NTPC Recruitment 2026: ಎಂಜಿನಿಯರಿಂಗ್ ಪದವೀಧರರಿಗೆ 250 ಹುದ್ದೆಗಳು; 55,000 ರೂ. ವೇತನ!
NTPC Recruitment 2026: ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 55,000 ರೂ. ನಿಗದಿತ ವೇತನ ನೀಡಲಾಗುವುದು. ಇದರೊಂದಿಗೆ ಮನೆ ಬಾಡಿಗೆ ಭತ್ಯೆ (HRA) ಅಥವಾ ವಸತಿ ಸೌಕರ್ಯ, ರಾತ್ರಿ ಪಾಳಿ ಭತ್ಯೆ ಹಾಗೂ ಕುಟುಂಬದ ಸದಸ್ಯರಿಗೆ ವೈದ್ಯಕೀಯ ವಿಮಾ ಸೌಲಭ್ಯಗಳು ಲಭ್ಯವಿರುತ್ತವೆ.
ಭಾರತದ ಪ್ರಮುಖ ಇಂಧನ ಕಂಪನಿಯಾದ ಎನ್‌ಟಿಪಿಸಿ (NTPC) ಲಿಮಿಟೆಡ್, 250 ಸಹಾಯಕ ಕಾರ್ಯನಿರ್ವಾಹಕ (Assistant Executive) ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಅರ್ಹ ಎಂಜಿನಿಯರಿಂಗ್ ಪದವೀಧರರಿಗೆ ಇದು ಸರ್ಕಾರಿ ಸ್ವಾಮ್ಯದ ಪ್ರತಿಷ್ಠಿತ ಕಂಪನಿಯಲ್ಲಿ ವೃತ್ತಿಜೀವನ ಆರಂಭಿಸಲು (NTPC Recruitment 2026) ಸುವರ್ಣ ಅವಕಾಶವಾಗಿದೆ.
ನೇಮಕಾತಿಯ ಪ್ರಮುಖ ವಿವರಗಳು:
-
ಹುದ್ದೆಯ ಹೆಸರು: ಸಹಾಯಕ ಕಾರ್ಯನಿರ್ವಾಹಕ (Assistant Executive).
-
ಒಟ್ಟು ಹುದ್ದೆಗಳು: 250.
-
ಶೈಕ್ಷಣಿಕ ಅರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ ಅಥವಾ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಕನಿಷ್ಠ ಶೇ. 40 ಅಂಕಗಳೊಂದಿಗೆ ಬಿ.ಇ ಅಥವಾ ಬಿ.ಟೆಕ್ ಪದವಿ ಪಡೆದಿರಬೇಕು.
-
ಅನುಭವ: 40 ಮೆಗಾವ್ಯಾಟ್ ಅಥವಾ ಅದಕ್ಕಿಂತ ಹೆಚ್ಚಿನ ಸಾಮರ್ಥ್ಯದ ವಿದ್ಯುತ್ ಸ್ಥಾವರದ ಕಾರ್ಯಾಚರಣೆ ಅಥವಾ ನಿರ್ವಹಣೆಯಲ್ಲಿ ಕನಿಷ್ಠ ಒಂದು ವರ್ಷದ ಅನುಭವ ಕಡ್ಡಾಯ.
-
ವಯೋಮಿತಿ: ಗರಿಷ್ಠ 35 ವರ್ಷಗಳು.
ವೇತನ ಮತ್ತು ಸೌಲಭ್ಯಗಳು:
ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 55,000 ರೂ. ನಿಗದಿತ ವೇತನ ನೀಡಲಾಗುವುದು. ಇದರೊಂದಿಗೆ ಮನೆ ಬಾಡಿಗೆ ಭತ್ಯೆ (HRA) ಅಥವಾ ವಸತಿ ಸೌಕರ್ಯ, ರಾತ್ರಿ ಪಾಳಿ ಭತ್ಯೆ ಹಾಗೂ ಕುಟುಂಬದ ಸದಸ್ಯರಿಗೆ ವೈದ್ಯಕೀಯ ವಿಮಾ ಸೌಲಭ್ಯಗಳು ಲಭ್ಯವಿರುತ್ತವೆ. ಆರಂಭದಲ್ಲಿ ಈ ನೇಮಕಾತಿಯು 3 ವರ್ಷಗಳ ಅವಧಿಗೆ ಇರಲಿದ್ದು, ಅಗತ್ಯಕ್ಕೆ ಅನುಗುಣವಾಗಿ ಇನ್ನೂ 2 ವರ್ಷ ವಿಸ್ತರಿಸುವ ಅವಕಾಶವಿದೆ.
ಅರ್ಜಿ ಶುಲ್ಕ:
-
ಸಾಮಾನ್ಯ, ಒಬಿಸಿ ಮತ್ತು ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ: 500 ರೂ.
-
ಮಹಿಳೆಯರು, ಎಸ್ಸಿ, ಎಸ್ಟಿ, ಅಂಗವಿಕಲರು ಮತ್ತು ಮಾಜಿ ಸೈನಿಕರಿಗೆ: ಯಾವುದೇ ಶುಲ್ಕವಿಲ್ಲ.
ಉದ್ಯೋಗಿಗಳ ಗಮನಕ್ಕೆ: 5 ವರ್ಷಕ್ಕಿಂತ ಮೊದಲು 5 ಲಕ್ಷ ರೂ PF ಹಿಂಪಡೆದರೆ 1.5 ಲಕ್ಷ ರೂ. ನಷ್ಟ ಸಂಭವ!
ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತರು ಎನ್‌ಟಿಪಿಸಿಯ ಅಧಿಕೃತ ವೆಬ್‌ಸೈಟ್ careers.ntpc.co.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
-
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮೇ 7, 2026.
ಹೆಚ್ಚಿನ ಮಾಹಿತಿಗಾಗಿ ಮತ್ತು ಅಧಿಕೃತ ಅಧಿಸೂಚನೆಯನ್ನು ಓದಲು ಅಭ್ಯರ್ಥಿಗಳು ಎನ್‌ಟಿಪಿಸಿ ವೆಬ್‌ಸೈಟ್‌ಗೆ ಭೇಟಿ ನೀಡಲು ಸೂಚಿಸಲಾಗಿದೆ.



