ಟೆಕ್ಸಾಸ್ನ ಮನೆಯಲ್ಲಿ ಹೋಮ ಮಾಡಿಸಿದ ಭಾರತೀಯ ಕುಟುಂಬ; ಕೊನೆಗೆ ಆಗಿದ್ದೇನು ಗೊತ್ತಾ ?

ನಮ್ಮಲ್ಲಿ ಹೆಚ್ಚಾಗಿ ಶುಭ ಕಾರ್ಯಗಳನ್ನು ಮಾಡುವ ಸಮಯದಲ್ಲಿ ಹೋಮಹವನಗಳನ್ನು ಮಾಡಿಸುತ್ತಾರೆ. ಇದು ಭಾರತದಲ್ಲಿ ಹಿಂದೂಗಳ ಸಂಸ್ಕೃತಿಯಾಗಿದೆ. ಆದರೆ ಟೆಕ್ಸಾಸ್ನಲ್ಲಿರುವ ಭಾರತೀಯ ಕುಟುಂಬವೊಂದು ತಮ್ಮ ಮನೆಯಲ್ಲಿ ಹೋಮ ಹವನ ಮಾಡಿ ಅಲ್ಲಿನ ಜನರಿಂದ ಟೀಕೆಗೆ ಗುರಿಯಾಗಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಚರ್ಚೆಗೆ ಕಾರಣವಾಗಿದೆ. ಅನೇಕರು ಈ ಕೃತ್ಯವನ್ನು ಟೀಕಿಸಿದ್ದಾರೆ.
ವಿಡಿಯೊದಲ್ಲಿ ಏನಿದೆ ?
ವೈರಲ್ ಆದ ವಿಡಿಯೊದಲ್ಲಿ ಹಲವಾರು ಜನರು ‘ಹವನ ಸಮಾರಂಭ’ ನಡೆಸುತ್ತಿರುವುದನ್ನು ರೆಕಾರ್ಡ್ ಮಾಡಲಾಗಿದೆ. ಈ ನಡುವೆ ಪೂಜೆ ನಡೆಸುತ್ತಿದ್ದ ಸ್ಥಳದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ತಮ್ಮ ಟ್ರಕ್ ಜೊತೆ ಮನೆಯ ಹೊರಗೆ ಕಾಣಿಸಿಕೊಂಡಿದ್ದಾರೆ. ಹಾಗೂ ಮನೆಯವರ ಜೊತೆ ಸಿಬ್ಬಂದಿಗಳು ಮಾತುಕತೆ ನಡೆಸುವುದನ್ನು ಸೆರೆಹಿಡಿಯಲಾಗಿದೆ.
ನಡೆದಿದ್ದೇನು ?
ಟೆಕ್ಸಾಸ್ನಲ್ಲಿ ನೆಲೆಸಿರುವ ಭಾರತೀಯ ಕುಟುಂಬವೊಂದು ತಮ್ಮ ಹೊಸ ಮನೆಯ ಗೃಹಪ್ರವೇಶದ ಸಮಯದಲ್ಲಿ ‘ಹವನ ಸಮಾರಂಭ’ ನಡೆಸಿದೆ. ಈ ವೇಳೆ ಮನೆಯಲ್ಲಾ ಹೊಗೆಯಿಂದ ತುಂಬಿಕೊಂಡಿದ್ದರಿಂದ ನೆರೆಹೊರೆಯವರು ಮನೆಗೆ ಬೆಂಕಿ ಬಿದ್ದಿದೆ ಎಂದು ಭಾವಿಸಿ ಅಗ್ನಿಶಾಮಕ ದಳಕ್ಕೆ ದೂರು ನೀಡಿದ್ದಾರೆ.
ನೆರೆಹೊರೆಯವರು ನೀಡಿದ ದೂರಿನ ಮೇರೆಗೆ ನಗರದ ಅಗ್ನಿಶಾಮಕ ದಳದವರು ಪವಿತ್ರ ಸಮಾರಂಭಕ್ಕೆ ಭೇಟಿ ನೀಡಿದ್ದಾರೆ. ನಂತರ ಅಗ್ನಿಶಾಮಕ ದಳದ ಅಧಿಕಾರಿಗಳು ಭಾರತೀಯ ಕುಟುಂಬದೊಂದಿಗೆ ಮಾತುಕತೆ ನಡೆಸಿ ಅಲ್ಲಿಂದ ಹೋಗಿದ್ದಾರೆ.
ಆದರೆ ಕುಟುಂಬವು ಸ್ಥಳೀಯ ಅಗ್ನಿ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದ್ದಕ್ಕೆ ಯಾವುದೇ ಕ್ರಮ ಕೈಗೊಳ್ಳಲಾಗಿದೆಯೇ ಎಂಬ ಬಗ್ಗೆ ಯಾವುದೇ ವರದಿಗಳಿಲ್ಲ. ಘಟನಾ ಸ್ಥಳದಿಂದ ರೆಕಾರ್ಡ್ ಮಾಡಲಾದ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರ ಟೀಕೆಗೆ ಗುರಿಯಾಗುತ್ತಿದೆ.
ಈ ವಿಡಿಯೊಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನೇಕರು ಕುಟುಂಬವು ತಮ್ಮ ಮನೆಯಲ್ಲಿ ಪೂಜೆ ಮಾಡಿದ್ದಕ್ಕಾಗಿ ಪ್ರಶ್ನಿಸಿದರೆ, ಇತರರು ತಮ್ಮ ಧಾರ್ಮಿಕ ಪದ್ಧತಿಗಳನ್ನು ಪಾಲಿಸುವ ಹಕ್ಕನ್ನು ಸಮರ್ಥಿಸಿಕೊಂಡರು.
ಅಗ್ನಿ ದೇವರಿಗೆ ಪ್ರಾರ್ಥನೆ ಸಲ್ಲಿಸುವುದು ತಪ್ಪಲ್ಲ. ಸ್ಥಳೀಯ ಅಧಿಕಾರಿಗಳಿಗೆ ತಿಳಿಸದಿರುವುದು ಮತ್ತು ಸುರಕ್ಷತಾ ಕ್ರಮಗಳು ಮತ್ತು ಇತರ ವಿವರಗಳೊಂದಿಗೆ ಅನುಮೋದನೆ ಮತ್ತು ಅನುಮತಿಯನ್ನು ಪಡೆಯದಿರುವುದು ತಪ್ಪು ಮತ್ತು ಇದು ಸಮುದಾಯವನ್ನು ಕಡೆಗಣಿಸುವ ಕೃತ್ಯ” ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
Also Read : ಸ್ನೇಹಿತನ ಹಲ್ಲು ಹರಿತಗೊಳಿಸಲು ಈತ ಮಾಡಿದ್ದೇನು ? ನೋಡಿದ್ರೆ ಅಚ್ಚರಿಯಾಗೋದು ಪಕ್ಕಾ
ಮತ್ತೊಬ್ಬರು, “ಬೆಂಕಿಯೊಂದಿಗೆ ಆಟವಾಡುವುದನ್ನು ನಿಲ್ಲಿಸಿ. ಆ ಮನೆಗಳನ್ನು ಮರದಿಂದ ನಿರ್ಮಿಸಲಾಗಿದೆ. ಸ್ವಲ್ಪ ಸಾಮಾನ್ಯ ಜ್ಞಾನವಿರುವ ಜನರಂತೆ ವರ್ತಿಸಿ” ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, “ನೀವು ವಾಸಿಸುವ ದೇಶವನ್ನು ಗೌರವಿಸಿ, ಇದನ್ನೆಲ್ಲಾ ಮಾಡಲು ಬಯಸಿದರೆ, ಅದು ಸಾಮಾನ್ಯವಾಗಿರುವ ದೇಶಕ್ಕೆ ಹೋಗಿ” ಎಂದು ಬರೆದಿದ್ದಾರೆ.
ಒಬ್ಬರು ಈ ಕೃತ್ಯವನ್ನು ಸಮರ್ಥಿಸಿಕೊಂಡು “ಆ ಕುಟುಂಬವನ್ನು ನಿಂದಿಸುವ ಎಲ್ಲರೂ ಮೂಲಭೂತ ಅಂಶಗಳನ್ನು ಕಲಿಯಬೇಕು. ಈ ಜನರು ಯಾರಿಗೂ ನೋವುಂಟು ಮಾಡಿಲ್ಲ ಅಥವಾ ಜನರಿಗೆ ಅಥವಾ ಆಸ್ತಿಗೆ ಹಾನಿ ಮಾಡುವ ಏನನ್ನೂ ಮಾಡಿಲ್ಲ. ಅವರು ಈಗ ತಮ್ಮ ಗ್ಯಾರೇಜ್ನಲ್ಲಿ ಸರಳ ಪೂಜೆ ಮಾಡುತ್ತಿದ್ದರು” ಎಂದು ಹೇಳಿದ್ದಾರೆ.
ಭಾರತೀಯ-ಅಮೇರಿಕನ್ ನೆಟ್ಟಿಗರೊಬ್ಬರು, “ನಾನು ಮೊದಲ ತಲೆಮಾರಿನ ಭಾರತೀಯ ಅಮೇರಿಕನ್ ಆಗಿ ಹುಟ್ಟಿ ಬೆಳೆದವನು, ಮತ್ತು ಇದನ್ನು ನೋಡಲು ನನಗೆ ತುಂಬಾ ಹೆಮ್ಮೆಯಾಗುತ್ತದೆ. ವಾಸಿಸುವ ಮನೆ ಹಾಗ ಖರೀದಿಸಿದ ಎಲ್ಲಾ ಕಾರುಗಳಿಗೆ ಪೂಜೆ ಮಾಡಿಸಿದ್ದೇನೆ. ಪ್ರತಿ ಪರೀಕ್ಷೆ ಅಥವಾ ದೊಡ್ಡ ಉದ್ಯೋಗ ಸಂದರ್ಶನಕ್ಕೂ ಪ್ರಾರ್ಥನೆ ಸಲ್ಲಿಸುತ್ತೇನೆ” ಎಂದು ಬರೆದಿದ್ದಾರೆ.
Also Read : ವಿಶ್ವದ ಅತೀ ದೊಡ್ಡ ತುಟಿ ಹೊಂದಿದ ಮಹಿಳೆ
Indian family held a funeral in their Texas home; do you know what happened in the end?



