Nutritious Food : ಸೊಂಟ ನೋವು ಹಾಗೂ ಮೂಳೆಗಳಿಗೆ ಉತ್ತಮ ಈ ಉಂಡೆ

ಇತ್ತೀಚಿಗಿನ ದಿನಗಳಲ್ಲಿ ಬಹುತೇಕರಲ್ಲಿ ಸೊಂಟನೋವು ಹಾಗೂ ಡಿಸ್ಕ್‌ಗೆ ಸಂಬಂಧಪಟ್ಟ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಅವರು ಬಳಸುವ ಆಹಾರದಲ್ಲಿನ ಪೌಷ್ಠಿಕಾಂಶದ (Nutritious Food)ಕೊರತೆಯಿಂದಲೂ ಅಥವಾ ತಪ್ಪು ಜೀವನಶೈಲಿಯಿಂದಲೂ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಮೂಳೆ ಬೆಳವಣಿಗೆಯ ಕೊರತೆ ಯಿಂದಲೂ ಈ ಸಮಸ್ಯೆ ಉಂಟಾಗುತ್ತದೆ. ಇದ್ದರಿಂದ ಅವರಿಗೆ ಸೊಂಟದಲ್ಲಿ ಅತೀವ ನೋವು ಕಾಣಿಸಿಕೊಳ್ಳತ್ತದೆ. ಅಂತವರಿಗೆ ಹೆಚ್ಚಿಗೆ ನಡೆದಾಡಲು ಕಷ್ಟವಾಗುತ್ತದೆ. ಭಾರ ಎತ್ತಲು, ಕುಳ್ಳಿತುಕೊಳ್ಳಲು, ಮಲಗಲು ಕೂಡ ಕಷ್ಟ ಪಡುತ್ತಿರುತ್ತಾರೆ. ಇದನ್ನು ತಪ್ಪಿಸಲು ಹಾಗೂ ಮೂಳೆ ಬೆಳವಣಿಗೆಗೆ ಪೌಷ್ಟಿಕಾಂಶವುಳ್ಳ ಆಹಾರ ಪದ್ಧತಿ ಯನ್ನು ಅಳವಡಿಸಿಕೊಳ್ಳಬೇಕು. ಹಾಗೆ ಯೋಗ್ಯಭ್ಯಾಸವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅದಕ್ಕಾಗಿ ಮನೆಯಲ್ಲಿ ಆರೋಗ್ಯಕರವಾಗಿ ತಯಾರಿಸುವ ಆಹಾರವನ್ನು ತಿಳಿಯೋಣ.

ಬೇಕಾಗುವ ಸಾಮಾಗ್ರಿ :

  • 1 ಕಪ್‌ ಎಳ್ಳು(ಬಿಳಿಎಳ್ಳು ಅಥವಾ ಕಪ್ಪುಎಳ್ಳು)
  • 1 ಕಪ್‌ ನೆಲಗಡಲೆ
  • 1 ಕಪ್‌ ಹುರಿಗಡಲೆ
  • 1 ಕಪ್‌ ಒಣಕಾಯಿತುರಿ
  • ಬೆಲ್ಲ

ತಯಾರಿಸುವ ವಿಧಾನ :
ಮೊದಲಿಗೆ ಗ್ಯಾಸ್‌ನ್ನು ಹೊತ್ತಿಸಿ ಅದರ ಮೇಲೆ ಬಾಣಲೆಯನ್ನು ಇಟ್ಟುಕೊಳ್ಳಬೇಕು. ಅದು ಬಿಸಿ ಆದಮೇಲೆ ಒಂದು ಕಪ್‌ ನೆಲಗಡಲೆಯನ್ನು ಹಾಕಿ ಮಿಡಿಯಮ್‌ ಉರಿಯಲ್ಲಿ ಗರಿಗರಿಯಾಗುವರೆಗೆ ಹುರಿದುಕೊಳ್ಳಬೇಕು. ಹುರಿದುಕೊಂಡ ನೆಲಗಡಲೆಯನ್ನು ಬಿಸಿ ಆರಿದ ಮೇಲೆ ಅದರ ಸಿಪ್ಪೆಯನ್ನು ತೆಗೆದು ಒಂದು ಪಾತ್ರೆಯಲ್ಲಿ ತೆಗೆದು ಇಟ್ಟುಕೊಳ್ಳಬೇಕು. ನಂತರ ಒಂದು ಕಪ್‌ ಎಳ್ಳನ್ನು ಹುರಿದುಕೊಳ್ಳಬೇಕು. ಹಾಗೆ ತುರಿದು ಇಟ್ಟುಕೊಂಡ ಒಣಕೊಬ್ಬರಿಯನ್ನು ಅದರ ಜೊತೆಯಲ್ಲೇ ಹುರಿಗಡಲೆಯನ್ನು ಹುರಿದುಕೊಳ್ಳಬೇಕು. ಹೀಗೆ ಹುರಿದ ನೆಲಗಡಲೆ, ಎಳ್ಳು, ಹುರಿಗಡಲೆ ಹಾಗೂ ಕೊಬ್ಬರಿಯನ್ನು ಡ್ರೈ ಇರುವ ಮಿಕ್ಸಿ ಜಾರಿನಲ್ಲಿ ಹಾಕಿ ತರಿ ತರಿಯಾಗಿ ರುಬ್ಬಿಕೊಳ್ಳಬೇಕು. ಜಾಸ್ತಿ ನುಣ್ಣಗೆ ರುಬ್ಬಿಕೊಳ್ಳುವುದು ಬೇಡ ಯಾಕೆಂದರೆ ತರಿ ತರಿಯಾಗಿ ರುಬ್ಬಿಕೊಳ್ಳುವುದರಿಂದ ತಿನ್ನಲು ರುಚಿಯಾಗಿರುತ್ತದೆ. ಅದರ ಜೊತೆಯಲ್ಲಿಯೇ ಸಿಹಿಗೆ ಬೇಕಾದಷ್ಟು ಪುಡಿ ಮಾಡಿದ ಬೆಲ್ಲವನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಬೇಕು. ನಂತರ ಇದನ್ನು ಒಂದು ಪಾತ್ರೆಗೆ ಹಾಕಿಕೊಂಡು ಉಂಡೆ ತರ ಮಾಡಿಕೊಳ್ಳಬೇಕು.

ಇದನ್ನೂ ಓದಿ : carom seeds:ಗ್ಯಾಸ್ಟ್ರಿಕ್‌ ಸಮಸ್ಯೆಗೆ ಓಮದ ಕಾಳಿನ ಪರಿಹಾರ

ಇದನ್ನೂ ಓದಿ : Custard Apple Benefits : ಈ ಋತುವಿನ ಹಣ್ಣು ‘ಸೀತಾಫಲ’ ತಿನ್ನುವುದರಿಂದ ಏನೆಲ್ಲಾ ಲಾಭ ಇದೆ ಗೊತ್ತಾ

ಇದನ್ನೂ ಓದಿ : Knee Pain : ಮಂಡಿನೋವಿಗೆ ಇಲ್ಲಿದೆ ಶಾಶ್ವತ ಪರಿಹಾರ

ಉಪಯೋಗ:
ಈ ಉಂಡೆಯನ್ನು ದಿನ ಮಾಡಿ ತಿನ್ನಲು ಆಗದಿದ್ದರೂ ಸಹ ತಿಂಗಳಲ್ಲಿ ನಾಲ್ಕರಿಂದ ಐದು ದಿನ ಮಾಡಿ ತಿಂದರೆ ಆರೋಗ್ಯಕ್ಕೆ ಒಳ್ಳೆಯದ್ದು. ಇದನ್ನು ಬೆಳೆಯುವ ಮಕ್ಕಳಿಗೆ ಕೊಡುವುದರಿಂದ ಅವರಲ್ಲಿ ಮೂಳೆ ಬೆಳವಣಿಗೆ ಚೆನ್ನಾಗಿ ಆಗುತ್ತದೆ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ (Nutritious Food)ಪ್ರೊಟ್ರೀನ್‌, ಕ್ಯಾಲ್ಸಿಯಂ, ನಾರಿನಾಂಶ ಹಾಗೂ ಐರನ್ ಇರುತ್ತದೆ. ಇದರಲ್ಲಿ ನಾರಿನಾಂಶ ಇರುವುದರಿಂದ ಜೀರ್ಣಕ್ರಿಯೆ ಕೂಡ ಸಹಾಯ ಆಗುತ್ತದೆ.

This pill is good for hip pain and bones Nutritious Food

Comments are closed.