ಗ್ಯಾರಂಟಿ ಬಳಿಕ ಇದೀಗ ಪಿಂಚಣಿಗೂ ಬಿತ್ತು ಕತ್ತರಿ.. ರಾಜ್ಯದಲ್ಲಿ 16 ಲಕ್ಷ ಜನರ ಸಾಮಾಜಿಕ ಪೆನ್ಶನ್​ ಕಟ್!

ಸಾಮಾಜಿಕ ಭದ್ರತಾ ಯೋಜನೆಯ ಅಡಿಯಲ್ಲಿ ಅನರ್ಹ ಫಲಾನುಭವಿಗಳನ್ನು ಯೋಜನೆಯಿಂದ ಹೊರಗಿಡುವಂತೆ ಕಂದಾಯ ಇಲಾಖೆಯಿಂದ ಸೂಚನೆ ಹೊರಬಿದ್ದ ಬೆನ್ನಲ್ಲೇ 16 ಲಕ್ಷ ಸಂಶಯಾಸ್ಪದ ಫಲಾನುಭವಿಗಳಿಗೆ ಯೋಜನೆಯಿಂದ ಕೊಕ್​ ನೀಡಲಾಗಿದೆ.

ರಾಜ್ಯದಲ್ಲಿ ಇತ್ತೀಚೆಗಷ್ಟೆ ಗ್ಯಾರಂಟಿ ಯೋಜನೆಗಳಿಂದ ಅನರ್ಹ ಫಲಾನುಭವಿಗಳನ್ನು ಗುರುತಿಸಿದ್ದ ರಾಜ್ಯ ಸರ್ಕಾರ ಇದೀಗ ಅದೇ ಮಾದರಿಯಲ್ಲಿ ಸಾಮಾಜಿಕ ಪಿಂಚಣಿ ಸೌಲಭ್ಯ ಅನುಭವಿಸುತ್ತಿದ್ದ ಅನರ್ಹರಿಗೂ ಕೊಕ್​ ನೀಡಿದೆ. ಸಾಮಾಜಿಕ ಭದ್ರತಾ ಯೋಜನೆಯ ಅಡಿಯಲ್ಲಿ ಅನರ್ಹ ಫಲಾನುಭವಿಗಳನ್ನು ಯೋಜನೆಯಿಂದ ಹೊರಗಿಡುವಂತೆ ಕಂದಾಯ ಇಲಾಖೆಯಿಂದ ಸೂಚನೆ ಹೊರಬಿದ್ದ ಬೆನ್ನಲ್ಲೇ 16 ಲಕ್ಷ ಸಂಶಯಾಸ್ಪದ ಫಲಾನುಭವಿಗಳಿಗೆ ಯೋಜನೆಯಿಂದ ಕೊಕ್​ ನೀಡಲಾಗಿದೆ.

ರಾಜ್ಯದಲ್ಲಿ ಪ್ರಸ್ತುತ ಸಾಮಾಜಿಕ ಭದ್ರತಾ ಯೋಜನೆಯ ಅಡಿಯಲ್ಲಿ 82.71 ಲಕ್ಷ ಫಲಾನುಭವಿಗಳು ವೃದ್ಧಾಪ್ಯ ವೇತನ, ವಿಧವಾ ಪಿಂಚಣಿ, ವಿಕಲಚೇತನರ ಭತ್ಯೆ ಹಾಗೂ ಸಂಧ್ಯಾ ಸುರಕ್ಷಾ ಯೋಜನೆಗಳಂತಹ ವಿವಿಧ ಇಲಾಖೆಯ ವ್ಯಾಪ್ತಿಯಲ್ಲಿ ಪಿಂಚಣಿ ಪಡೆಯುತ್ತಿದ್ದರು. ಈ ಪಟ್ಟಿಯಲ್ಲಿ 23.13 ಲಕ್ಷ ಫಲಾನುಭವಿಗಳನ್ನು ಸಂಶಯಾಸ್ಪದ ಪಟ್ಟಿಗೆ ಸೇರ್ಪಡೆ ಮಾಡಲಾಗಿದ್ದು, ಇವರಲ್ಲಿ 16,41,440 ಫಲಾನುಭವಿಗಳಿಗೆ ಪಿಂಚಣಿ ಸೌಲಭ್ಯದಿಂದ ಕೊಕ್​ ನೀಡಲಾಗಿದೆ.

ಇದನ್ನೂ ಓದಿ : ರೆಸಾರ್ಟ್ ಪಾಲಿಟಿಕ್ಸ್ ಬಿರುಸು: 7ನೇ ಸೀಟಿನ ಜಿದ್ದಾಜಿದ್ದಿನಲ್ಲಿ ಗೆಲುವಿನ ನಗೆ ಬೀರಲಿದೆಯೇ ಜೆಡಿಎಸ್?

ಇನ್ನು ಸಂಶಯಾಸ್ಪದ ಪಟ್ಟಿಯಲ್ಲಿಯೇ ಇರುವ 3 ಲಕ್ಷ ಫಲಾನುಭವಿಗಳ ಪರಿಶೀಲನಾ ಕಾರ್ಯ ಮುಂದುವರಿದಿದ್ದು, ಇವರ ಬಗ್ಗೆ ಪರಿಶೀಲನೆ ಮುಂದುವರಿದಿದೆ. ಇದಕ್ಕಾಗಿಯೇ ಸಂಯೋಜನೆ ಎಂಬ ಮೊಬೈಲ್​ ಆ್ಯಪ್​ ಕೂಡ ಸಿದ್ಧವಾಗಿದ್ದು, ಅನುಮಾನಾಸ್ಪದ ವ್ಯಕ್ತಿಗಳನ್ನು ಈ ಪಟ್ಟಿಗೆ ಸೇರ್ಪಡೆ ಮಾಡುವ ಕಾರ್ಯ ಭರದಿಂದ ಸಾಗಿದೆ.ಇನ್ನು ಕಳೆದ ಮೂರು ತಿಂಗಳಿನಿಂದ 16 ಲಕ್ಷ ಪಿಂಚಣಿದಾರರಿಗೆ ಪಿಂಚಣಿಯೇ ಪಾವತಿಯಾಗಿಲ್ಲ ಎಂಬ ಆರೋಪ ಕೂಡ ಕೇಳಿ ಬಂದಿದ್ದು, ಪಿಂಚಣಿಯನ್ನೇ ನಂಬಿಕೊಂಡಿದ್ದ ಅನೇಕ ಅಂಗವಿಕಲರು ಹಾಗೂ ವೃದ್ಧರು, ಅಸಹಾಯಕರ ಜೀವನ ದುಸ್ಥರವಾಗಿದೆ ಎನ್ನಲಾಗಿದೆ.

Meghana Pranuth | ಮೇಘನಾ ಪ್ರಣೂತ್‌

ಮೇಘನಾ ಪ್ರಣೂತ್‌ ಮೂಲತಃ ಉಡುಪಿ ಜಿಲ್ಲೆಯವರು. ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣವನ್ನು ಪಡೆದಿದ್ದು, ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಿನಿಮಾ, ಕ್ರೀಡೆ, ವಾಣಿಜ್ಯ, ಫ್ಯಾಷನ್‌ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ. ಇದೀಗ ನ್ಯೂಸ್‌ ನೆಕ್ಸ್ಟ್‌ನಲ್ಲಿ ನಿರೂಪಕರಾಗಿ, ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ.

Related Stories