LIC ಯಿಂದ 841 ವಿವಿಧ ಹುದ್ದೆಗಳ ನೇಮಕಾತಿ: ಯುವ ಪದವೀಧರರಿಗೆ ಗುಡ್ ನ್ಯೂಸ್!
LIC Recruitment 2025: ಸರ್ಕಾರಿ ಉದ್ಯೋಗದ ಹುಡುಕಾಟದಲ್ಲಿರುವ ಯವ ಪದವೀಧರರಿಗೆ ಗುಡ್ ನ್ಯೂಸ್. ಭಾರತದ ಅತಿ ದೊಡ್ಡ ಜೀವ ವಿಮಾ ನಿಗಮ ಎಲ್‌ಐಸಿ (LIC) ಸಹಾಯಕ ಆಡಳಿತಾಧಿಕಾರಿ (AAO) ಮತ್ತು ಸಹಾಯಕ ಎಂಜಿನಿಯರ್ (AE) ಹುದ್ದೆಗಳಿಗೆ ನೇಮಕಾತಿ ಪ್ರಕಟಣೆಯನ್ನು ಹೊರಡಿಸಿದೆ.
ಈ ನೇಮಕಾತಿ ಪ್ರಕ್ರಿಯೆಯಲ್ಲಿ ಒಟ್ಟು 841 ವಿವಿಧ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಹ ಅಭ್ಯರ್ಥಿಗಳು ಎಲ್‌ಐಸಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಕೆಯು ಆಗಸ್ಟ್ 16 ರಿಂದ ಪ್ರಾರಂಭವಾಗಿದ್ದು ಅಭ್ಯರ್ಥಿಗಳು ಸೆಪ್ಟೆಂಬರ್ 8 ರ ಒಳಗೆ ಸೂಕ್ತ ಮಾಹಿತಿಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.
LIC AAO ಮತ್ತು AE ಹುದ್ದೆಗಳಿಗೆ ಅರ್ಹತೆ ಮತ್ತು ಮಾನದಂಡಗಳು
ಹುದ್ದೆಯ ಹೆಸರು
ಸಹಾಯಕ ಆಡಳಿತಾಧಿಕಾರಿ (AAO) ಮತ್ತು ಸಹಾಯಕ ಎಂಜಿನಿಯರ್ (AE)
ಒಟ್ಟು ಹುದ್ದೆಗಳು
841
ಶೈಕ್ಷಣಿಕ ಅರ್ಹತೆ
ಸಹಾಯಕ ಆಡಳಿತಾಧಿಕಾರಿ (AAO) ಮತ್ತು ಸಹಾಯಕ ಎಂಜಿನಿಯರ್ (AE) ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಪದವಿಯಲ್ಲಿ ಉತ್ತೀರ್ಣರಾಗಿರಬೇಕು. ಇದಲ್ಲದೇ ಕೆಲವು ಹುದ್ದೆಗಳಿಗೆ ಅಭ್ಯರ್ಥಿಯು 5 ವರ್ಷಗಳ ಕೆಲಸದ ಅನುಭವದೊಂದಿಗೆ ಪದವಿ/CA ಅಥವಾ CS ನಲ್ಲಿ ಪದವಿ ಇತ್ಯಾದಿಗಳನ್ನು ಹೊಂದಿರಬೇಕು. AAO (ಕಾನೂನು) ಹುದ್ದೆಗಳಿಗೆ ಅರ್ಜಿ ಸಲ್ಲಿಸಲು, ಅಭ್ಯರ್ಥಿಯು LLB ಉತ್ತೀರ್ಣರಾಗಿರಬೇಕು. ಸಹಾಯಕ ಎಂಜಿನಿಯರ್ ಹುದ್ದೆಗಳಿಗೆ, ಅಭ್ಯರ್ಥಿಯು ಸಂಬಂಧಿತ ಕ್ಷೇತ್ರದಲ್ಲಿ BE/BTech ಉತ್ತೀರ್ಣರಾಗಿರಬೇಕು.
ವಯೋಮಿತಿ
ಸಹಾಯಕ ಆಡಳಿತಾಧಿಕಾರಿ (AAO) ಮತ್ತು ಸಹಾಯಕ ಎಂಜಿನಿಯರ್ (AE) ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 21 ವರ್ಷಗಳು ಹಾಗೂ ಗರಿಷ್ಠ ವಯಸ್ಸು 30 ವರ್ಷಗಳು. ನಿಯಮಾನುಸಾರ ಮೀಸಲು ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆಯಿರುತ್ತದೆ.
ಇದನ್ನೂ ಓದಿ: ಸರ್ಕಾರಿ ಉದ್ಯೋಗ ಪಡೆಯಲು ಸುವರ್ಣಾವಕಾಶ! ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿದೆ 500 ಜನರಲಿಸ್ಟ್ ಆಫೀಸರ್ ಹುದ್ದೆ
ಅರ್ಜಿ ಶುಲ್ಕ
SC/ST/PwBD: ರೂ 85 + ವಹಿವಾಟು ಶುಲ್ಕಗಳು + GST
ಇತರ ಅಭ್ಯರ್ಥಿಗಳು: ರೂ 700 + ವಹಿವಾಟು ಶುಲ್ಕಗಳು + GST
ಆಯ್ಕೆ ಪ್ರಕ್ರಿಯೆ
ಈ ಹುದ್ದೆಗಳ ನೇಮಕಾತಿಗೆ ಆಯ್ಕೆ ಪ್ರಕ್ರಿಯೆಯು 3 ಹಂತಗಳನ್ನು ಒಳಗೊಂಡಿದೆ:
- ಪೂರ್ವಭಾವಿ ಪರೀಕ್ಷೆ
- ಮುಖ್ಯ ಪರೀಕ್ಷೆ
- ಸಂದರ್ಶನ, ನಂತರ ನೇಮಕಾತಿ ಪೂರ್ವ ವೈದ್ಯಕೀಯ ಪರೀಕ್ಷೆ
ಅರ್ಜಿ ಸಲ್ಲಿಕೆ ಹೇಗೆ?
ಅರ್ಜಿ ನಮೂನೆಯನ್ನು ಭರ್ತಿ ಮಾಡಲು ಮೊದಲಿಗೆ ಎಲ್‌ಐಸಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು.
ಮುಖಪುಟದಲ್ಲಿರುವ ಹೊಸ ನೋಂದಣಿಯನ್ನು ಕ್ಲಿಕ್ಕಿಸಿ ಅಲ್ಲಿ ವಿವರಗಳನ್ನು ನೀಡಿ ಹೆಸರನ್ನು ನೋಂದಾಯಿಸಿಕೊಳ್ಳಬೇಕು.
ನಂತರ ಸೂಕ್ತ ಮಾಹಿತಿಗಳನ್ನು ನೀಡಿ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು.
ಸಹಿ ಮತ್ತು ಫೋಟೋವನ್ನು ಅಪ್‌ಲೋಡ್ ಮಾಡಬೇಕು.
ನಿಗದಿತ ಅರ್ಜಿ ಶುಲ್ಕವನ್ನು ಪಾವತಿಸಬೇಕು
ಇದಾದನಂತರ ಅಂತಿಮವಾಗಿ ಅರ್ಜಿಯನ್ನು ಸಲ್ಲಿಸಬೇಕು.
ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿ ಸಲ್ಲಿಸಿದ ಪ್ರತಿಯ ಪ್ರಿಂಟ್‌ಔಟ್ ತೆಗುದುಕೊಳ್ಳಬೇಕು.
ಎಲ್‌ಐಸಿಯ ನೇಮಕಾತಿ ಪ್ರಕಟಣೆಗಾಗಿ ಇಲ್ಲಿ ಕ್ಕಿಕ್ಕಿಸಿ
ಇದನ್ನೂ ಓದಿ: ಸೆಂಟ್ರಲ್ ರೇಲ್ವೆಯಲ್ಲಿ ನೇಮಕಾತಿ : ಎಸ್‌ಎಸ್‌ಎಲ್‌ಸಿ, ಪಿಯಸಿ ಆದವರಿಗೆ ಗುಡ್ ನ್ಯೂಸ್ !
(LIC Recruitment 2025 Application invited for LIC AAO and AE total 841 posts)



