Independence Day 2025 Live PM Narendra Modi : ನವದೆಹಲಿ : ದೇಶದ ಜನರಿಗೆ ದೀಪಾವಳಿಗೆ ಭರ್ಜರಿ ಉಡುಗೊರೆ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಣೆ ಮಾಡಿದ್ದಾರೆ. ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ್ರು.
ಪ್ರಸ್ತುತ ವರ್ಷ ಜಿಎಸ್‌ಟಿ ಸುಧಾರಣೆಗಳನ್ನು ಜಾರಿಗೆ ತರುತ್ತೇವೆ ಎನ್ನುವ ಮೂಲಕ ದೇಶದ ಜನರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಕಳೆದ ಎಂಟು ವರ್ಷಗಳ ಅವಧಿಯಲ್ಲಿ ಜಿಎಸ್‌ಟಿ ತೆರಿಗೆ ವ್ಯವಸ್ಥೆಯನ್ನು ಸರಳೀಕರಣ ಮಾಡಿದ್ದೇವೆ ಎಂದಿದ್ದಾರೆ.
ದೀಪಾವಳಿಯ ವೇಳೆಗೆ ಜನರ ಜೀವನವನ್ನು ಸುಲಭಗೊಳಿಸಿ, ಆರ್ಥಿಕತೆಯನ್ನು ಬಲ ಪಡಿಸುವ ಉದ್ದೇಶವನ್ನು ಹೊಂದಲಾಗಿದೆ. ಇದಕ್ಕಾಗಿ ಹೊಸ, ಸರಳೀಕೃತ ಜಿಎಸ್‌ಟಿ ವ್ಯವಸ್ಥೆ ಜಾರಿಗೆ ಬರಲಿದೆ ಎಂದಿದ್ದಾರೆ.
ಇದನ್ನೂ ಓದಿ : ದರ್ಶನ್ 20 ಕೋಟಿ ಹಣ ನಮ್ಮ ಕುಟುಂಬಕ್ಕೆ ಕೊಟ್ಟಿಲ್ಲ : ರೇಣುಕಾಸ್ವಾಮಿ ತಂದೆ ಸ್ಪಷ್ಟನೆ
ಅಗತ್ಯವಸ್ತುಗಳು ಬೆಲೆಯು ಅಗ್ಗವಾಗುತ್ತದೆ. ಆರ್ಥಿಕವಾಗಿ ಹೆಚ್ಚಿನ ಉತ್ತೇಜನವನ್ನು ನೀಡಲಿದೆ. ವೋಕಲ್ ಫಾರ್ ಲೋಕಲ್ ಮಂತ್ರವನ್ನು ಭಾರತೀಯರು ಮಾಡಬೇಕು. ಭಾರತೀಯರು ಶ್ರಮವಹಿಸಿ ದುಡಿದ ವಸ್ತುಗಳನ್ನು ನಾವೆಲ್ಲರೂ ಖರೀದಿಸಬೇಕು.
ಸೈಬರ್ ಸೆಕ್ಯೂರಿಟಿಯಿಂದ ಕೃತಕ ಬುದ್ದಿಮತ್ತೆಯನ್ನು ನಾವು ಹೊಂದಿದ್ದೇವೆ. ಯುಪಿಐ ಶಕ್ತಿಯನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದೇವೆ. ಡಿಜಿಟಲ್ ವಹಿವಾಟಿನಲ್ಲಿ ಭಾರತ ಮಾತ್ರವೇ ಶೇಕಡಾ 50 ರಷ್ಟು ಕೊಡುಗೆಗಳನ್ನು ನೀಡುತ್ತಿದೆ ಎಂದಿದ್ದಾರೆ.
2047ರ ವೇಳೆಗೆ ಭಾರತವನ್ನು ಅಭಿವೃದ್ದಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಗುರಿಯನ್ನು ಹೊಂದಿದ್ದೇವೆ. ಯುವಕರ ಭವಿಷ್ಯ ಕೌಶಲ್ಯ ವೃದ್ದಿಯ ಕುರಿತು ಗಮನ ಹರಿಸುವುದಾಗಿ ಭರವಸೆಯನ್ನು ನೀಡಿದ್ದಾರೆ.
ಇದನ್ನೂ ಓದಿ : ಸುನಿಲ್ ಕುಮಾರ್ ವಿರುದ್ದ ಮುತಾಲಿಕ್ ಮಾನನಷ್ಟ ಮೊಕದ್ದಮೆ ವಜಾ
ದೇಶದ ಶಾಂತಿ ಭದ್ರತೆಗಾಗಿ ಭಾರತ ಸರಕಾರ ಕೈಗೊಂಡಿರುವ ಕ್ರಮಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ. ಆಪರೇಷನ್ ಸಿಂಧೂರ್ ಕಾರ್ಯಾಚರಣೆಯು ಭಾರತದ ಪ್ರಮುಖ ಸಾಧನೆಗಳಲ್ಲಿ ಒಂದಾಗಿದೆ ಎಂದಿದ್ದಾರೆ.
Independence Day 2025 Live PM Narendra Modi Good News in Kannada News

