PGCIL ನೇಮಕಾತಿ: 1543 ಫೀಲ್ಡ್ ಎಂಜಿನಿಯರ್, ಫೀಲ್ಡ್ ಸೂಪರ್ವೈಸರ್ ಹುದ್ದೆಗೆ ಇಂದೇ ಅರ್ಜಿ ಸಲ್ಲಿಸಿ
PGCIL Recruitment 2025: ಉತ್ತಮ ಉದ್ಯೋಗದ ಹುಡುಕಾಟದಲ್ಲಿರುವ ಅಭ್ಯರ್ಥಿಗಳಿಗೆ ಇದೀಗ ಸುವರ್ಣಾವಕಾಶ ಒದಗಿ ಬಂದಿದೆ. ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (PGCIL) ಅತಿ ದೊಡ್ಡ ನೇಮಕಾತಿ ಪ್ರಕಟಣೆಯನ್ನು ಬಿಡುಗಡೆ ಮಾಡಿದೆ.
ಭಾರತದ ಸರ್ಕಾರದ ಈ ಕಂಪನಿಯಲ್ಲಿ 1543 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆಯು ಆಗಸ್ಟ್ 27 ರಿಂದ ಪ್ರಾರಂಭವಾಗಿದೆ.
ಆಸಕ್ತ ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್ 17 ರೊಳಗೆ ಪಿಜಿಸಿಐಎಲ್ನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.
PGCIL Recruitment 2025: ಅರ್ಹತೆ ಮತ್ತು ಮಾನದಂಡಗಳು
ಹುದ್ದೆಯ ಹೆಸರು
ಫೀಲ್ಡ್ ಎಂಜಿನಿಯರ್ (ಎಲೆಕ್ಟ್ರಿಕ್)/ಫೀಲ್ಡ್ ಎಂಜಿನಿಯರ್ (ಸಿವಿಲ್)/ ಫೀಲ್ಡ್ ಸೂಪರ್ವೈಸರ್ (ಎಲೆಕ್ಟ್ರಿಕ್)
ಒಟ್ಟು ಹುದ್ದೆಗಳು
1543
ಇದನ್ನೂ ಓದಿ: ರೈಲ್ವೆ ನೇಮಕಾತಿಯಿಂದ ಶಾರ್ಟ್ ನೋಟಿಫಿಕೇಷನ್ ಪ್ರಕಟ: 368 ಸೆಕ್ಷನ್ ಕಂಟ್ರೋಲರ್ ಹುದ್ದೆಗೆ ಅರ್ಜಿ ಸಲ್ಲಿಸಲು ರೆಡಿಯಾಗಿ
ಶೈಕ್ಷಣಿಕ ಅರ್ಹತೆ
ಪವರ್ಗ್ರಿಡ್ ನೇಮಕಾತಿಯಲ್ಲಿ ಫೀಲ್ಡ್ ಎಂಜಿನಿಯರ್ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿಇ/ಬಿಟೆಕ್/ಬಿಎಸ್ಸಿ ಪದವಿಯನ್ನು ಪಡೆದಿರಬೇಕು. ಇದರ ಜೊತೆಗೆ 1 ವರ್ಷದ ಕೆಲಸದ ಅನುಭವವನ್ನು ಹೊಂದಿರಬೇಕು.
ವಯೋಮಿತಿ
ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಕನಿಷ್ಠ ವಯಸ್ಸು ಗರಿಷ್ಠ ವಯಸ್ಸು 29 ವರ್ಷಗಳು. ಮೀಸಲು ವರ್ಗದ ಅಭ್ಯರ್ಥಿಗಳಿಗೆ ನಿಯಮಾನುಸಾರ ಗರಿಷ್ಠ ವಯಸ್ಸಿನಲ್ಲಿ ಸಡಿಲಿಕೆಯಿರುತ್ತದೆ.
ವೇತನ
ಫೀಲ್ಡ್ ಎಂಜಿನಿಯರ್ ಹುದ್ದೆಗೆ ವಾರ್ಷಿಕ 8.9 ಲಕ್ಷ ಸಿಟಿಸಿ ಹಾಗೂ ಫೀಲ್ಡ್ ಸೂಪರ್ವೈಸರ್ ಹುದ್ದೆಗೆ 6.8 ಲಕ್ಷ ರೂ. ಸಿಟಿಸಿ ಎಂದು ನಿಗದಿಪಡಿಸಲಾಗಿದೆ.
ಅರ್ಜಿ ಶುಲ್ಕ
ಫೀಲ್ಡ್ ಎಂಜಿನಿಯರ್ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು 400 ರೂ. ಅರ್ಜಿ ಶುಲ್ಕವನ್ನು ಮತ್ತು ಫೀಲ್ಡ್ ಸೂಪರ್ವೈಸರ್ ಹುದ್ದೆಗೆ ಅರ್ಜಿ ಶುಲ್ಕ 300 ರೂ. ಪಾವತಿಸಬೇಕಾಗುತ್ತದೆ. ಎಸ್ಸಿ/ಎಸ್ಟಿ/ಪಿಡಬ್ಲ್ಯೂಬಿಡಿ/ಮಾಜಿ ಸೈನಿಕರಿಗೆ ಅರ್ಜಿ ಶುಲ್ಕದಲ್ಲಿ ವಿನಾಯಿತಿ ನೀಡಲಾಗುತ್ತದೆ.
ಪಿಜಿಸಿಐಎಲ್ ನೇಮಕಾತಿ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ಕಿಸಿ
ಅರ್ಜಿ ಸಲ್ಲಿಕೆ ಹೇಗೆ
– ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಪಿಜಿಸಿಐಲ್ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು.
– ಪವರ್ಗ್ರಿಡ್ ಪೋರ್ಟಲ್ನಲ್ಲಿ ನೋಂದಾಯಿತ ಮೊಬೈಲ್/ಇಮೇಲ್ ನೀಡಿ ನಿಮ್ಮ ಹೆಸರನ್ನು ನೋಂದಾಯಿಸಿ.
– ಲಾಗಿನ್ ಆದ ನಂತರ ಅರ್ಜಿ ನಮೂನೆಯಲ್ಲಿರುವ ಮಾಹಿತಿಗಳನ್ನು ಭರ್ತಿ ಮಾಡಬೇಕು.
– ಬಳಿಕ ನಿಮ್ಮ ಇತ್ತೀಚೆಗಿನ ಭಾವಚಿತ್ರ ಹಾಗೂ ಅಂಕಪಟ್ಟಿ ಮತ್ತು ಇತರೆ ದಾಖಲೆಗಳನ್ನು ಅಪ್ಲೋಡ್ ಮಾಡಿ.
– ಕೊನೆಗೆ ಅರ್ಜಿ ಶುಲ್ಕವನ್ನು ಪಾವತಿಸಿ ಅರ್ಜಿ ನಮೂನೆಯನ್ನು ಸಲ್ಲಿಸಿಬೇಕು.
– ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿ ಸಲ್ಲಿಸಿದ ಪ್ರತಿಯ ಪ್ರಿಂಟ್ಔಟ್ ತೆಗೆದುಕೊಳ್ಳಿ.
ಇದನ್ನೂ ಓದಿ: 394 ಜೂನಿಯರ್ ಆಫಿಸರ್ ಇಂಟೆಲಿಜನ್ಸ್ ಹುದ್ದೆಗೆ ಇಂದೇ ಅರ್ಜಿ ಸಲ್ಲಿಸಿ
(PGCIL Recruitment 2025 apply for the post Field Engineer and Field Supervisor job)



