ದೇವಸ್ಥಾನದ ಹಣ ಹಿಂದೂಗಳಿಗೇ ಸಿಗಲಿ: ವಿಹೆಚ್‌ಪಿ ಆಂದೋಲನಕ್ಕೆ ಭರದ ಸಿದ್ಧತೆ
ವಿಶ್ವ ಹಿಂದೂ ಪರಿಷತ್‌ನ ಕೇಂದ್ರ ಪ್ರಧಾನ ಕಾರ್ಯದರ್ಶಿ ಮಿಲಿಂದ್ ಪರಾಂಡೆ ಅವರು ಈ ಕುರಿತು ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೇವಸ್ಥಾನಗಳ ಮೇಲೆ ಸರ್ಕಾರದ ನಿಯಂತ್ರಣವೇಕೆ ? ಎಂದು ಪ್ರಶ್ನಿಸಿದ್ದಾರೆ.
ಭಾರತದಲ್ಲಿರುವ ಲಕ್ಷಾಂತರ ಹಿಂದೂ ದೇವಸ್ಥಾನಗಳನ್ನು ಸರಕಾರದ ಹಿಡಿತದಿಂದ ಮುಕ್ತಗೊಳಿಸಿ, ಅವುಗಳನ್ನು ಸಂಪೂರ್ಣವಾಗಿ ಹಿಂದೂ ಸಮಾಜಕ್ಕೆ ಹಸ್ತಾಂತರಿಸಬೇಕು ಎಂದು ವಿಶ್ವ ಹಿಂದೂ ಪರಿಷತ್ ಆಗ್ರಹಿಸಿದೆ. ದೇವಸ್ಥಾನದ ಆಡಳಿತದಲ್ಲಿ ಸರಕಾರದ ಹಸ್ತಕ್ಷೇಪವನ್ನು ತಕ್ಷಣವೇ ನಿಲ್ಲಿಸ ಬೇಕೆಂದು ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಎಚ್ಚರಿಕೆ ನೀಡಿದೆ.
ವಿಶ್ವ ಹಿಂದೂ ಪರಿಷತ್‌ನ ಕೇಂದ್ರ ಪ್ರಧಾನ ಕಾರ್ಯದರ್ಶಿ ಮಿಲಿಂದ್ ಪರಾಂಡೆ ಅವರು ಈ ಕುರಿತು ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೇವಸ್ಥಾನಗಳ ಮೇಲೆ ಸರ್ಕಾರದ ನಿಯಂತ್ರಣವೇಕೆ ? ಎಂದು ಪ್ರಶ್ನಿಸಿದ್ದಾರೆ. ಸಂವಿಧಾನವು ಎಲ್ಲಾ ಧರ್ಮೀಯರಿಗೂ ತಮ್ಮ ಧಾರ್ಮಿಕ ಸಂಸ್ಥೆಗಳನ್ನು ನಿರ್ವಹಿಸುವ ಹಕ್ಕನ್ನು ನೀಡಿದೆ. ಆದರೆ, ಭಾರತದಲ್ಲಿ ಮಾತ್ರವೇ ಹಿಂದೂ ದೇವಾಲಯಗಳು ಸರಕಾರದ ಸುಪರ್ದಿಯಲ್ಲಿವೆ. ಮಸೀದಿ ಅಥವಾ ಚರ್ಚ್‌ಗಳ ಆಡಳಿತದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ ಎಂದಾದರೆ, ದೇವಸ್ಥಾನಗಳ ವಿಷಯದಲ್ಲಿ ಈ ತಾರತಮ್ಯವೇಕೆ? ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇವಸ್ಥಾನಗಳ ಆದಾಯವನ್ನು ಹಿಂದೂ ಧರ್ಮದ ಪ್ರಚಾರ ಮತ್ತು ಅಭಿವೃದ್ಧಿಗೆ ಬಳಸುವ ಬದಲು, ಸರ್ಕಾರಗಳು ಬೇರೆ ಉದ್ದೇಶಗಳಿಗೆ ಬಳಸುತ್ತಿವೆ ಎಂಬ ಗಂಭೀರ ಆರೋಪವನ್ನು ಸನಾತನ ಧರ್ಮದ ಅನುಯಾಯಿಗಳು ಮಾಡುತ್ತಿದ್ದಾರೆ. ದೇವಸ್ಥಾನಗಳ ಹಣ ದೇವಸ್ಥಾನಗಳಿಗೇ ಮೀಸಲಿರಲಿ. ಭಕ್ತರು ನೀಡುವ ಕಾಣಿಕೆಯು ಗೋಶಾಲೆಗಳು, ವೇದ ಪಾಠಶಾಲೆಗಳು ಮತ್ತು ಹಿಂದೂ ಧಾರ್ಮಿಕ ಕಾರ್ಯಕ್ರಮಗಳಿಗೆ ಬಳಕೆಯಾಗಬೇಕು. ಸರ್ಕಾರದ ಬೊಕ್ಕಸ ತುಂಬಲು ದೇವಸ್ಥಾನಗಳನ್ನು ಬಳಸಿಕೊಳ್ಳುವುದು ಸರಿಯಲ್ಲ ಎಂದು ಪರಾಂಡೆ ಹೇಳಿದ್ದಾರೆ.
Also Read: ಟೋಲ್ ಸಾಲಿಗೆ ಇನ್ನು ಗುಡ್ ಬೈ! ಟೋಲ್ ಪ್ಲಾಜಾಗಳನ್ನು ತೆಗೆದುಹಾಕಲು ಕೇಂದ್ರ ಸರ್ಕಾರ ತೀರ್ಮಾನ
ದೇವಸ್ಥಾನಗಳು ಕೇವಲ ಪೂಜಾ ಸ್ಥಳಗಳಲ್ಲ, ಅವು ಸನಾತನ ಸಂಸ್ಕೃತಿ ಕೇಂದ್ರ ಬಿಂದುಗಳು. ದೇವಸ್ಥಾನದ ನಿರ್ವಹಣೆಗೆ ಭಕ್ತರು, ಸಂತರ ನೇತೃತ್ವದ ಮಂಡಳಿಗಳಿಗೆ ಹಸ್ತಾಂತರ ಮಾಡುವುದರಿಂದ ಧರ್ಮದ ಪುನರುತ್ಥಾನ ಸಾಧ್ಯ ಅನ್ನೋದು ವಿಶ್ವ ಹಿಂದೂ ಪರಿಷತ್ ನಿಲುವು. ದೇವಸ್ಥಾನಗಳನ್ನು ಸರಕಾರದಿಂದ ಮುಕ್ತಿ ದೊರಕಿಸಲು ಜನಾಂದೋಲನ ರೂಪಿಸಲು ಸಿದ್ತೆ ನಡೆಸಲಾಗುತ್ತಿದೆ. ಜಗತ್ತಿನ ಅತಿ ಪುರಾತನ ಸಂಸ್ಕೃತಿಯಾದ ಸನಾತನ ಧರ್ಮದ ರಕ್ಷಣೆಗಾಗಿ ದೇವಸ್ಥಾನಗಳು ಮುಕ್ತವಾಗುವುದು ಅನಿವಾರ್ಯವಾಗಿದೆ. ವಿಶ್ವ ಹಿಂದೂ ಪರಿಷತ್‌ನ ಈ ಅಭಿಯಾನವು ಈಗ ದೊಡ್ಡ ಮಟ್ಟದ ಕ್ರಾಂತಿಗೆ ಮುನ್ನುಡಿ ಬರೆದಿದೆ.
vhp campaign free hindu temples from government control



