ವಾಹನ ಸವಾರರೇ ಗಮನಿಸಿ: ಏಪ್ರಿಲ್ 1 ರಿಂದ ಟೋಲ್‌ನಲ್ಲಿ ನಗದು ಪಾವತಿ ಬಂದ್; Fastag ಇಲ್ಲಾಂದ್ರೆ ನೋ ಎಂಟ್ರಿ

ಏಪ್ರಿಲ್ 1 ರಿಂದ, ಟೋಲ್ ಪ್ಲಾಜಾದ ಎಲ್ಲಾ ಲೇನ್‌ಗಳು ಕೇವಲ ಫಾಸ್ಟ್ ಟ್ಯಾಗ್ ಹೊಂದಿರುವ ವಾಹನಗಳಿಗೆ ಮಾತ್ರ ಮೀಸಲಿರುತ್ತವೆ. ನಗದು ಸ್ವೀಕಾರ ಕೇಂದ್ರಗಳು ಇರುವುದಿಲ್ಲ. ಇದರಿಂದಾಗಿ ಫಾಸ್ಟ್ ಟ್ಯಾಗ್ ಇಲ್ಲದ ವಾಹನಗಳಿಗೆ ಟೋಲ್ ಒಳಗೆ ಪ್ರವೇಶವೇ ಸಿಗುವುದಿಲ್ಲ.

ನವದೆಹಲಿ : ದೇಶಾದ್ಯಂತ ರಾಷ್ರ್ಟೀಯ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನ ಸವಾರರಿಗೆ ಇದು ಮಹತ್ವದ ಸುದ್ದಿ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಟೋಲ್ ಪ್ಲಾಜಾಗಳಲ್ಲಿ ಕ್ರಾಂತಿಕಾರಿ ಬದಲಾವಣೆಯೊಂದನ್ನು ಜಾರಿಗೆ ತಂದಿದೆ. ಏಪ್ರಿಲ್ 1, 2026 ರಿಂದ ಜಾರಿಗೆ ಬರುವಂತೆ, ಟೋಲ್ ಪ್ಲಾಜಾಗಳಲ್ಲಿ ನಗದು ಪಾವತಿಯನ್ನು (Cash Payment) ಸಂಪೂರ್ಣವಾಗಿ ರದ್ದುಗೊಳಿಸಲು ನಿರ್ಧರಿಸಲಾಗಿದೆ. ಇದರರ್ಥ, ನಿಮ್ಮ ವಾಹನಕ್ಕೆ ಫಾಸ್ಟ್ ಟ್ಯಾಗ್ (Fastag) ಇಲ್ಲದಿದ್ದರೆ, ನೀವು ಟೋಲ್ ದಾಟುವುದು ಅಸಾಧ್ಯ.

ಏನಿದು ಹೊಸ ನಿಯಮ ?

ಇದುವರೆಗೆ ಫಾಸ್ಟ್ ಟ್ಯಾಗ್ ಕಡ್ಡಾಯವಾಗಿದ್ದರೂ, ಟೋಲ್ ಪ್ಲಾಜಾಗಳಲ್ಲಿ ಒಂದು ಲೇನ್ ಅನ್ನು ನಗದು ಪಾವತಿಗಾಗಿ ಮೀಸಲಿಡಲಾಗಿತ್ತು. ಆದರೆ, ಫಾಸ್ಟ್ ಟ್ಯಾಗ್ ಇಲ್ಲದ ವಾಹನಗಳು ಈ ಲೇನ್‌ನಲ್ಲಿ ದಂಡದ ರೂಪದಲ್ಲಿ ದುಪ್ಪಟ್ಟು ಟೋಲ್ ಹಣ ಪಾವತಿಸಿ ಸಂಚರಿಸಬಹುದಿತ್ತು. ಆದರೆ, ಹೊಸ ನಿಯಮದ ಪ್ರಕಾರ, ಈ ‘ಹೈಬ್ರಿಡ್ ಲೇನ್’ (ನಗದು ಲೇನ್) ವ್ಯವಸ್ಥೆಯನ್ನು ಸಂಪೂರ್ಣವಾಗಿ ತೆಗೆದುಹಾಕಲಾಗುತ್ತದೆ.

ಏಪ್ರಿಲ್ 1 ರಿಂದ, ಟೋಲ್ ಪ್ಲಾಜಾದ ಎಲ್ಲಾ ಲೇನ್‌ಗಳು ಕೇವಲ ಫಾಸ್ಟ್ ಟ್ಯಾಗ್ ಹೊಂದಿರುವ ವಾಹನಗಳಿಗೆ ಮಾತ್ರ ಮೀಸಲಿರುತ್ತವೆ. ನಗದು ಸ್ವೀಕಾರ ಕೇಂದ್ರಗಳು ಇರುವುದಿಲ್ಲ. ಇದರಿಂದಾಗಿ ಫಾಸ್ಟ್ ಟ್ಯಾಗ್ ಇಲ್ಲದ ವಾಹನಗಳಿಗೆ ಟೋಲ್ ಒಳಗೆ ಪ್ರವೇಶವೇ ಸಿಗುವುದಿಲ್ಲ.

Also Read : ಉಡುಪಿಯಲ್ಲಿ ವರುಣನ ಅಬ್ಬರ: ಸುರಿಯುವ ಮಳೆಯಲ್ಲೇ ಸಾಗಿದ ಶ್ರೀಕೃಷ್ಣನ ಚಿನ್ನದ ರಥೋತ್ಸವ

ಸರಕಾರದ ಈ ನಿರ್ಧಾರಕ್ಕೆ ಕಾರಣವೇನು?

  • ಟೋಲ್ ಸಂಚಾರ ಸುಗಮಗೊಳಿಸುವುದು: ನಗದು ಪಾವತಿಗೆ ಹೆಚ್ಚಿನ ಸಮಯ ಬೇಕಾಗುವುದರಿಂದ ಟೋಲ್ ಪ್ಲಾಜಾಗಳಲ್ಲಿ ದೀರ್ಘ ಸರತಿ ಸಾಲುಗಳು ನಿರ್ಮಾಣವಾಗುತ್ತವೆ. ಫಾಸ್ಟ್ ಟ್ಯಾಗ್ ಮೂಲಕ ಈ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡಬಹುದು.
  • ಕಡಿಮೆ ಸಮಯ, ಕಡಿಮೆ ಇಂಧನ ವ್ಯರ್ಥ: ವಾಹನಗಳು ಟೋಲ್‌ನಲ್ಲಿ ನಿಲ್ಲುವ ಸಮಯ ಕಡಿಮೆಯಾದರೆ, ಇಂಧನ ವ್ಯರ್ಥವಾಗುವುದು ಮತ್ತು ಮಾಲಿನ್ಯವೂ ಕಡಿಮೆಯಾಗುತ್ತದೆ.
  • ನಗದು ರಹಿತ ವಹಿವಾಟಿಗೆ ಉತ್ತೇಜನ: ಇದು ದೇಶವನ್ನು ಡಿಜಿಟಲ್ ಆರ್ಥಿಕತೆಯತ್ತ ಕೊಂಡೊಯ್ಯುವ ಸರ್ಕಾರದ ಪ್ರಯತ್ನದ ಒಂದು ಭಾಗವಾಗಿದೆ.

Also Read : ಉಡುಪಿ ಜಿಲ್ಲೆಯ ಮೂವರು ಪೊಲೀಸ್ ಸಾಧಕರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ

ವಾಹನ ಸವಾರರು ಏನು ಮಾಡಬೇಕು ?

ತಕ್ಷಣ ಫಾಸ್ಟ್ ಟ್ಯಾಗ್ ಅಳವಡಿಸಿ: ನಿಮ್ಮ ವಾಹನಕ್ಕೆ ಇನ್ನು ಫಾಸ್ಟ್ ಟ್ಯಾಗ್ ಇಲ್ಲದಿದ್ದರೆ, ಏಪ್ರಿಲ್ 1 ಕ್ಕೂ ಮೊದಲು ಯಾವುದೇ ಪ್ರಮುಖ ಬ್ಯಾಂಕ್‌ಗಳು ಅಥವಾ ಅಧಿಕೃತ ಏಜೆನ್ಸಿಗಳಿಂದ ತಕ್ಷಣವೇ ಪಡೆದುಕೊಂಡು ಅಳವಡಿಸಿ.

ಬ್ಯಾಲೆನ್ಸ್ ಪರಿಶೀಲಿಸಿ: ಫಾಸ್ಟ್ ಟ್ಯಾಗ್ ಹೊಂದಿದ್ದರೂ, ಅದನ್ನು ಬಳಸುವ ಮೊದಲು ಅದರಲ್ಲಿ ಸಾಕಷ್ಟು ಹಣ (Recharge balance) ಇದೆಯೇ ಎಂದು ಖಚಿತಪಡಿಸಿಕೊಳ್ಳಿ. ಟೋಲ್‌ನಲ್ಲಿ ಹಣವಿಲ್ಲದೆ ಸಿಲುಕಿಕೊಂಡರೆ, ನಿಮ್ಮ ವಾಹನವನ್ನು ಹಿಂದೆ ತಿರುಗಿಸಬೇಕಾಗಬಹುದು.

ಏಪ್ರಿಲ್ 1 ರಿಂದ ದುಪ್ಪಟ್ಟು ದಂಡ ಪಾವತಿಸಿ ಟೋಲ್ ದಾಟುವ ಅವಕಾಶವೂ ಇರುವುದಿಲ್ಲ. ನಿಮ್ಮ ವಾಹನಕ್ಕೆ ಫಾಸ್ಟ್ ಟ್ಯಾಗ್ ಇಲ್ಲದಿದ್ದರೆ, ನಿಮ್ಮ ಪ್ರಯಾಣಕ್ಕೆ ತಡೆಯಾಗಬಹುದು. ಆದ್ದರಿಂದ, ಈ ಕ್ಷಣವೇ ಈ ನಿಯಮವನ್ನು ಪಾಲಿಸಿ.

toll plaza cashless fastag mandatory April 1 new rules

Related Stories