ECI big shock: “ದೀದಿ ರಾಜ್ಯದಲ್ಲಿ 21 ಲಕ್ಷ ಪ್ರೇತಗಳಿಗೂ ಮತದಾನದ ಹಕ್ಕು” …!“ಪಶ್ಚಿಮ ಬಂಗಾಳದಲ್ಲಿ 21 ಲಕ್ಷ ‘ಮೃತ ಮತದಾರರು’ ಪತ್ತೆ
ECI big shock: ಕೇಂದ್ರದಲ್ಲಿ ಬಿಜೆಪಿ ಚುನಾವಣಾ ಆಯೋಗದೊಂದಿಗೆ ಮೈತ್ರಿ ಮಾಡಿಕೊಂಡು ಮತಗಳ್ಳತನದ ಮೂಲಕ ಅಧಿಕಾರಕ್ಕೆ ಬಂದಿದೆ ಎಂಬ ಗಂಭೀರ ಆರೋಪವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ಮಾಡಿದ್ದರು. ಇದಾದ ಬಳಿಕ ಬಿಹಾರ ಚುನಾವಣೆಯಲ್ಲಿಯೂ ಇದೇ ಆರೋಪವನ್ನು ಕಾಂಗ್ರೆಸ್ ಮಾಡಿತ್ತು.
ಇದೀಗ ಪಶ್ಚಿಮ ಬಂಗಾಳದಲ್ಲಿ ಕೇಂದ್ರ ಚುನಾವಣಾ ಆಯೋಗ ನಡೆಸಿದ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ 21 ಲಕ್ಷಕ್ಕೂ ಅಧಿಕ ಮೃತ ಮತದಾರರು ಪತ್ತೆಯಾಗಿದ್ದಾರೆ.
ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯೊಂದರಲ್ಲಿ 2.75 ಲಕ್ಷ ಮೃತ ಮತದಾರರ ಹೆಸರು ಪತ್ತೆಯಾಗಿದೆ. ಪಶ್ಚಿಮ ಬರ್ಧಮಾನ್ ಹಾಗೂ ದಕ್ಷಿಣ 24 ಪರಗಣದಲ್ಲಿ ಕೂಡ ದಾಖಲೆಯ ಸಂಖ್ಯೆಯಲ್ಲಿ ಮೃತ ಮತದಾರರ ಹೆಸರು ಕಂಡು ಬಂದಿದ್ದು ಎರಡು ಮತ್ತು ಮೂರನೇ ಸ್ಥಾನಗಳನ್ನು ಈ ಜಿಲ್ಲೆ ಪಡೆದುಕೊಂಡಿದೆ.ಶೇಕಡಾ 90ಕ್ಕಿಂತ ಹೆಚ್ಚು ಡಿಜಿಟಲೀಕರಣ ಕಾರ್ಯ ಈಗಾಗಲೇ ಪೂರ್ಣಗೊಂಡಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ರಾಜ್ಯಾದ್ಯಂತ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್ಒ) ‘ಸಂಗ್ರಹಿಸದ’ ಗಣತಿ ನಮೂನೆಗಳ ಸಂಪೂರ್ಣ ಡಿಜಿಟಲೀಕರಣವನ್ನು ಮಾಡಿದ ನಂತರವೇ ರಾಜ್ಯದಲ್ಲಿ ಒಟ್ಟು ಸತ್ತ ಮತದಾರರ ಸಂಖ್ಯೆಯನ್ನು ಕಂಡು ಹಿಡಿಯಲು ಸಾಧ್ಯವಾಗಲಿದೆ. ಸಂಗ್ರಹಿಸದ ನಮೂನೆಗಳಲ್ಲಿ ಗೈರುಹಾಜರಾದ, ಶಾಶ್ವತವಾಗಿ ಸ್ಥಳಾಂತರಗೊಂಡ, ಸತ್ತ ಮತ್ತು ನಕಲು ಮತದಾರರು ಸೇರಿದ್ದಾರೆ ಎನ್ನಲಾಗಿದೆ.
Also Read: The risk of heart attack: ಯುವಕರಲ್ಲಿ ಹೆಚ್ಚುತ್ತಿದೆ ಹೃದಯಾಘಾತದ ಅಪಾಯ : ಕೊನೆಗೂ ಹೊರಬಿತ್ತು ನಿಜವಾದ ಕಾರಣ
ಇದೊಂದು ಗಂಭೀರ ಪ್ರಕರಣವಾಗಿರುವ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಅಗರ್ವಾಲ್ ಮತ್ತು ಸುಬ್ರತಾ ಗುಪ್ತಾ ಈಗಾಗಲೇ ಜಿಲ್ಲಾ ಚುನಾವಣಾ ಆಯೋಗದ ವೀಕ್ಷಕರೊಂದಿಗೆ ಮಹತ್ವದ ಸಭೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ.



