ಹರೀಶ್ ರಾಣಾ 13 ವರ್ಷದ ಹೋರಾಟ ಅಂತ್ಯ : ಏನಿದು ನಿಷ್ಕ್ರಿಯ ದಯಾಮರಣ

ಹಿಮಾಚಲ ಪ್ರದೇಶದ ನಿವಾಸಿಯಾಗಿದ್ದ ಹರೀಶ್ ರಾಣಾ, 2013 ರಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ಅಂದಿನಿಂದ ಅವರು ಸಂಪೂರ್ಣವಾಗಿ ಕೋಮಾಕ್ಕೆ ಜಾರಿದ್ದರು.

ನವದೆಹಲಿ: ಭಾರತದ ಕಾನೂನು ಇತಿಹಾಸದಲ್ಲಿ ಅತ್ಯಂತ ಸಂವೇದನಾಶೀಲ ಪ್ರಕರಣವೊಂದಕ್ಕೆ ತೆರೆ ಬಿದ್ದಿದೆ. ಕಳೆದ 13 ವರ್ಷಗಳಿಂದ ಕೋಮಾದಲ್ಲಿದ್ದು, ದೇಶದಲ್ಲೇ ಮೊದಲ ಬಾರಿಗೆ ನಿಷ್ಕ್ರಿಯ ದಯಾಮರಣ (Passive Euthanasia) ಪಡೆಯಲು ಸುಪ್ರೀಂ ಕೋರ್ಟ್‌ನಿಂದ ಅನುಮತಿ ಪಡೆದಿದ್ದ ಹರೀಶ್ ರಾಣಾ ನಿಧನರಾಗಿದ್ದಾರೆ. ಇದು ಕೇವಲ ಒಬ್ಬ ವ್ಯಕ್ತಿಯ ಸಾವಲ್ಲ, ಬದಲಿಗೆ ಘನತೆಯಿಂದ ಸಾಯುವ ಹಕ್ಕಿಗಾಗಿ ನಡೆದ ದಶಕದ ಹೋರಾಟದ ಅಂತ್ಯವಾಗಿದೆ.

ಏನಿದು ಹರೀಶ್ ರಾಣಾ ಪ್ರಕರಣ ?

ಹಿಮಾಚಲ ಪ್ರದೇಶದ ನಿವಾಸಿಯಾಗಿದ್ದ ಹರೀಶ್ ರಾಣಾ, 2013 ರಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ಅಂದಿನಿಂದ ಅವರು ಸಂಪೂರ್ಣವಾಗಿ ಕೋಮಾಕ್ಕೆ ಜಾರಿದ್ದರು. ಹೀಗಾಗಿ ಉಸಿರಾಟಕ್ಕಾಗಿ ಕೃತಕ ಜೀವ ರಕ್ಷಕ ವ್ಯವಸ್ಥೆ ((Life support system) ಯನ್ನು ಅಳವಡಿಸಲಾಗಿತ್ತು.

ಹರೀಶ್‌ ರಾಣಾ ಅವರನ್ನು ನೋಡಿಕೊಳ್ಳಲು ಸಾಧ್ಯವಾಗದೆ ಅವರ ನೋವನ್ನು ಸಹಿಸಲಾರದೆ ಪೋಷಕರು ದಯಾಮರಣಕ್ಕ ಅರ್ಜಿ ಸಲ್ಲಿಸಿದ್ದರು. ಕೊನೆಗೂ 2026ರ ಮಾರ್ಚ್ 11 ರಂದು ಸುಪ್ರೀಂ ಕೋರ್ಟ್‌ ಹರೀಶ್‌ ರಾಣಾ ಅವರಿಗೆ ನಿಷ್ಕ್ರೀಯ ದಯಾ ಮರಣ ಪಡೆಯಲು ಐತಿಹಾಸಿಕ ಅನುಮತಿ ನೀಡಿತ್ತು.

ಸುಪ್ರೀಂ ಕೋರ್ಟ್ ನೀಡಿದ ಐತಿಹಾಸಿಕ ತೀರ್ಪು ನೀಡದ ಬೆನ್ನಲ್ಲೇ ನ್ಯಾಯಾಲಯ ಹರೀಶ್ ರಾಣಾ ಅವರ ಆರೋಗ್ಯದ ಸ್ಥಿತಿಯನ್ನು ಪರಿಶೀಲನೆ ನಡೆಸಿತ್ತು. ಆದರೆ ಅವರು ಚೇತರಿಸಿಕೊಳ್ಳುವ ಸಾಧ್ಯತೆ ಶೂನ್ಯ ಅನ್ನೋ ಕುರಿತು ವೈದ್ಯಕೀಯ ವರದಿಗಳ ಪರಿಶೀಲನೆಯ ಬಳಿಕ ಘನತೆಯಿಂದ ಸಾಯುವ ಹಕ್ಕನ್ನು (Right to die with dignity ) ನೀಡಿದೆ.

Also Read : ಕೇರಳ ಚುನಾವಣೆ 2026 : ಪಿಣರಾಯಿ ವಿಜಯನ್ ಹ್ಯಾಟ್ರಿಕ್ ಗೆಲುವೋ ಅಥವಾ ಕಾಂಗ್ರೆಸ್ ಕಮ್‌ಬ್ಯಾಕ್ ? ಬಿಜೆಪಿಯ ಲೆಕ್ಕಾಚಾರವೇನು ?

ಭಾರತೀಯ ಸಂವಿಧಾನದ 21 ನೇ ವಿಧಿಯು ಭಾರತೀಯ ಪ್ರಜೆಗಳಿಗೆ ಘನತೆಯಿಂದ ಸಾಯುವ ಹಕ್ಕನ್ನು ನೀಡಿದೆ. ಇದೇ ವಿಧಿಯ ಆಧಾರದಲ್ಲಿ ಸುಪ್ರೀಂ ಕೋರ್ಟ್‌ ನಿಷ್ಕ್ರೀಯ ದಯಾಮರಣಕ್ಕೆ ಸಮ್ಮತಿಯನ್ನು ಸೂಚಿಸಿದೆ.

ಏನಿದು ನಿಷ್ಕ್ರೀಯ ದಯಾಮರಣ ( Passive Euthanasia) ?

ಇದು ವೈದ್ಯಕೀಯ ಜಗತ್ತಿನ ಒಂದು ಸಂಕೀರ್ಣ ಪ್ರಕ್ರಿಯೆ. ರೋಗಿಯನ್ನು ಬದುಕಿಸಲು ನೀಡಲಾಗುವ ಕೃತಕ ಜೀವ ರಕ್ಷಕ ವ್ಯವಸ್ಥೆ (ವೆಂಟಿಲೇಟರ್ ಅಥವಾ ಪೌಷ್ಟಿಕಾಂಶದ ಟ್ಯೂಬ್‌) ಅನ್ನು ತೆಗೆದುಹಾಕುವ ಮೂಲಕ ಸಾವು ಸಂಭವಿಸಲು ಬಿಡುವುದನ್ನು ನಿಷ್ಕ್ರೀಯ ದಯಾಮರಣ ( Passive Euthanasia )ಎಂದು ಕರೆಯಲಾಗುತ್ತದೆ.

Also Read : ದಲಿತ ವ್ಯಕ್ತಿಯು ಅನ್ಯ ಧರ್ಮಕ್ಕೆ ಮತಾಂತರಗೊಂಡರೆ ಎಸ್ಸಿ,ಎಸ್ಟಿ ಸ್ಥಾನಮಾನ ರದ್ದು : ಸುಪ್ರೀಂಕೋರ್ಟ್​

ನಿಷ್ಕ್ರಿಯ ದಯಾಮರಣದ (Passive Euthanasia) ಕಠಿಣ ನಿಯಮಗಳೇನು ?

  • Accident in 2013: 13 ವರ್ಷಗಳ ಹಿಂದೆ ನಡೆದ ಅಪಘಾತ ಹರೀಶ್ ಜೀವನವನ್ನೇ ಬದಲಿಸಿತು.
  • 13 Years in Coma: ಒಂದು ದಶಕಕ್ಕೂ ಹೆಚ್ಚು ಕಾಲ ಹಾಸಿಗೆಯಲ್ಲೇ ಕಳೆದ ಜೀವ.
  • Legal Landmark: ದಯಾಮರಣಕ್ಕೆ ಅನುಮತಿ ಪಡೆದ ಭಾರತದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆ.
  • Medical Board Review: ತಜ್ಞ ವೈದ್ಯರ ಸಮಿತಿಯಿಂದ ರಾಣಾ ಅವರ ಆರೋಗ್ಯ ತಪಾಸಣೆ ನಡೆಸಿ ವರದಿ ನೀಡಲಾಗಿತ್ತು.

ಈ ತೀರ್ಪು ಭವಿಷ್ಯದಲ್ಲಿ ಗುಣಪಡಿಸಲಾಗದ ಕಾಯಿಲೆಗಳಿಂದ ಬಳಲುತ್ತಿರುವ ಮತ್ತು ಸುದೀರ್ಘ ಕಾಲ ಕೋಮಾದಲ್ಲಿರುವ ರೋಗಿಗಳ ಕುಟುಂಬಗಳಿಗೆ ಒಂದು ದಾರಿ ದೀಪವಾಗಲಿದೆ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಭಾರತದಲ್ಲಿ ‘ನಿಷ್ಕ್ರಿಯ ದಯಾಮರಣ’: ಸುಪ್ರೀಂ ಕೋರ್ಟ್ ವಿಧಿಸಿರುವ ಕಠಿಣ ನಿಯಮಗಳೇನು ?

ಭಾರತದಲ್ಲಿ ದಯಾಮರಣ ಎನ್ನುವುದು ಅಷ್ಟು ಸುಲಭದ ಪ್ರಕ್ರಿಯೆಯಲ್ಲ. 2018ರ ಅರುಣಾ ಶಾನಬಾಗ್ ಪ್ರಕರಣದ ಐತಿಹಾಸಿಕ ತೀರ್ಪಿನ ನಂತರ, ಸುಪ್ರೀಂ ಕೋರ್ಟ್ Passive Euthanasia ಗೆ ಕೆಲವು ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ವಿಧಿಸಿದೆ. ಹರೀಶ್ ರಾಣಾ ಅವರ ಪ್ರಕರಣದಲ್ಲೂ ಇವುಗಳನ್ನು ಪಾಲಿಸಲಾಗಿತ್ತು.

ನಿಷ್ಕ್ರಿಯ ದಯಾಮರಣಕ್ಕೆ ಯಾರು ಅರ್ಜಿ ಸಲ್ಲಿಸಬಹುದು? (Who can apply?)

ರೋಗಿಯು ತೀವ್ರವಾದ ಕೋಮಾದಲ್ಲಿದ್ದು (Persistent Vegetative State), ಚೇತರಿಸಿಕೊಳ್ಳುವ ಯಾವುದೇ ಸಾಧ್ಯತೆ ಇಲ್ಲದಿದ್ದಾಗ ಮಾತ್ರ ಅವರ ಹತ್ತಿರದ ಸಂಬಂಧಿಕರು ಅಥವಾ ಪೋಷಕರು ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ಮೆಟ್ಟಿಲೇರಬಹುದು.

ನಿಷ್ಕ್ರಿಯ ದಯಾಮರಣ : ವೈದ್ಯಕೀಯ ಮಂಡಳಿಯ ತಪಾಸಣೆ (Medical Board Review)

ನ್ಯಾಯಾಲಯವು ತಕ್ಷಣವೇ ಅನುಮತಿ ನೀಡುವುದಿಲ್ಲ. ಮೊದಲು ಕನಿಷ್ಠ ಮೂವರು ತಜ್ಞ ವೈದ್ಯರ ತಂಡವನ್ನು ರಚಿಸಲಾಗುತ್ತದೆ. ಈ ತಂಡವು ರೋಗಿಯ ಸ್ಥಿತಿಯನ್ನು ಕೂಲಂಕಷವಾಗಿ ಪರಿಶೀಲಿಸಿ, “ಇವರು ಚಿಕಿತ್ಸೆಗೆ ಸ್ಪಂದಿಸುವುದಿಲ್ಲ” ಎಂದು ದೃಢೀಕರಿಸಿದ ವರದಿ ನೀಡಬೇಕು.

ಲಿವಿಂಗ್ ವಿಲ್ (Living Will)

ಒಬ್ಬ ವ್ಯಕ್ತಿ ಆರೋಗ್ಯವಾಗಿದ್ದಾಗಲೇ, “ನಾನು ಗುಣಪಡಿಸಲಾಗದ ಸ್ಥಿತಿಗೆ ತಲುಪಿದರೆ ನನ್ನನ್ನು ಜೀವ ರಕ್ಷಕ ವ್ಯವಸ್ಥೆಯಲ್ಲಿ ಇರಿಸಬೇಡಿ” ಎಂದು ಬರೆದಿಡಬಹುದು. ಇದನ್ನು Advance Medical Directive ಎನ್ನಲಾಗುತ್ತದೆ. ಇದನ್ನು ಗೆಜೆಟೆಡ್ ಅಧಿಕಾರಿಯ ಸಮ್ಮುಖದಲ್ಲಿ ಪ್ರಮಾಣೀಕರಿಸಿರಬೇಕು.

ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅನುಮತಿ (Judicial Oversight)ವೈದ್ಯಕೀಯ ಮಂಡಳಿಯ ವರದಿ ಬಂದ ನಂತರ, ಸಂಬಂಧಪಟ್ಟ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಥವಾ ಹೈಕೋರ್ಟ್ ಈ ಪ್ರಕ್ರಿಯೆಗೆ ಅಂತಿಮವಾಗಿ ಹಸಿರು ನಿಶಾನೆ ತೋರಿಸಬೇಕು. ರೋಗಿಯ ಜೀವ ತೆಗೆಯುವ ಉದ್ದೇಶ ಇದಾಗಿರಬಾರದು, ಬದಲಿಗೆ ಅವರ ನೋವನ್ನು ಕೊನೆಗಾಣಿಸುವ ಉದ್ದೇಶ ಮಾತ್ರ ಇರಬೇಕು.

ಸಕ್ರಿಯ ಮತ್ತು ನಿಷ್ಕ್ರಿಯ ದಯಾಮರಣದ ನಡುವಿನ ವ್ಯತ್ಯಾಸ (Active vs Passive)

ಸಕ್ರಿಯ ದಯಾಮರಣ (Active)ನಿಷ್ಕ್ರಿಯ ದಯಾಮರಣ (Passive)ಪ್ರಕ್ರಿಯೆ ವಿಷಕಾರಿ ಇಂಜೆಕ್ಷನ್ ಅಥವಾ ಔಷಧಿ ನೀಡಿ ಸಾವು ತರುವುದು.ಕೃತಕ ಜೀವ ರಕ್ಷಕ ವ್ಯವಸ್ಥೆ (Ventilator/Feeding tube) ತೆಗೆಯುವುದು. ಭಾರತದಲ್ಲಿ ಸ್ಥಿತಿಕಾನೂನುಬಾಹಿರ (Illegal)ಕೆಲವು ನಿಯಮಗಳಡಿ ಕಾನೂನುಬದ್ಧ.

harish rana passive euthanasia case india history death

Arun Gundmi | ಅರುಣ್ ಗುಂಡ್ಮಿ

Arun Gundmi Editor In Chief News Next Kannada. Working in more than 20 Years in Kannada News Media (Print, Digital and News Channels) Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021 More »

Related Stories