆಹಾರ ತಿನ್ನುವುದರ ಕಡೆಗೆ ಗಮನ ಹರಿಸಿವುದಿಲ್ಲ. ಅಂತಹವು ನೆನಪು ಮಾಡಿಕೊಳ್ಳಲು ರಿಮೈಂಡರ್‌ಗಳನ್ನು ಸೆಟ್‌ ಮಾಡಿಕೊಳ್ಳಬಹುದು.

ಸ್ವಲ್ಪ ಸ್ವಲ್ಪ ಆಹಾರ ತಿನ್ನಿ:
ಒಮ್ಮಲೇ ಆಹಾರ ಸೇವಿಸಿವುದನ್ನು ಬಿಟ್ಟು ಸ್ವಲ್ಪ ಸ್ವಲ್ಪ ಆಹಾರವನ್ನು ಹಲವು ಬಾರಿ ತೆಗೆದುಕೊಳ್ಳುವುದು ಉತ್ತಮ.

ಚೆನ್ನಾಗಿ ನಿದ್ದೆ ಮಾಡಿ :
ನಿದ್ರೆಯ ಕೊರತೆಯು ಕೂಡಾ ಕಡಿಮೆ ಹಸಿವಾಗಲು ಕಾರಣವಾಗಿದೆ. ಅದಕ್ಕಾಗಿ ಪ್ರತಿದಿನ ಸಾಕಷ್ಟು ನಿದ್ದೆ ಮಾಡಿ.

ಇದನ್ನೂ ಓದಿ : Reasons for back pain: ಬೆಳಿಗ್ಗೆ ಎದ್ದಾಗ ಬೆನ್ನು ನೋವು ಕಾಡುತ್ತಿದೆಯೆ? ಇದಕ್ಕೆ ಕಾರಣಗಳೇನು ? ಇಲ್ಲಿದೆ ಪೂರ್ಣ ಮಾಹಿತಿ

ಇದನ್ನೂ ಓದಿ : Winter And Sesame Seeds : ಚಳಿಗಾಲದಲ್ಲಿ ಎಳ್ಳನ್ನು ಬಳಸುವುದರಿಂದ ಎಷ್ಟೆಲ್ಲಾ ಪ್ರಯೋಜನವಿದೆ ಗೊತ್ತಾ…

(Loss Of Appetite Do you know the reason of not feeling hungry?)

Comments are closed.