Tomato: ತಲೆಹೊಟ್ಟಿನ ಸಮಸ್ಯೆಗೆ ಟೊಮೇಟೊ ಹಣ್ಣು!

(Tomato) ಪುರುಷರಿಂದ ಹಿಡಿದು ಮಹಿಳೆಯರು, ಮಕ್ಕಳು ಎಲ್ಲರಿಗೂ ಕೂದಲಿನ ಸಮಸ್ಯೆ ಇದ್ದೇ ಇದೆ. ಇದಕ್ಕೆ ನಾವಿರುವ ವಾತಾವರಣ, ಆಹಾರ , ಎಲ್ಲವು ಕೂಡ ಒಂದು ರೀತಿಯಲ್ಲಿ ಕಾರಣವೇ. ಹಾಗಾಗಿ ತಲೆ ಕೂದಲಿನ ಸಮಸ್ಯೆಗೆ ಮುಖ್ಯ ಕಾರಣ ಎನೆಂಬುದನ್ನು ತಿಳಿದುಕೊಂಡು ಅದಕ್ಕೆ ಸೂಕ್ತ ಪರಿಹಾರವನ್ನು ನೀಡುವುದು ಮುಖ್ಯ. ತಲೆ ಕೂದಲಿನ ಸಮಸ್ಯೆಗೆ ಮುಖ್ಯವಾಗಿ ತಲೆಯಲ್ಲಿನ ಹೊಟ್ಟು ಕಾರಣವಾಗಿದೆ.

ತಲೆಹೊಟ್ಟು ಜಾಸ್ತಿಯಾದಂತೆ ಕೂದಲು ಉದುರುವಿಕೆ ಕೂಡ ಹೆಚ್ಚಾಗುತ್ತದೆ. ಇದಕ್ಕಾಗಿ ಅನೇಕ ಔಷದಿಗಳು (Tomato) ಕೂಡ ಅಂಗಡಿಗಳಲ್ಲಿ ಮೆಡಿಕಲ್‌ಗಳಲ್ಲಿ ಸಿಗುತ್ತದೆ. ಆದರೆ ಅವುಗಳನ್ನು ಬಳಸುವುದರಿಂದ ತಕ್ಷಣಕ್ಕೆ ಪರಿಹಾರ ದೊರೆತರೂ ನಂತರದಲ್ಲಿ ಪರಿಣಾಮ ಬೀರುತ್ತವೆ. ಆದ್ದರಿಂದ ಹೊರಗಡೆ ಸಿಗುವ ಔಷದಿಗಳ ಮಾರು ಹೋಗುವ ಬದಲಾಗಿ ಮನೆಯಲ್ಲೇ ಔಷಧಿಗಳನ್ನು ತಯಾರಿಸಿಕೊಂಡು ಬಳಸಿದರೇ ಉತ್ತಮ ಮತ್ತು ಆರೋಗ್ಯಕ್ಕೂ ಕೂಡ ಒಳ್ಳೆಯದೂ. ಇನ್ನೂ ತಲೆಹೊಟ್ಟು ನಿವಾರಣೆಗೆ ನಿಮ್ಮ ಮನೆಯಲ್ಲೇ ಸಿಗುವಂತಹ ಪದಾರ್ಥಗಳನ್ನು ಬಳಸಿ ಮನೆಮದ್ದು ತಯಾರಿಸಿಕೊಳ್ಳಬಹುದು. ಹಾಗಿದ್ದರೆ ಮನೆಯಲ್ಲೇ ಸಿಗುವ ಆ ಪದಾರ್ಥ ಯಾವುದು..? ಈ ರೀತಿಯಲ್ಲಿ ಆಲೋಚನೆ ನಮ್ಮ ತಲೆಗೆ ಬಂದಾಗ ಚರ್ಮ ರೋಗ ತಜ್ಞರು ಹೇಳಿದ ಒಂದು ಪದಾರ್ಥವೆಂದರೆ ಅದು ಟೊಮೇಟೊ.

ಹೌದು, ನಾವು ಪ್ರತಿ ದಿನ ನಮ್ಮ ಅಡುಗೆ ಮನೆಯಲ್ಲಿ ಬಳಸುವ ಟೊಮೇಟೊ ನಿಜವಾಗಲೂ ತಲೆ ಹೊಟ್ಟನ್ನು ನಿವಾರಿಸುವ ವಿಷಯದಲ್ಲಿ ಅದ್ಭುತವಾಗಿ ಕೆಲಸ ಮಾಡುತ್ತದೆ. ಟೊಮೇಟೊ ತಲೆ ಹೊಟ್ಟಿನ ಸಮಸ್ಯೆಗೆ ರಾಮಬಾಣವಾಗಿ ಪರಿಣಮಿಸುತ್ತದೆ.

ತಲೆ ಹೊಟ್ಟು ಸಮಸ್ಯೆಗೆ ಕಾರಣವೇನು?
ನೆತ್ತಿಯ ಭಾಗದಲ್ಲಿ ಪಿಎಚ್‌ ಲೆವೆಲ್‌ ಬದಲಾದಾಗ ತಲೆ ಹೊಟ್ಟು ಸಮಸ್ಯೆ ಆರಂಭವಾಗುತ್ತದೆ. ಇದರಿಂದ ತಲೆಯಲ್ಲಿ ಫಂಗಸ್‌ ಬೆಳವಣಿಗೆ ಉಂಟಾಗಿ ತಲೆ ಹೊಟ್ಟು ಸಮಸ್ಯೆ ಸೊಂಕಿನ ರೂಪದಲ್ಲಿ ಕಂಡುಬರುತ್ತದೆ. ಪಿಎಚ್ ಮಟ್ಟವನ್ನು ಅತ್ಯುತ್ತಮವಾಗಿ ನಿರ್ವಹಿಸುವಲ್ಲಿ ಮತ್ತು ಸಮತೋಲನ ಮಾಡುವಲ್ಲಿ ಟೊಮ್ಯಾಟೋ ಜ್ಯೂಸ್ ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

ಇದನ್ನೂ ಓದಿ : Amaranthus: ಹರಿವೆ ಸೊಪ್ಪಿನಲ್ಲೂ ಇದೆ ಔಷದೀಯ ಗುಣಗಳು

ಇದನ್ನೂ ಓದಿ : Boosting your Immunity:ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಇಲ್ಲಿದೆ ಕಷಾಯಪುಡಿ

ಹಾಗಿದ್ದರೆ ತಲೆ ಹೊಟ್ಟಿಗೆ ಟೊಮೇಟೊ ಬಳಸುವುದು ಹೇಗೆ ?
ಮೊದಲಿಗೆ ಒಂದು ಚೆನ್ನಾಗಿ ಹಣ್ಣಾಗಿರುವ ಮೀಡಿಯಂ ಗಾತ್ರದ ಟೊಮ್ಯಾಟೊ ತೆಗೆದುಕೊಂಡು ಒಂದು ಮಿಕ್ಸರ್ ಗ್ರೈಂಡರ್ ನಲ್ಲಿ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ನಂತರ ಅದರ ಪೇಸ್ಟ್ ಅನ್ನು ಚೆನ್ನಾಗಿ ಹಿಂಡಿ ಅದರ ರಸ ಬೇರೆ ಮಾಡಿ.
ಈಗ ಬೇರೆ ಮಾಡಿದ ರಸಕ್ಕೆ ನಿಮ್ಮ ಮನೆಯಲ್ಲಿರುವ ಕೊಬ್ಬರಿ ಎಣ್ಣೆ ಬೇಕಾದರೂ ನೀವು ಮಿಕ್ಸ್ ಮಾಡ ಬಹುದು ಅಥವಾ ನೇರವಾಗಿ ಕೇವಲ ಟೊಮ್ಯಾಟೊ ರಸವನ್ನು ಕೂಡ ಬಳಸಬಹುದು. ನಿಮ್ಮ ನೆತ್ತಿಯ ಭಾಗಕ್ಕೆ 10 ನಿಮಿಷಗಳ ಕಾಲ ಟೊಮೇಟೊ ರಸವನ್ನು ಹಚ್ಚಿ ಮಸಾಜ್ ಮಾಡಿಕೊಳ್ಳಿ. ನಂತರ ಸುಮಾರು 20 ನಿಮಿಷ ಹಾಗೆ ಬಿಟ್ಟು ಉಗುರು ಬೆಚ್ಚಗಿನ ನೀರಿನಲ್ಲಿ ತಲೆ ತೊಳೆದುಕೊಳ್ಳಿ. ಒಂದು ತಿಂಗಳು ನೀವು ಇದೇ ರೀತಿ ಮಾಡಿದರೆ ನಿಮ್ಮ ತಲೆಹೊಟ್ಟು ಸಮಸ್ಯೆ ಸಂಪೂರ್ಣವಾಗಿ ಮಾಯವಾಗುತ್ತದೆ.

Comments are closed.