RBI Job: ಭಾರತೀಯ ರಿಸರ್ವ್ ಬ್ಯಾಂಕ್(Reserve Bank) ಬ್ಯಾಂಕ್ ವೈದ್ಯಕೀಯ ಸಲಹೆಗಾರ ಸ್ಥಾನಕ್ಕೆ 2 ಅರೆಕಾಲಿಕ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮೂರು ವರ್ಷಗಳ ಅವಧಿಗೆ ಒಪ್ಪಂದದ ಮೇಲೆ ನೇಮಕಾತಿ ಮಾಡಲಾಗುತ್ತದೆ.
ಅರ್ಹ ಅಭ್ಯರ್ಥಿಗಳು ನವೆಂಬರ್ 14ರ ಒಳಗಾಗಿ ಅರ್ಜಿ ಸಲ್ಲಿಕೆ ಮಾಡಬೇಕಿದೆ. ಅರ್ಜಿಯನ್ನು ಪ್ರಾದೇಶಿಕ ನಿರ್ದೇಶಕರು, ಮಾನವ ಸಂಪನ್ಮೂಲ ನಿರ್ವಹಣಾ ಇಲಾಖೆ, ಭಾರತೀಯ ರಿಸರ್ವ್ ಬ್ಯಾಂಕ್, 4 ನೇ ಮಹಡಿ, ಮುಖ್ಯ ಕಚೇರಿ ಕಟ್ಟಡ, ಗಾಂಧಿ ಸೇತುವೆ ಹತ್ತಿರ, ಅಹಮದಾಬಾದ್ – 380014 ಗೆ ತಲುಪಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಸೂಚನೆ ನೀಡಿದೆ.
ಅರ್ಹತೆ :
ಅರ್ಜಿದಾರರು ಭಾರತೀಯ ವೈದ್ಯಕೀಯ ಮಂಡಳಿಯಿಂದ ಮಾನ್ಯತೆ ಪಡೆದ ಅಲೋಪತಿ ಪದ್ಧತಿಯ ವೈದ್ಯಕೀಯ ಕ್ಷೇತ್ರದಲ್ಲಿ ಯಾವುದೇ ವಿಶ್ವವಿದ್ಯಾಲಯದಿಂದ ಎಂಬಿಬಿಎಸ್ ಪದವಿಯನ್ನು ಹೊಂದಿರಬೇಕು.
ಜನರಲ್ ಮೆಡಿಸಿನ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದ ಅರ್ಜಿದಾರರು ಸಹ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.ಯಾವುದೇ ಆಸ್ಪತ್ರೆ ಅಥವಾ ಚಿಕಿತ್ಸಾಲಯದಲ್ಲಿ ವೈದ್ಯಕೀಯ ವೃತ್ತಿಪರರಾಗಿ ಅಲೋಪತಿ ಪದ್ಧತಿಯ ವೈದ್ಯಕೀಯ ಅಭ್ಯಾಸದಲ್ಲಿ ಕನಿಷ್ಠ ಎರಡು ವರ್ಷಗಳ ಅನುಭವ ಹೊಂದಿರಬೇಕು.ಅರ್ಜಿದಾರರು ತಮ್ಮ ಔಷಧಾಲಯ ಅಥವಾ ವಾಸಸ್ಥಳವನ್ನು ಬ್ಯಾಂಕಿನ ಔಷಧಾಲಯಗಳಿಂದ 10-15 ಕಿ.ಮೀ ವ್ಯಾಪ್ತಿಯಲ್ಲಿ ಹೊಂದಿರಬೇಕು.
Also Read: ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ: ಏಕಲವ್ಯ ಮಾದರಿ ವಸತಿ ಶಾಲೆಗೆ ಇಂದೇ ಅರ್ಜಿ ಸಲ್ಲಿಸಿ
ವೇತನ ಶ್ರೇಣಿ :
ಮೂರು ವರ್ಷಗಳ ಒಪ್ಪಂದದ ಅವಧಿಯಲ್ಲಿ ಪ್ರತಿ ಗಂಟೆಗೆ 1 ಸಾವಿರ ರೂಪಾಯಿ ಸಂಬಳ ನೀಡಲಾಗುತ್ತದೆ. ಮಾಸಿಕ ಸಂಭಾವನೆಯಲ್ಲಿ ಹೆಚ್ಚುವರಿ 1 ಸಾವಿರ ರೂಪಾಯಿ ಸಾಗಣೆ ವೆಚ್ಚವಾಗಿ ನೀಡಲಾಗುತ್ತದೆ. ಮತ್ತು ತಿಂಗಳಿಗೆ 1000 ರೂಪಾಯಿ ಮೊಬೈಲ್ ಸಿಮ್ ರೀಚಾರ್ಜ್ಗೆಂದು ನೀಡಲಾಗುತ್ತದೆ. ಒಪ್ಪಂದದ ಆಧಾರದ ಮೇಲೆ ತೊಡಗಿಸಿಕೊಂಡಿರುವ ಬಿಎಂಸಿಗೆ ಬೇರೆ ಯಾವುದೇ ಸೌಲಭ್ಯಗಳು/ಸವಲತ್ತುಗಳನ್ನು ಪಾವತಿಸಲಾಗುವುದಿಲ್ಲ.
ಆಯ್ಕೆ ಮಾಡುವ ವಿಧಾನ :
ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳಿಗೆ ಬ್ಯಾಂಕ್ ಸಂದರ್ಶನ ಮತ್ತು ದಾಖಲೆ ಪರಿಶೀಲನೆಯನ್ನು ನಡೆಸಲಿದೆ.
Also Read: ಕೇಂದ್ರೀಯ ವಿಶ್ವವಿದ್ಯಾಲಯದ ಉಪಕುಲಪತಿ ಹುದ್ದೆಗೆ ಅರ್ಜಿ ಆಹ್ವಾನ : ಅರ್ಹತೆಗಳೇನು


