ಎಸ್‌ಬಿಐನಲ್ಲಿ ಸ್ಪೆಷಲಿಸ್ಟ್ ಕೇಡರ್‌ ಆಫೀಸರ್ ಆಗುವ ಸುವರ್ಣಾವಕಾಶ: ನವೆಂಬರ್‌ 17 ರ ಒಳಗೆ ಅರ್ಜಿ ಸಲ್ಲಿಸಿ

SBI SCO Recruitment 2025: ಭಾರತದ ಪ್ರತಿಷ್ಠಿತ ಬ್ಯಾಂಕ್‌ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ನಲ್ಲಿ ಕೆಲಸ ಮಾಡಬೇಕೆಂಬ ಕನಸು ನಿಮ್ಮದಾಗಿದ್ದರೆ, ಈಗ ಅದನ್ನು ನನಸು […]

SBI SCO Recruitment 2025

SBI SCO Recruitment 2025: ಭಾರತದ ಪ್ರತಿಷ್ಠಿತ ಬ್ಯಾಂಕ್‌ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ನಲ್ಲಿ ಕೆಲಸ ಮಾಡಬೇಕೆಂಬ ಕನಸು ನಿಮ್ಮದಾಗಿದ್ದರೆ, ಈಗ ಅದನ್ನು ನನಸು ಮಾಡಿಕೊಳ್ಳಲು ಉತ್ತಮ ಅವಕಾಶ ಒದಗಿ ಬಂದಿದೆ.

ಅದೇನೆಂದರೆ ಎಸ್‌ಬಿಐ 103 ಸ್ಪೆಷಲಿಸ್ಟ್ ಕೇಡರ್‌ ಆಫೀಸರ್ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ.

ಸ್ಪೆಷಲಿಸ್ಟ್ ಕೇಡರ್‌ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಅಕ್ಟೋಬರ್‌ 27 ರಿಂದ ಪ್ರಾರಂಭವಾಗಿದೆ. ಆಸಕ್ತ, ಅರ್ಹ ಅಭ್ಯರ್ಥಿಗಳು ಎಸ್‌ಬಿಐನ್‌ ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಅಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ ನವೆಂಬರ್‌ 17, 2025 ಆಗಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ಅರ್ಹತಾ ಮಾನದಂಡಗಳನ್ನು ತಿಳಿಯೋಣ.

ಹುದ್ದೆಯ ಹೆಸರು ಮತ್ತು ವಿವರ

ಹೆಡ್‌ – 1 ಹುದ್ದೆ
ಝೋನಲ್‌ ಹೆಡ್‌ – 4 ಹುದ್ದೆಗಳು
ರೀಜನಲ್‌ ಹೆಡ್‌ – 7 ಹುದ್ದೆಗಳು
ರಿಲೇಶನ್‌ಶಿಪ್‌ ಮ್ಯಾನೇಜರ್‌ – 19 ಹುದ್ದೆಗಳು
ಇನ್ವೆಸ್ಟ್‌ಮೆಂಟ್‌ ಸ್ಪೆಷಲಿಸ್ಟ್‌ – 46 ಹುದ್ದೆಗಳು
ಪ್ರೊಜೆಕ್ಟ್‌ ಡೆವಲಪ್‌ಮೆಂಟ್‌ ಮ್ಯಾನೇಜರ್‌– 2 ಹುದ್ದೆಗಳು
ಸೆಂಟ್ರಲ್‌ ರಿಸರ್ಚ್‌ ಟೀಮ್‌ – 2 ಹುದ್ದೆಗಳು

ಇದನ್ನೂ ಓದಿ: ಉದ್ಯೋಗಾಕಾಂಕ್ಷಿಗಳ ಗಮನಕ್ಕೆ : HALನಲ್ಲಿ ಅಪ್ರೈಂಟಿಸ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ

ಶೈಕ್ಷಣಿಕ ಅರ್ಹತೆ

ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾನಿಲಯದಿಂದ ಪದವಿ, ಸ್ನಾತಕೋತ್ತರ ಡಿಪ್ಲೊಮಾ ಅಥವಾ ಸ್ನಾತಕೋತ್ತರ ಪದವಿ ಹೊಂದಿರಬೇಕು.

ವಯೋಮಿತಿ

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ವಯಸ್ಸಿನ ಮಿತಿಯನ್ನು ಆಯಾ ಹುದ್ದೆಗಳಿಗೆ ಅನುಸಾರವಾಗಿ ನಿಗದಿಪಡಿಸಲಾಗಿದೆ.

ಮೇಲೆ ತಿಳಿಸಿದ ಹುದ್ದೆಗಳಿಗೆ ಕ್ರಮವಾಗಿ ಅಭ್ಯರ್ಥಿಗಳ ಕನಿಷ್ಠ ವಯಸ್ಸು 25, 28, 30 ಮತ್ತು 35 ವರ್ಷಗಳು. ಅದೇ ರೀತಿ ಗರಿಷ್ಠ ವಯೋಮಿತಿ 35, 40, 42 ಮತ್ತು 50 ವರ್ಷಗಳು.

ಅರ್ಜಿ ಶುಲ್ಕ

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿಸಬೇಕಾಗುತ್ತದೆ. ಸಾಮಾನ್ಯ, ಇಡಬ್ಲ್ಯೂಎಸ್ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 750 ರೂ.ಗಳು.

ಆದರೆ ಎಸ್‌ಸಿ, ಎಸ್‌ಟಿ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಲ್ಲಿ ವಿನಾಯಿತಿ ಇರುತ್ತದೆ.

ಎಸ್‌ಬಿಐ ಸ್ಪೆಷಲಿಸ್ಟ್ ಕೇಡರ್ ಆಫೀಸರ್ ಹುದ್ದೆ ನೇಮಕಾತಿ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ಕಿಸಿ.

ಅರ್ಜಿ ಸಲ್ಲಿಕೆ ಹೇಗೆ?

  • ಎಸ್‌ಬಿಐನ ಸ್ಪೆಷಲಿಸ್ಟ್ ಕೇಡರ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅ‌ಭ್ಯರ್ಥಿಗಳು ಮೊದಲಿಗೆ ಎಸ್‌ಬಿಐನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
  • ನಂತರ, ವೆಬ್‌ಸೈಟ್‌ನ ಮುಖಪುಟದಲ್ಲಿ ಕೇಳಲಾದ ಮಾಹಿತಿಯನ್ನು ನಮೂದಿಸುವ ಮೂಲಕ ನೋಂದಣಿ ಮಾಡಿಕೊಳ್ಳಿ.
  • ಈಗ ಅಗತ್ಯವಿರುವ ದಾಖಲೆಗಳು, ಸಹಿ ಮತ್ತು ಫೋಟೋದ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್‌ಲೋಡ್ ಮಾಡಿ.
  • ಬಳಿಕ ನಿಗದಿತ ಪರೀಕ್ಷಾ ಶುಲ್ಕವನ್ನು ಪಾವತಿಸಿ.
  • ಕೊನೆಯದಾಗಿ ಇನ್ನೊಮ್ಮೆ ಫಾರ್ಮ್ ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಅರ್ಜಿ ಸಲ್ಲಿಸಿ.
  • ಅಂತಿಮವಾಗಿ, ಭವಿಷ್ಯದ ಉಲ್ಲೇಖಕ್ಕಾಗಿ ಅದರ ಮುದ್ರಣವನ್ನು ತೆಗೆದುಕೊಳ್ಳಿ.

ಇದನ್ನೂ ಓದಿ: ಗುಪ್ತಚರ ಸಂಸ್ಥೆಯಲ್ಲಿ ಟೆಕ್ ಗ್ರೇಡ್ II ನೇಮಕಾತಿ: ಎಂಜಿನಿಯರಿಂಗ್ ಪದವೀಧರರು ಇಂದೇ ಅರ್ಜಿ ಸಲ್ಲಿಸಿ

(Registration Start for the SBI Specialist Cadre Officers Posts apply within November 17)

Scroll to Top